ಮಂಗಳೂರು ಬಾಂಬ್‌ ಸ್ಫೋಟ: ಮತ್ತೆ ಶಾರೀಕ್‌ ವಿಚಾರಣೆ

By Kannadaprabha NewsFirst Published Dec 1, 2022, 9:30 AM IST
Highlights

ಚೇತರಿಕೆ, ನಿಧಾನವಾಗಿ ವಿಚಾರಣೆಗೆ ಶಾರೀಕ್‌ ಸ್ಪಂದನೆ, ಹಣದ ಮೂಲದ ಬಗ್ಗೆ ಪೊಲೀಸರ ತನಿಖೆ

ಮಂಗಳೂರು(ಡಿ.01): ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಕ್ಕರ್‌ ಬಾಂಬ್‌ದ ರೂವಾರಿ, ಶಂಕಿತ ಉಗ್ರ ಶಾರೀಕ್‌ನ್ನು ಮೂರನೇ ದಿನ ಬುಧವಾರವೂ ಪೊಲೀಸ್‌ ತಂಡ ವಿಚಾರಣೆ ನಡೆಸಿತು. ಸುಟ್ಟಗಾಯಗಳಿಗೆ ಒಳಗಾಗಿರುವ ಆತ ವಿಚಾರಣೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪೂರ್ಣ ಗುಣಮುಖನಾದ ಬಳಿಕ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

ಶಂಕಿತ ಉಗ್ರ ಶಾರೀಕ್‌ಗೆ ಬರುತ್ತಿದ್ದ ಹಣದ ಮೂಲದ ಬಗ್ಗೆ ಮಾಹಿತಿ ಪೊಲೀಸ್‌ ತನಿಖಾ ತಂಡ ಮಾಹಿತಿ ಕಲೆ ಹಾಕುತ್ತಿದೆ. ಮೈಸೂರಿನಲ್ಲಿ 40ಕ್ಕೂ ಅಧಿಕ ಮಂದಿಯ ವಿಚಾರಣೆ ನಡೆಸುತ್ತಿದೆ. ಈತ ಮೈಸೂರಿನ ಹಲವರ ಬ್ಯಾಂಕ್‌ ಖಾತೆಗೆ ಹಣ ಹಾಕಿಸಿರುವ ಮಾಹಿತಿ ಲಭ್ಯವಾಗಿದೆ. ಶಂಕಿತ ಉಗ್ರ ಶಾರೀಕ್‌ಗೆ ಬರುತ್ತಿದ್ದ ಹಣದ ಮೂಲದ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ಡಾರ್ಕ್ ವೆಬ್‌ ಮೂಲಕ ಅಕೌಂಟ್‌ ತೆರೆದಿರುವ ಶಾರೀಕ್‌ ಡಾಲರ್‌ಗಳ ಮೂಲಕ ಹಣ ವರ್ಗಾವಣೆ ನಡೆಸುತ್ತಿದ್ದ. ಡಾಲರ್‌ಗಳನ್ನು ಭಾರತೀಯ ಕರೆನ್ಸಿಯಾಗಿ ಪರಿವರ್ತಿಸಿ ಹಲವಾರು ಅಕೌಂಟ್‌ಗಳಿಗೆ ಹಣ ವರ್ಗಾಯಿಸುತ್ತಿದ್ದ. ಜಾರ್ಖಂಡ್‌, ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಶಾರೀಕ್‌ನ ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Mangaluru Bomb Blast: ಶಾರೀಕ್‌ಗಿತ್ತು ಶರಿಯಾ ಕಾನೂನು ಜಾರಿ ಇಚ್ಛೆ!

ಪೊಲೀಸರು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವ ಮೊದಲೇ ಎನ್‌ಐಎ ತಂಡ ಶಾರೀಕ್‌ನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಂಗಳೂರು ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಹಸ್ತಾಂತರಿಸಲು ಈಗಾಗಲೇ ಅಂತಿಮ ಸಿದ್ಧತೆ ನಡೆದಿದೆ.
 

click me!