Bengaluru: ಚಿಕಿತ್ಸೆಗೆ ಬಂದ ಯುವತಿ ಗುಪ್ತಾಂಗ ಮುಟ್ಟಿ ಕಾಮುಕ ವೈದ್ಯನಿಂದ ವಿಕೃತಿ

By Govindaraj S  |  First Published Oct 8, 2022, 10:37 AM IST

ಚಿಕಿತ್ಸೆಗೆ ಬಂದಿದ್ದ ಯುವತಿಗೆ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಚಂದ್ರಾಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 19 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಚಂದ್ರಾಲೇಔಟ್‌ನ ಅರುಂಧತಿ ನಗರದ ‘ಇಂಡಿಯನ್‌ ಕ್ಲಿನಿಕ್‌’ನ ವೈದ್ಯ ಉಬೇದುಲ್ಲಾ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.


ಬೆಂಗಳೂರು (ಅ.08): ಚಿಕಿತ್ಸೆಗೆ ಬಂದಿದ್ದ ಯುವತಿಗೆ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಚಂದ್ರಾಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 19 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಚಂದ್ರಾಲೇಔಟ್‌ನ ಅರುಂಧತಿ ನಗರದ ‘ಇಂಡಿಯನ್‌ ಕ್ಲಿನಿಕ್‌’ನ ವೈದ್ಯ ಉಬೇದುಲ್ಲಾ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಸದ್ಯ ಆತ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿ ಸೆ.28ರಂದು ತಾಯಿಯ ಜತೆಗೆ ‘ಇಂಡಿಯನ್‌ ಕ್ಲಿನಿಕ್‌’ಗೆ ಹೋಗಿದ್ದಳು. ತಪಾಸಣೆ ಮಾಡಿದ ವೈದ್ಯ ಉಬೇದುಲ್ಲಾ ಗ್ಲೂಕೋಸ್‌ ಹಾಕಿದ್ದಾನೆ. ಈ ವೇಳೆ ಯುವತಿಯ ಕೈ ಹಾಗೂ ಕೆನ್ನೆ ಮುಟ್ಟಿಅಸಹ್ಯವಾಗಿ ವರ್ತಿಸಿದ್ದಾನೆ. ಹೊಟ್ಟೆನೋವಿಂದ ಸುಸ್ತಾಗಿದ್ದ ಯುವತಿ ಯಾವುದೇ ಪ್ರತಿರೋಧ ತೋರದೆ ಮನೆಗೆ ಹೋಗಿದ್ದಾಳೆ. ಸೆ.29ರಂದು ಕ್ಲಿನಿಕ್‌ಗೆ ಬಂದಾಗಲೂ ವೈದ್ಯ ಅಸಭ್ಯವಾಗಿ ವರ್ತಿಸಿದ್ದಾನೆ. ಆದರೂ ಯುವತಿ ಹೆದರಿ ಯಾರಿಗೂ ಹೇಳದೆ ಮನೆಗೆ ಹೋಗಿದ್ದಾಳೆ.

Tap to resize

Latest Videos

ಸದಾ ಮಡಿ, ಮೈಲಿಗೆ ಎನ್ನುತ್ತಿದ್ದ ತಾಯಿಯ ಹತ್ಯೆ: ಮಗಳು, ಮೊಮ್ಮಗ ಅರೆಸ್ಟ್‌

ಸೆ.30ರಂದು ಅಜ್ಜಿ ಮತ್ತು ಸಹೋದರ ಜತೆ ಕ್ಲಿನಿಕ್‌ ಬಂದಾಗ, ವೈದ್ಯ ಉಬೇದುಲ್ಲಾ ಗ್ಲೂಕೋಸ್‌ ಹಾಕಿದ್ದಾನೆ. ಈ ವೇಳೆ ಜತೆಯಲ್ಲಿದ್ದ ಯುವತಿಯ ಸಹೋದರ ಮತ್ತು ಅಜ್ಜಿಯನ್ನು ಹೊರಗೆ ಕಳುಹಿಸಿದ್ದಾನೆ. ಬಳಿಕ ಯುವತಿಯ ಜತೆ ಮಾತು ಆರಂಭಿಸಿ ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಯುವತಿ ಪ್ರತಿರೋಧವೊಡ್ಡಲು ಮುಂದಾದಾಗ, ಕೈ ಅಲುಗಾಡಿಸಿದರೆ, ಗ್ಲೂಕೋಸ್‌ ಪೈಪ್‌ನಲ್ಲಿ ರಕ್ತ ಬರಲಿದೆ ಎಂದು ಹೆದರಿಸಿದ್ದಾನೆ.

ಈ ಘಟನೆಯನ್ನು ಯಾರಿಗೂ ಹೇಳಬೇಡ ಎಂದು ಯುವತಿಗೆ ತಾಕೀತು ಮಾಡಿದ್ದಾನೆ. ಬಳಿಕ ಯುವತಿ ಮನೆಗೆ ಹೋಗಿದ್ದಾಳೆ. ಎರಡು ದಿನದ ಬಳಿಕ ಮನೆಯವರು ಮತ್ತೆ ಕ್ಲಿನಿಕ್‌ ಕರೆದೊಯ್ಯಲು ಮುಂದಾದಾಗ, ವೈದ್ಯನ ದೌರ್ಜನ್ಯದ ಬಗ್ಗೆ ಸಹೋದರರ ಬಳಿ ಯುವತಿ ಹೇಳಿಕೊಂಡಿದ್ದಾಳೆ. ಇದರಿಂದ ಅಕ್ರೋಶಗೊಂಡ ಸಹೋದರರು ಕ್ಲಿನಿಕ್‌ ಬಳಿ ಬಂದು ಗಲಾಟೆ ಮಾಡಿದ್ದಾರೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವೈದ್ಯನ ಬಂಧನಕ್ಕೆ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ಪನ ಸಾಲ ತೀರುತ್ತದೆಂದು ಬಾಲಕನಿಗೆ ಬೆತ್ತಲೆ ಪೂಜೆ: ನಿನ್ನನ್ನು ಬೆತ್ತಲೆ ಪೂಜೆ ಮಾಡಿದರೆ ನಿಮ್ಮಪ್ಪ ಮಾಡಿದ ಸಾಲ ತೀರುತ್ತದೆ ಹಾಗೂ ಕೈತುಂಬಾ ಹಣ ಬರುತ್ತದೆ’ ಎಂದು ನಂಬಿಸಿ ಬಾಲಕನ ಬೆತ್ತಲೆ ಪೂಜೆ ಮಾಡಿ, ಅದನ್ನು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದೆ. ಸುಮಾರು ಮೂರು ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದಿರುವ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಗಳ ವಿರುದ್ಧ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಪ್ಪಳ ತಾಲೂಕಿನ ಹಾಸಗಲ್‌ ಗ್ರಾಮದ ಕುಟುಂಬವೊಂದು ಉದ್ಯೋಗ ಅರಸಿ ಹುಬ್ಬಳ್ಳಿಗೆ ತೆರಳಿತ್ತು. ತಂದೆಯ ಜೊತೆಗೆ 15 ವರ್ಷದ ಬಾಲಕ ಕೂಡ ಹುಬ್ಬಳ್ಳಿಗೆ ತೆರಳಿದ್ದ. 

ಡಬಲ್ ಮರ್ಡರ್‌ಗೆ ಬೆಚ್ಚಿಬಿದ್ದ ಸುಳೇಭಾವಿ: ಪೊಲೀಸ್ ಬಿಗಿ ಬಂದೋಬಸ್ತ್!

ಇವರ ಜೊತೆಗೆ ಇನ್ನೊಂದಿಷ್ಟು ಜನ ಕೂಡ ತೆರಳಿದ್ದರು. ಇವರೆಲ್ಲಾ ಹುಬ್ಬಳ್ಳಿಯಲ್ಲಿ ರೂಮೊಂದರಲ್ಲಿ ವಾಸವಾಗಿದ್ದರು. ಈ ಮಧ್ಯೆ, ರೂಮಿನಲ್ಲಿದ್ದ ಮೂವರು, ‘ನಿನ್ನನ್ನು ಬೆತ್ತಲೆ ಪೂಜೆ ಮಾಡಿದರೆ ನಿಮ್ಮಪ್ಪ ಮಾಡಿದ ಸಾಲ ತೀರುತ್ತದೆ ಹಾಗೂ ಕೈತುಂಬಾ ಹಣ ಬರುತ್ತದೆ’ ಎಂದು ನಂಬಿಸಿ, ಬಾಲಕನನ್ನು ಬೆತ್ತಲೆಗೊಳಿಸಿದ್ದಾರೆ. ಬಳಿಕ, ಬಾಲಕನ ಗುಪ್ತಾಂಗಗಳನ್ನು ಪೂಜೆ ಮಾಡಿ, ವಿಕೃತಿ ಮೆರೆದಿದ್ದಾರೆ. ಅಲ್ಲದೆ, ಇದನ್ನು ವೀಡಿಯೋ ಮಾಡಿದ್ದಾರೆ. ಸರಿ ಸುಮಾರು ಮೂರು ತಿಂಗಳ ಬಳಿಕ ಈ ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದ ಮನನೊಂದ ಬಾಲಕನ ತಂದೆ, ಭಾನುವಾರ ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ.

click me!