ನಾದಿನಿ ಜೊತೆ ಅಶ್ಲೀಲವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬಾವನ ಮೇಲೆಯೂ ಹಲ್ಲೆ ನಡೆಸಿದ ಕಾಮುಕ!

Published : Nov 24, 2023, 09:47 AM ISTUpdated : Nov 25, 2023, 10:52 AM IST
ನಾದಿನಿ ಜೊತೆ ಅಶ್ಲೀಲವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬಾವನ ಮೇಲೆಯೂ ಹಲ್ಲೆ ನಡೆಸಿದ ಕಾಮುಕ!

ಸಾರಾಂಶ

ನಾದಿನಿ ಜೊತೆ ಅಶ್ಲೀಲವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾಮುಕ ಆಂಬುಲೆನ್ಸ್ ಡ್ರೈವರನೊಬ್ಬ ಆಕೆಯ ಬಾವನ ಮೇಲೆಯೂ ಮಾರಣಾಂತಿಕವಾಗಿ ಹಲ್ಲೆ ನಡೆಸಿ ವಿಕೃತಿ ಮೆರೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು (ನ.24): ನಾದಿನಿ ಜೊತೆ ಅಶ್ಲೀಲವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾಮುಕ ಆಂಬುಲೆನ್ಸ್ ಡ್ರೈವರನೊಬ್ಬ ಆಕೆಯ ಬಾವನ ಮೇಲೆಯೂ ಮಾರಣಾಂತಿಕವಾಗಿ ಹಲ್ಲೆ ನಡೆಸಿ ವಿಕೃತಿ ಮೆರೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಸಂದೇಶ್ ಹಲ್ಲೆ ನಡೆಸಿರುವ ಕಾಮುಕ ಡ್ರೈವರ್, ಮಹೇಶ್ ಮಾರಣಾಂತಿಕ ಹಲ್ಲೆಗೊಳಗಾಗಿರುವ ವ್ಯಕ್ತಿ. ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಟ್ರಾಮಾ ಸೆಂಟರ್‌ನ ಆಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡ್ತಿರೋ ಕಾಮುಕ ಡ್ರೈವರ್ ಸಂದೇಶ್, ಅದೇ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಆಗಿರುವ ಮಹೇಶ್.

ಮಹಿಳೆ ಮುಂದೆ ಅಸಭ್ಯ ವರ್ತನೆ ತೋರಿದ ಮಾನಸಿಕ ರೋಗಿ ಹಿಡಿದು ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನ!

ಹೆಣ್ಣುಪೀಡಕನಾಗಿರುವ ಸಂದೇಶ್ ಮಹಿಳೆಯರು, ಸಿಬ್ಬಂದಿ ಜೊತೆಗೆ ಅಶ್ಲೀಲವಾಗಿ ವರ್ತಿಸುವುದು ಚಟವಾಗಿಸಿಕೊಂಡಿದ್ದ. ಈ ಹಿಂದೆ ಮಹಿಳೆಯರ ಶೌಚಾಲಯದಲ್ಲಿ ಹಿಡೆನ್ ಕ್ಯಾಮೆರಾ ಇಟ್ಟು ಆಸ್ಪತ್ರೆಗೆ ಬರುವ ಮಹಿಳೆಯರು, ನರ್ಸ್ ವಿಡಿಯೋ ಮಾಡಿ ಸಿಕ್ಕಿಬಿದ್ದಿದ್ದ ಕಾಮುಕ. ಈ ವಿಚಾರಕ್ಕೆ ಕೆಆರ್ ಆಸ್ಪತ್ರೆಯಿಂದ ಸಂದೇಶ್ ನನ್ನು ಕೆಲಸದಿಂದ ತೆಗೆಯಲಾಗಿತ್ತು. ಆದರೆ ಕೆಲ ದಿನಗಳ ಬಳಿಕ ಮತ್ತೆ ಅದೇ ಆಸ್ಪತ್ರೆಗೆ ವಕ್ಕರಿಸಿ ಟ್ರಾಮಾ ಸೆಂಟರ್ ಗೆ ಆಂಬುಲೆನ್ಸ್ ಡ್ರೈವರ್ ಆಗಿ ಕೆಲಸಕ್ಕೆ ಸೇರಿದವನು ಹಳೇ ಚಾಳಿ ಮುಂದುವರಿಸಿದ್ದ. ಅದೇ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಆಗಿರುವ ಮಹೇಶ ಎಂಬಾತನ ನಾದಿನಿಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದ ಸಂದೇಶ್. ಇದನ್ನು ಪ್ರಶ್ನಿಸಿ ವಾಗ್ವಾದ ನಡೆಸಿದ್ದ ಮಹೇಶ್ ಜೊತೆಗೆ ಅವನ ವರ್ತನೆ ಬಗ್ಗೆ ಆಸ್ಪತ್ರೆ ಅಧಿಕಾರಿಗಳಿಗೆ ದೂರು ನೀಡಿದ್ದ.

ಮಾನ, ಮರ್ಯಾದೆ ಮರೆತ ಬಿಜೆಪಿ ನಾಯಕ: ವೇದಿಕೆಯಲ್ಲಿ ಮಹಿಳೆ ಜೊತೆ ಅಶ್ಲೀಲ ವರ್ತನೆ!

ಮಾರಣಾಂತಿಕ ಹಲ್ಲೆ ಮಾಡಿ ಮೂತ್ರ ವಿಸರ್ಜನೆ:

ಆಸ್ಪತ್ರೆ ಅಧಿಕಾರಿಗಳಿಗೆ ದೂರು ಕೊಟ್ಟನೆಂದು ದ್ವೇಷ ಸಾಧಿಸಿದ್ದ ಆರೋಪಿ ಸಂದೇಶ್, ಇದೇ ಸೋಮವಾರ ಆಸ್ಪತ್ರೆಗೆ ಕೆಲಸಕ್ಕೆ ಬರುತ್ತಿದ್ದ ಮಹೇಶ್ ನನ್ನು ಉಪಾಯ ಮಾಡಿ ಮೈಸೂರಿನ ಹೊರವಲಯದ ಬಂಡೀಪಾಳ್ಯದ ಬಳಿಗೆ ಕರೆದುಕೊಂಡು ಹೋಗಿರುವ ಸಂದೇಶ್ ಹಾಗೂ ಸ್ನೇಹಿತರು. ಮಹೇಶನಿಗೆ ತಲೆ ಭಾಗಕ್ಕೆ ಹೊಡೆದು, ಕೈ ಮುರಿದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಬಳಿಕ ಮಹೇಶ್ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ‌ ಮೆರೆದಿರುವ ಸಂದೇಶ್ ಹಾಗೂ ಆತನ ಸ್ನೇಹಿತರು. ಸದ್ಯಕ್ಕೆ ತೀವ್ರವಾಗಿ ಗಾಯಗೊಂಡಿರುವ ಮಹೇಶ್ ಕೆಆರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂದೇಶ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್