ದಾವಣಗೆರೆ (ನ.19) : ಏಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಎಸಗಿದ 65 ವರ್ಷದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರು.ಗಳ ದಂಡ ವಿಧಿಸಿ, ಸಂತ್ರಸ್ತೆಗೆ 2 ಲಕ್ಷ ರು. ಪರಿಹಾರ ನೀಡುವಂತೆ ಜಿಲ್ಲಾ ಮತ್ತು ಸತ್ರ ಮಕ್ಕಳ ಸ್ನೇಹಿ ನ್ಯಾಯಾಲಯ, ದಾವಣಗೆರೆ ವಿಶೇಷ ಪೋಕ್ಸೋ ನ್ಯಾಯಾಲಯ ಆದೇಶ ನೀಡಿದೆ.
ನಗರದ ವಿಮಾನಮಟ್ಟಿಯ ಭದ್ರಾ ಕಾಲುವೆ ಏರಿಯ ವಾಸಿ ತಿಮ್ಮಪ್ಪ(65 ವರ್ಷ) ಶಿಕ್ಷೆಗೆ ಗುರಿಯಾದ ಆರೋಪಿ. ತನ್ನ ಮನೆ ಸಮೀಪವೇ ಮಂಜಮ್ಮ ಎಂಬುವರ 7 ವರ್ಷದ ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ತಿಮ್ಮಪ್ಪ ಶಿಕ್ಷೆಗೆ ಗುರಿಯಾಗಿದ್ದಾನೆ.
9 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ 92ರ ಮುದುಕನಿಗೆ 3 ವರ್ಷ ಜೈಲು!
ಮನೆಗೆಲಸ ಮಾಡುವ ಮಂಜಪ್ಪ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆ ಬಳಿ ಆಟವಾಡುತ್ತಿದ್ದ 7 ವರ್ಷದ ಅಪ್ರಾಪ್ತೆಯನ್ನು ತಿಮ್ಮಪ್ಪ ಚಾಕೋಲೇಟ್ ಕೊಡಿಸುವುದಾಗಿ ಪುಸಲಾಯಿಸಿ, ಮನೆಗೆ ಕರೆದೊಯ್ದು, ಮಗುವಿನ ಬಟ್ಟೆಬಿಚ್ಚಿ, ಮೈಕೈ ಮುಟ್ಟಿ, ಕೆನ್ನೆ ಸವರುವುದು, ತನ್ನ ಟೀ ಶರ್ಚ್ ಬಿಚ್ಚಿ, ಸಂತ್ರಸ್ತೆ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕಿರುಕುಳ ಎಸಗಿದ್ದನು. ಈ ವಿಷಯ ತಿಳಿದ ಸಂತ್ರಸ್ತ ಮಗುವಿನ ತಾಯಿಯು ಮಹಿಳಾ ಪೊಲೀಸ್ ಠಾಣೆದೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು.
ಸುದೀರ್ಘ ವಿಚಾರಣೆ ವೇಳೆ ತಿಮ್ಮಪ್ಪ ಎಸಗಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ಮಕ್ಕಳ ಸ್ನೇಹಿತ ನ್ಯಾಯಾಲಯದ ನ್ಯಾಯಾಧೀಶ ಶ್ರೀಪಾದ್ ಎನ್. ಅವರು ಅಪರಾಧಿ ತಿಮ್ಮಪ್ಪನಿಗೆ 5 ವರ್ಷಗಳ ಜೈಲು ಶಿಕ್ಷೆ, 5 ಸಾವಿರ ರು. ದಂಡ ವಿಧಿಸಿದ್ದು, ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ 2 ಲಕ್ಷ ರು. ಪರಿಹಾರ ನೀಡಲು ಜಿಲ್ಲಾ ಉಚಿತ ಸೇವಾ ಪ್ರಾಧಿಕಾರಕ್ಕೆ ನೀಡುವಂತೆ ಆದೇಶಿಸಿ, ತೀರ್ಪು ನೀಡಿದರು. ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ರೇಖಾ ಎಸ್.ಕೋಟೆ ಗೌಡರ್ ಸರ್ಕಾರದ ಪರ ವಾದ ಮಂಡಿಸಿದರು. ಮಹಿಳಾ ಠಾಣೆಯ ಪ್ರಕಾಶ್ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿಸಲ್ಲಿಸಿದ್ದರು. 8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ 20 ವರ್ಷ ಜೈಲು ಶಿಕ್ಷೆ!