Shivamogga Harsha murder case: ರಕ್ತಸಿಕ್ತ ಪೋಟೋ ಅಪ್‌ಲೋಡ್ ಪ್ರಕರಣಕ್ಕೆ ಸಂಬಂಧಿಸಿದತೆ ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ
ಶಿವಮೊಗ್ಗ (ಜು. 01): ಹತ್ಯೆಯಾದ ಹಿಂದೂ ಹರ್ಷನ ( Harsha Murder Case) ರಕ್ತಸಿಕ್ತ ಪೋಟೋ ಅಪ್‌ಲೋಡ್ ಪ್ರಕರಣಕ್ಕೆ ಸಂಬಂಧಿಸಿದತೆ ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ. ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ (Instagram Status) ರಕ್ತ ಸಿಕ್ತನಾಗಿ ಬಿದ್ದ ಹರ್ಷನ ಫೊಟೊ ಜೊತೆಗೆ ನಾಲ್ವರು ತಮ್ಮ ಫೊಟೊ ಅಪಲೋಡ್ ಮಾಡಿದ್ದರು. ಈ ಬೆನ್ನಲ್ಲೇ ಪೋಲಿಸರು ಕೋಮು ಸೌಹಾರ್ಧತೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಿದ್ದು, ನಾಲ್ವರು ಅಪ್ರಾಪ್ತ ಬಾಲಕರ ವಿರುದ್ಧ ಸುಮೋಟೊ (Suo Moto) ಪ್ರಕರಣ ದಾಖಲಾಗಿದೆ.
ನಾಲ್ವರಲ್ಲಿ ಇಬ್ಬರನ್ನ ವಶಕ್ಕೆ ಪಡೆದು ಪೋಲಿಸರು ವಿಚಾರಣೆ ನಡೆಸಿದ್ದಾರೆ. ಪಿಐ ಸಂಜೀವ್ ಕುಮಾರ್ ಗಸ್ತಿನಲ್ಲಿದ್ದಾಗ ರಾಗಿಗುಡ್ಡದ ಬಳಿ ನಾಲ್ವರು ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದರು. ಒರ್ವನ ಬಳಿಯಿದ್ದ ಮೊಬೈಲ್ ಪೋನಿನಲ್ಲಿ ಹತ್ಯೆಯಾದ ಹರ್ಷ ರಕ್ತಸಿಕ್ತವಾಗಿ ಬಿದ್ದಿರುವ ಪೋಟೊ ಜೊತೆಗೆ ಟ್ಯಾಗ್ ಲೈನ್ ಹಾಕಲಾಗಿತ್ತು.
ಕೋಮು ಸೌಹಾರ್ದತೆಗೆ ಧಕ್ಕೆ ತರುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು ಸ್ಟೇಟಸ್ ಹಾಕಿ ಹೆಸರು ಮಾಡಲು ಹೊರಟಿದ್ದ ನಾಲ್ವರು ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 'ತುಂಬಾ ಒಳ್ಳೆ ಕೆಲಸ ಮಾಡಿದ್ದಿ ಬ್ರದರ್': ಫೇಸ್‌ಬುಕ್‌ನಲ್ಲಿ ಕನ್ಹಯ್ಯಾ ಹತ್ಯೆ ವಿಡಿಯೋ ಹೊಗಳಿದ ವ್ಯಕ್ತಿ ಬಂಧನ!