
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.21) : ವಿವಾಹಿತ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ಅವರ ನಗ್ನ ವಿಡಿಯೋಗಳನ್ನು ಚಿತ್ರೀಕರಿಸಿ ವಿಡಿಯೋ ಇಟ್ಟುಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪದಲ್ಲಿ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ.
ಸೋಮವಾರಪೇಟೆ(Somavarapet) ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಆಗಿರುವ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಸಂಪತ್ ನಾಯರ್(Sampath nair) ಹಲ್ಲೆಗೊಳಗಾದ ವ್ಯಕ್ತಿ. ಮಹಿಳೆಯ ಪತಿಯ ಸ್ನೇಹಿತ ಸುಜಿತ್ ಎಂಬಾತ ಕಳೆದ ನಾಲ್ಕು ವರ್ಷಗಳ ಹಿಂದೆ ಸಂತ್ರಸ್ಥ ಮಹಿಳೆಯ ನಗ್ನ ವಿಡಿಯೋ(Naked videos)ಗಳನ್ನು ಚಿತ್ರೀಕರಿಸಿದ್ದನಂತೆ. ಈ ವಿಡಿಯೋಗಳನ್ನು ತೋರಿಸಿ ಲೈಂಗಿಕ ಕಿರುಕುಳ(sexual harassment) ನೀಡುತ್ತಿದ್ದನಂತೆ. ಹೀಗಾಗಿ ಸಂತ್ರಸ್ಥ ಮಹಿಳೆಯ ಪತಿ ಸಂಪತ್ ನಾಯರ್ ಎಂಬಾತನ ಬಳಿ ಸಹಾಯ ಕೇಳಿ ಆತನಿಗೆ ಬುದ್ಧಿ ಕಲಿಸುವಂತೆ ಕೇಳಿದ್ದರಂತೆ. ಆದರೆ ಇದನ್ನು ದುರುಪಯೋಗ ಪಡಿಸಿಕೊಂಡ ಸಂಪತ್ ನಾಯರ್, ಸುಜಿತ್ ಎಂಬಾನಿಂದ ಮಹಿಳೆಯ ನಗ್ನ ವಿಡಿಯೋಗಳನ್ನು ಪಡೆದು ತಾನೂ ಕೂಡ ಮಹಿಳೆಗೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದನಂತೆ.
ಅಯ್ಯೋ ಪಾಪ.. ಮಹಿಳಾ ಐಎಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ: ಐಆರ್‌ಎಸ್ ಅಧಿಕಾರಿ ಬಂಧನ
ಇದರಿಂದ ತೀವ್ರ ಮನನೊಂದಿದ್ದ ಮಹಿಳೆ 2022 ರ ಆಗಸ್ಟ್ ತಿಂಗಳಲ್ಲಿಯೇ ಆತ್ಮಹತ್ಯೆ(Suicide)ಗೆ ಯತ್ನಿಸಿದ್ದರು ಎನ್ನಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಕಿರಾತಕ ಸಂಪತ್ ನಾಯರ್ ನೀನು ತನ್ನೊಂದಿಗೆ ಸಹಕರಿಸದಿದ್ದರೆ ನಿನ್ನ ಗಂಡ ಮಕ್ಕಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಮಹಿಳೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಯಾವಾಗಲೂ ಗನ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ನಿನ್ನನ್ನು ಹತ್ಯೆ ಮಾಡುವುದಾಗಿ ಹೇಳಿ ಹೆದರಿಸುತ್ತಿದ್ದ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ. ಹೀಗೆ ಮಹಿಳೆಗೆ ಕಿರುಕುಳ ನೀಡಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಮಹಿಳೆ ಕುಶಾಲನಗರ ನಗರ ಪೊಲೀಸ್ ಠಾಣೆ(Kushalanagar police station)ಗೆ ದೂರು ನೀಡಿದ್ದಾರೆ. ತಾನು ಕರೆದಲ್ಲಿಗೆ ನೀನು ಬರದಿದ್ದರೆ, ನಿನ್ನ ನಗ್ನ ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುತ್ತೇನೆ ಎಂದು ಹೆದರಿಸಿ ಆ ಮಹಿಳೆಯನ್ನು ಕುಶಾಲನಗರದಲ್ಲಿ ಪ್ರತ್ಯೇಕ ಮನೆ ಮಾಡಿ ಅಲ್ಲಿ ಇರಿಸಿಕೊಂಡಿದ್ದ ಎನ್ನಲಾಗಿದೆ.
ಕೆಲವು ದಿನಗಳ ಹಿಂದಿನಿಂದ ಮಹಿಳೆ ಕಾಣಿಸದೇ ಇದ್ದಾಗ ಆಕೆಯ ಪತಿ, ತನ್ನ ಹೆಂಡತಿ ಊರಿಗೆ ಹೋಗಿರಬಹುದು ಎಂದು ಸುಮ್ಮನಿದ್ದರಂತೆ. ಆದರೆ ಊರಿನಲ್ಲೂ ಇಲ್ಲ ಎನ್ನುವ ವಿಷಯ ಗೊತ್ತಾದಾಗ ಮಹಿಳೆಯನ್ನು ಹುಡುಕಾಲು ಶುರು ಮಾಡಿದ್ದಾರೆ. ಆದರೆ ಮಹಿಳೆಯನ್ನು ಕುಶಾಲನಗರದಲ್ಲಿ ಮನೆಯೊಂದರಲ್ಲಿ ಇರಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ತಿಳಿದು ಮಹಿಳೆಯ ಸಂಬಂಧಿಕರು ಶನಿವಾರ ಹುಡುಕಿ ಬಂದಿದ್ದಾರೆ. ಈ ವೇಳೆ ಕುಶಾಲನಗರದ ಮನೆಯೊಂದರಲ್ಲಿ ಮಹಿಳೆಯೊಂದಿಗೆ ಇರುವಾಗಲೇ ಸಂಪತ್ ನಾಯರ್ ನನ್ನು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆರೋಪಿ ಸಂಪತ್ ನಾಯರ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮಹಿಳೆಯ ಸಂಬಂಧಿಕರಿಂದ ನಡೆದ ಹಲ್ಲೆಯಿಂದ ಸಂಪತ್ ತೀವ್ರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಹಲ್ಲೆ ಬಳಿಕ ವ್ಯಕ್ತಿಯನ್ನು ಕುಶಾಲನಗರ ನಗರ ಪೊಲೀಸರಿಗೆ ಒಪ್ಪಿಸಲಾಗಿದ್ದು, ಸಂಪತ್ ನಾಯರ್ ಸದ್ಯ ಪೊಲೀಸರ ವಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.
Sexual Harassment Case; ಬಂಧನ ಭೀತಿಯಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಪಾರು
ಒಂದೆಡೆ ಮಹಿಳೆ ಲೈಂಗಿಕ ಕಿರುಕುಳ ಆರೋಪ ಮಾಡಿ ಕುಶಾಲನಗರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರೆ, ಗಂಭೀರವಾಗಿ ಹಲ್ಲೆ ಮಾಡಲಾಗಿದೆ ಎಂದು ಮಹಿಳೆಯ ಸಂಬಂಧಿಕರ ವಿರುದ್ಧವೂ ಸಂಪತ್ ನಾಯರ್ ಕಡೆಯಿಂದ ದೂರು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ