ಪೊಲೀಸರು ಬೆನ್ನುಹತ್ತಿದ್ದು ಒಂದು, ಸಿಕ್ಕಿದ್ದು ಮೂರು! ಶಿರಾಳಕೊಪ್ಪದ ಖತರ್ನಾಕ್ ಕಳ್ಳ ಅರೆಸ್ಟ್!

By Ravi Janekal  |  First Published Jun 9, 2023, 10:18 AM IST

ಜಿಲ್ಲೆಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಳವಾಗಿದ್ದು, ನಗರ ಪೊಲೀಸರು ಅಲರ್ಟ್ ಆಗಿದ್ದಾರೆ. ಇತ್ತೀಚೆಗೆ ಬೈಕ್ ಕಳವು ಮಾಡಿದ್ದ ಖತರ್ನಾಕ ಬೈಕ್‌ ಕಳ್ಳನನ್ನು ಹಿಡಿಯುವಲ್ಲಿ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ. ವಿವಿಧೆಡೆ ಬೈಕ್ ಕಳವು ಮಾಡಿದ್ದ ಆರೋಪಿ.


ಶಿವಮೊಗ್ಗ (ಜೂ.9) : ಜಿಲ್ಲೆಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಳವಾಗಿದ್ದು, ನಗರ ಪೊಲೀಸರು ಅಲರ್ಟ್ ಆಗಿದ್ದಾರೆ. ಇತ್ತೀಚೆಗೆ ಬೈಕ್ ಕಳವು ಮಾಡಿದ್ದ ಖತರ್ನಾಕ ಬೈಕ್‌ ಕಳ್ಳನನ್ನು ಹಿಡಿಯುವಲ್ಲಿ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ. ವಿವಿಧೆಡೆ ಬೈಕ್ ಕಳವು ಮಾಡಿದ್ದ ಆರೋಪಿ.

ಶಿರಾಳಕೊಪ್ಪ ಪಟ್ಟಣದ ನೆಹರು ಕಾಲೋನಿ ನಿವಾಸಿ ಜಿಯಾವುಲ್ಲಾ ಯಾನೆ ಜಿಯಾ (31) ಬಂಧಿತ ಆರೋಪಿ. ಆರೋಪಿಯಿಂದ ಸುಮಾರು 1.19 ಲಕ್ಷ ರೂ. ಮೌಲ್ಯದ 3 ಬೈಕ್ ಗಳನ್ನು ವಶಕ್ಕೆ ಪಡೆದ ಪೊಲೀಸರು.

Tap to resize

Latest Videos

 

ಕಲಬುರಗಿಯಲ್ಲಿ ಮನೆ​ಗ​ಳ್ಳನ ಬಂಧ​ನ: ಚಿನ್ನಾ​ಭ​ರಣ ಜಪ್ತಿ

ಪೊಲೀಸ್ ಬೆನ್ನು ಹತ್ತಿದ್ದು ಒಂದು, ಪತ್ತೆಯಾಗಿದ್ದು ಮೂರು!

ಇತ್ತೀಚೆಗೆ ಶಿರಾಳಕೊಪ್ಪದ ಬಸ್ ನಿಲ್ದಾಣದ ಬಳಿ ಸ್ಪ್ಲೆಂಡರ್ ಬೈಕ್ ವೊಂದು ಕಳವು ಮಾಡಲಾಗಿತ್ತು. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು. ಬೈಕ್ ಕಳ್ಳನನ್ನು ಸೆರೆಹಿಡಿಯಲು ವಿಶೇಷ ತಂಡ ರಚನೆ ಮಾಡಲಾಗಿತ್ತು. ಇನ್ಸ್‌ಪೆಕ್ಟರ್ ರುದ್ರೇಶ್, ಸಬ್ ಇನ್ಸಪೆಕ್ಟರ್ ಮಂಜುನಾಥ್ ಕುರಿ  ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಆರಂಭಿಸಿದ್ದರು. ಕಾರ್ಯಾಚರಣೆ ವೇಳೆ ಜಿಯಾವುಲ್ಲಾನನ್ನು ಬೆನ್ನತ್ತಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದ ಪೊಲೀಸರು. ಈ ವೇಳೆ ಹಲವು ಬೈಕ್ ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿವೆ. 

ಆರೋಪಿಯು ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿ, ದಾವಣಗೆರೆ ಜಿಲ್ಲೆಯ ಬಸವನಗರ ಠಾಣಾ ವ್ಯಾಪ್ತಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಬೈಕ್ ಕಳವು ಮಾಡಿದ್ದ ಬಗ್ಗೆ ಬಾಯಿಬಿಟ್ಟಿರೋ ಆರೋಪಿ. ಸದ್ಯ ವಿಚಾರಣೆಗೊಳಪಡಿಸಲಾಗಿದೆ. ಇನ್ನೂ ಹಲವು ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆ.

ಬೈಕ್ ಕಳ್ಳತನ: ಇಬ್ಬರ ಬಂಧನ, 8 ಬೈಕ್‌ ಜಪ್ತಿ

ಕಲ​ಬು​ರ​ಗಿ (ಜೂ.9) : ನಗರದ ವಿವಿಧ ಕಡೆ ಬೈಕ್‌ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಿಲ್ಲತ್‌ ನಗರದ ಶೇಖ್‌ ಖಾಜಾಪಾಶ ಅಲಿಯಾಸ್‌ ಸೋಹೆಲ್‌ (22) ಮತ್ತು ಬುಲಂದ್‌ ಪರ್ವೇಜ್‌ ಕಾಲೋನಿಯ ರೆಹಾನ್‌ ಪಟೇಲ್‌ (19) ಎಂಬುವವರನ್ನು ಬಂಧಿಸಿ 4.10 ಲಕ್ಷ ರೂ.ಮೌಲ್ಯದ ವಿವಿಧ ಕಂಪನಿಯ 8 ಬೈಕ್‌ ಜಪ್ತಿ ಮಾಡಿದ್ದಾರೆ.

 

Bengaluru Airport: ವಿಮಾನ ಪ್ರಯಾಣಿಕನ ಬ್ಯಾಗ್‌ನಿಂದ 2 ಐಫೋನ್‌ ಕದ್ದ ಕೆಂಪೇಗೌಡ ಏರ್‌ಪೋರ್ಟ್ ಸಿಬ್ಬಂದಿ

ಸಿದ್ಧಾರ್ಥ ನಗರದ ಪ್ರಕಾಶ ಪೂಜಾರಿ ಎಂಬುವವರು ಆಳಂದ್‌ ಚೆಕ್‌ ಪೋಸ್ಟ… ಹತ್ತಿರದ ಉಡುಪಿ ಹೋಟೆಲ್‌ ಎದರುಗಡೆ ನಿಲ್ಲಿಸಿದ ಬೈಕ್‌ ಕಳವಾದ ಬಗ್ಗೆ ಸಬ್‌ ಅರ್ಬನ್‌ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಈ ದೂರಿನ ಅನ್ವಯ ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು, ಐ.ಎ.ಚಂದ್ರಪ್ಪ, ಸಬ್‌ ಅರ್ಬನ್‌ ಉಪ ವಿಭಾಗದ ಎಸಿಪಿ ಗೀತಾ ಬೇನಾಳ ಅವರ ಮಾರ್ಗದರ್ಶನದಲ್ಲಿ ಪಿಐ ಬಸವರಾಜು ಅವರ ನೇತೃತ್ವದಲ್ಲಿ ಪಿಎಸ…ಐ ಸುರೇಶ ಬಿಜ್ಜರಗಿ ಅವರ ನೇತೃತ್ವದಲ್ಲಿ ಎಎಸ…ಐ ಹುಸೇನ ಭಾಷಾ, ಅಶೋಕ, ಸಿರಾಜ್‌ ಪಟೇಲ…, ಮಲ್ಲಿಕಾರ್ಜುನ, ಅನೀಲ, ನಾಗೇಂದ್ರ, ಪ್ರಕಾಶ, ಅನೀಲ ರಾಠೋಡ್‌ ಅವರನ್ನೊಳಗೊಂಡ ಪ್ರತ್ಯೇಕ ತಂಡ ತನಿಖೆ ನಡೆಸಿ ಬೈಕ್‌ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

click me!