ದಾವಣಗೆರೆಯಲ್ಲಿ ಅಪ್ರಾಪ್ತೆಯನ್ನು ಮದುವೆಯಾಗುವಂತೆ ಪೀಡಿಸಿದ ಟಿಪ್ಪು ಸುಲ್ತಾನ್!

By Gowthami K  |  First Published May 21, 2023, 11:57 AM IST

ದಾವಣಗೆರೆ ಜಿಲ್ಲೆಯಲ್ಲಿ ಮದುವೆಯಾಗುವಂತೆ ಪೀಡಿಸಿದ ವ್ಯಕ್ತಿಯ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. 17 ವರ್ಷದ ಬಾಲಕಿಯನ್ನು ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.


ದಾವಣಗೆರೆ (ಮೇ.21):  ದಾವಣಗೆರೆ ಜಿಲ್ಲೆಯಲ್ಲಿ ಮದುವೆಯಾಗುವಂತೆ ಪೀಡಿಸಿದ ವ್ಯಕ್ತಿಯ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. 17 ವರ್ಷದ ಬಾಲಕಿಯನ್ನು ಮದುವೆಯಾಗುವಂತೆ ಟಿಪ್ಪು ಸುಲ್ತಾನ್ ಎಂಬಾತ ಪೀಡಿಸುತ್ತಿದ್ದ ಮಾತ್ರವಲ್ಲ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಟಿಪ್ಪು ಸುಲ್ತಾನ್ ಬಾಲಕಿಯ ನಿವಾಸದ ಪಕ್ಕದಲ್ಲೇ ಟೈಲರಿಂಗ್ ಕೆಲಸ ಮಾಡುತ್ತಿದ್ದ ಇದಕ್ಕೆ ಬಾಲಕಿ  ಒಪ್ಪದ ಕಾರಣ ಟಿಪ್ಪು ಸುಲ್ತಾನ್ ಆಕೆಗೆ ಕಪಾಳಮೋಕ್ಷ ಮಾಡಿದ್ದು  ಟಿಪ್ಪು ಸುಲ್ತಾನ್ ವಿರುದ್ದ ದಾವಣಗೆರೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಕ್ಷಿಣೆ: ಪತ್ನಿ​ಯನ್ನೇ ಕೊಂದು ಪತಿ ನಾಪ​ತ್ತೆ
ದಾವಣಗೆರೆ: ವರದಕ್ಷಿಣೆ ಕಿರುಕುಳ ನೀಡಿ, ಪತ್ನಿಯನ್ನೇ ಕೊಲೆ ಮಾಡಿ ಪತಿರಾಯನು ಕುಟುಂಬ ಸಮೇತ ನಾಪತ್ತೆಯಾದ ಘಟನೆ ಚನ್ನಗಿರಿ ತಾಲೂಕು ಕತ್ತಲಗೆರೆ ಗ್ರಾಮದಲ್ಲಿ ವರದಿಯಾಗಿದೆ.

Tap to resize

Latest Videos

ಪ್ರಭಾವಿ ರಾಜಕಾರಣಿಯ ಕೆರೆ ಸ್ವಚ್ಛಗೊಳಿಸುವ ನೆಪಕ್ಕೆ ಕಲುಷಿತ ನೀರು ಕುಡಿದು ಜಾನುವಾರು

ಕತ್ತಲಗೆರೆ ಗ್ರಾಮದ ಅನಿತಾ (28) ಕೊಲೆಯಾದ ಮಹಿಳೆ. ಅಶೋಕ ಎಂಬಾತನ ಜೊತೆಗೆ 5 ವರ್ಷದ ಹಿಂದೆ ಅನಿತಾ ಮದುವೆಯಾಗಿದ್ದು, ಇಬ್ಬರು ಮಕ್ಕಳು ಈ ದಂಪತಿಗೆ ಇದ್ದಾರೆ. ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಪತಿ ಅಶೋಕನು ಅಕ್ರಮ ಸಂಬಂಧ ಕಾರಣಕ್ಕೆ ಹಾಗೂ ವರದಕ್ಷಿಣೆ ಕಿರುಕುಳ ನೀಡಿ, ಅನಿತಾಳನ್ನು ಕೊಲೆ ಮಾಡಿದ್ದಾನೆ ಎಂದು ಮೃತಳ ಕುಟುಂಬಸ್ಥರು ಬಸವಾಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಅಶೋಕ ಹಾಗೂ ಆತನ ಕುಟುಂಬಸ್ಥರು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಆರ್‌ಬಿಐ ಪೊಲೀಸರ ಸೋಗು! ವೈದ್ಯೆಯಿಂದ ಕೋಟಿ ಕೋಟಿ ಪೀಕಿದ ಖದೀಮರು

ಅತ್ಯಾಚಾರ ಆರೋಪಿಗೆ 2 ವರ್ಷ ಜೈಲುಶಿಕ್ಷೆ
ಕೋಲಾರ: 15 ವರ್ಷದ ಬಾಲಕಿಯನ್ನು ವಿವಾಹವಾಗಿ ಅತ್ಯಾಚಾರವೆಸಗಿದ್ದ ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಸಲ್ಮಾನ್‌ ಪಾಷ ಅಲಿಯಾಸ್‌ ಸಲ್ಮಾನ್‌ (28) ಹಾಗೂ ಆತನಿಗೆ ಸಹಕರಿಸಿದ ಸಲ್ಮಾ ಎಂಬುವರಿಗೆ ಇಲ್ಲಿನ ಪೋಕ್ಸೊ ವಿಶೇಷ ನ್ಯಾಯಾಲಯ ತಲಾ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೋಲಾರ ತಾಲೂಕಿನ ವೇಮಗಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2021ರ ಆಗಸ್ಟ್‌ 7ರಂದು ನಡೆದಿದ್ದು, ಕೋಲಾರ ನಗರ ಮಹಿಳಾ ಠಾಣೆ ಪೊಲೀಸರು ಯುವಕನ ಮೇಲೆ ಪೋಕ್ಸೊ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಪಿ.ದೇವಮಾನೆ ಅವರು ಶನಿವಾರ ಇಬ್ಬರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ತಲಾ 2 ವರ್ಷ ಜೈಲು ಶಿಕ್ಷೆ ಹಾಗೂ ? 50 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಡಿ.ಲಲಿತಕುಮಾರಿ ವಾದ ಮಂಡಿಸಿದ್ದರು.

click me!