ಬೆಂಗಳೂರಿನ ಅಪಾರ್ಟ್‌ಮೆಂಟ್‌ ಮೇಲೆ ಎನ್‌ಸಿಬಿ ದಾಳಿ: ಡ್ರಗ್ ಸೇವನೆ ಮಾಡ್ತಿದ್ದ ಮೂವರು ಯುವತಿಯರು ಅರೆಸ್ಟ್‌

By Girish GoudarFirst Published Dec 1, 2022, 8:12 AM IST
Highlights

ಮಡಿವಾಳ ಠಾಣಾ ವ್ಯಾಪ್ತಿಯ ಜೋಲೋ ಡೆಸ್ಟಿನಿ ಮ್ಯಾನೇಜಿಂಗ್ ಅಪಾರ್ಟ್‌ಮೆಂಟ್‌ ಮೇಲೆ ಎನ್‌ಸಿಬಿ ಅಧಿಕಾರಿಗಳ ದಾಳಿ 

ಬೆಂಗಳೂರು(ಡಿ.01): ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರ ಮೇಲೆ ಎನ್‌ಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಮಡಿವಾಳ ಠಾಣಾ ವ್ಯಾಪ್ತಿಯ ಜೋಲೋ ಡೆಸ್ಟಿನಿ ಮ್ಯಾನೇಜಿಂಗ್ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ಮಾಡಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಕೆಲ ಯುವತಿಯರು ಡ್ರಗ್ ಸೇವನೆ ಮಾಡ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ದಾಳಿ ವೇಳೆ ಉತ್ತರ ಭಾರತ ಮೂಲದ ಮೂವರು ಯುವತಿಯರನ್ನ ವಶಕ್ಕೆ ಪಡೆಯಲಾಗಿದೆ. ಮೂವರಲ್ಲಿ ಓರ್ವ ಯುವತಿ ಡಾರ್ಕ್‌ವೆಬ್‌ಗೂ ಲಿಂಕ್ ಇರುವ ಮಾಹಿತಿ ಲಭ್ಯವಾಗಿದೆ. ಬಂಧಿತ ಯುವತಿ ಡಾರ್ಕ್‌ವೆಬ್‌ ಮೂಲಕ ಡ್ರಗ್ ತರಿಸಿಕೊಳ್ತಿದ್ದಳು ಅಂತ ತಿಳಿದು ಬಂದಿದೆ. ಯುವತಿ ಎಂಬಿಎ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಳು.  

88 ಕೆಜಿ ಗಾಂಜಾ ಸೇರಿ 5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಎನ್‌ಸಿಬಿ: ಮೂವರ ಬಂಧನ

ಅಪಾರ್ಟ್‌ಮೆಂಟ್‌ನಲ್ಲಿ ಯುವತಿಯರು ಡ್ರಗ್ ಸೇವನೆ ಮಾಡ್ತಿದ್ದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದು ಇನೋವಾ, ಎರಡು ಬುಲೆರೋ ವಾಹನಗಳಲ್ಲಿ ಅಧಿಕಾರಿಗಳು ಬಂದು ದಾಳಿ ಮಾಡಿದ್ದಾರೆ. ಸದ್ಯ ಮೂವರನ್ನೂ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಅಂತ ತಿಳಿದು ಬಂದಿದೆ. 
 

click me!