Breaking ಶಿವಮೊಗ್ಗದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

By Sathish Kumar KH  |  First Published Aug 13, 2024, 1:43 PM IST

ಶಿವಮೊಗ್ಗದಲ್ಲಿ ಹೋಟೆಲ್ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದ ಕುಟುಂಬದ ಮೂವರು ವಿಷಪ್ರಾಷನ ಮಾಡಿ ಸಾವಿಗೀಡಾಗಿದ್ದಾರೆ.


ಶಿವಮೊಗ್ಗ (ಆ.13): ಹೋಟೆಲ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯಲ್ಲಿ ಘಟನೆ ನಡೆದಿದೆ. ಭುವನೇಶ್ವರಿ, ಮಾರುತಿ, ಹಾಗೂ ದರ್ಶನ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಒಟಿ ರಸ್ತೆಯ ವಿಜಯ ಗ್ಯಾರೇಜ್ ಬಳಿ ಮನೆಯಲ್ಲಿ ಘಟನೆ ನಡೆದಿದೆ. ನಿನ್ನೆ ನಡೆದ ಘಟನೆ ಇಂದ ಬೆಳಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಅವರ ಸಂಬಂಧಿಕರು ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಬಂದು ಪರಿಶೀಲನೆ ಮಾಡಿದ್ದಾರೆ. ಆಗ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಳಿದುಬಂದಿದೆ.

Tap to resize

Latest Videos

 

ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೊಡ್ಡಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಭುವನೇಶ್ವರಿ ಜೊತೆಗೆ ಅವರ ತಮ್ಮ ಮಾರುತಿ ಹಾಗೂ ಪುತ್ರ ದರ್ಶನ್ ವಾಸವಾಗಿದ್ದರು. ಸ್ಥಳಕ್ಕೆ ದೊಡ್ಡಪೇಟೆ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಮೃತ ಕುಟುಂಬದ ಮನೆಯೊಡತಿ  ಭುವನೇಶ್ವರಿ ಶಿವಮೊಗ್ಗದ ಹೋಟೆಲ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ರಾಯಚೂರು : ಸಹ ಶಿಕ್ಷಕಿಗೆ ರಾತ್ರಿ ಮಲಗಲಿಕ್ಕೆ ಬಾ ಎಂದು ಕರೆದ ಮುಖ್ಯಶಿಕ್ಷಕ ಮೆಹಬೂಬ್ ಅಲಿ

ಇನ್ನು ಭುವನೇಶ್ವರಿಯ ಸಹೋದರ ಮಾರುತಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದನು. ಆದರೆ, ಈತ ಬಹುದಿನಗಳಿಂದ ಟಿ.ಬಿ. ಕಾಯಿಲೆಯಿಂದ ಬಳಲುತ್ತಿದ್ದನು. ಮತ್ತೊಂದೆಡೆ ಭುನೇಶ್ವರಿಯ ಮಗ ದರ್ಶನ್ ಗುಜರಿ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದನು. ಮೂವರು ಕೂಡ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಮೂವರೂ ಸಾವಿಗೆ ಶರಣಾಗಿರುವುದಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಇನ್ನು ಘಟನಾ ಸ್ಥಳಕ್ಕೆ ಶಿವಮೊಗ್ಗ ಡಿ ವೈ ಎಸ್ ಪಿ ಬಾಬು ಅಂಜನಪ್ಪ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

click me!