ರಮೇಶ್‌ಗೆ ಕಾನ್ಫಿಡೆನ್ಸ್ ಬಂದಿದ್ದು ಹೇಗೆ? ಪ್ರೇಸ್‌ ಮೀಟ್‌ನಲ್ಲಿ ಸ್ಫೋಟವಾಗುವ ದಾಖಲೆ!

By Suvarna NewsFirst Published Mar 27, 2021, 4:13 PM IST
Highlights

ಮಾಜಿ ಸಚಿವ ಸಿಡಿ ಸ್ಫೋಟ ಪ್ರಕರಣ/ ನಾನು ಜಾಮೀನು ತೆಗೆದುಕೊಳ್ಳಲ್ಲ ಎಂದಿರುವ  ಜಾರಕಿಹೊಳಿ ರಮೇಶ್ ಜಾರಕಿಹೊಳಿಗೆ ಅಷ್ಟೊಂದು ಕಾನ್ಫಿಡೆನ್ಸ್ ಬಂದಿದ್ದಾದ್ರು ಹೇಗೆ?/ ಸಿಡಿ ಲೀಕ್ ಆದ ದಿನವೇ ಮುಂಬೈಯಿಂದ ಬಂದಿತ್ತು ಒಂದು ಸ್ಪೆಷಲ್‌ ಟೀಂ

ಬೆಂಗಳೂರು(ಮಾ.  27) ಸಿಡಿ ಸ್ಫೋಟ ಪ್ರಕರಣದಲ್ಲಿ  ನಾನು ಜಾಮೀನು ತೆಗೆದುಕೊಳ್ಳಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿಗೆ ಅಷ್ಟೊಂದು ಕಾನ್ಫಿಡೆನ್ಸ್ ಬಂದಿದ್ದಾದ್ರು ಹೇಗೆ? ಅಷ್ಟಕ್ಕೂ ಸಾಹುಕಾರ್ ಪ್ರಯೋಗಿಸಲಿರುವ ಅಸ್ತ್ರಯಾವುದು? ಸಾಹಕಾರ್ ಬತ್ತಳಿಕೆಯಿಂದ ಸಿಡಿಯಲಿದೆಯಾ ಬಾಂಬ್ ಗಳು? ಎಂಬ ಪ್ರಶ್ನೆಗಳು ಮೂಡಿದ್ದು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

ಸಿಡಿ ಲೀಕ್ ಆದ ದಿನವೇ ಮುಂಬೈಯಿಂಸ ಒಂದು ಸ್ಪೆಷಲ್‌ ಟೀಂ ಬಂದಿತ್ತು. ಆ ಪ್ರೈವೇಟ್ ಡಿಟೆಕ್ಟೀವ್ ಏಜೆನ್ಸಿಯಲ್ಲಿದ್ದಾರೆ ಸೈಬರ್ ನಿಪುಣರಿದ್ದಾರೆ. , ಮಾಜಿ ಪೊಲೀಸ್ ಅಧಿಕಾರಿಗಳು, ಸೈಬರ್ ಎಕ್ಸ್ ಪರ್ಟ್ ಗಳು ಇದ್ದಾರೆ. ಸಿಡಿ ಲೀಕ್ ಆದ ಮಾರನೆ ದಿನವೇ  ಮಹತ್ವದ ದಾಖಲಾತಿಗಳು ಸಿಕ್ಕಿದ್ದವು.

ಸಿಡಿ ಲೇಡಿ ಬಗ್ಗೆ ಡಿಕೆಶಿ ಕೊಟ್ಟ ಮೊದಲ ಪ್ರತಿಕ್ರಿಯೆ

ಸಿಡಿ ಲೀಕ್ ಮಾಡಿದ್ದು ಯಾರು?  ಅದನ್ನ ಅಪ್ ಲೋಡ್ ಮಾಡಿದ್ದು ಯಾರು? ಎಲ್ಲಿಂದ ಅಪ್ ಲೋಡ್ ಆಯ್ತು ..?  ಎಂಬ ಎಲ್ಲ ದಾಖಲೆಗಳು ಜಾರಕಿಹೊಳಿ ಕೈ ಸೇರಿದೆಯಾ? ರಮೇಶ್ ಜಾರಕಿಹೊಳಿ ಬಳಿ ಬಳಿ ಇದೆಯಾ ಸಿಡಿ ಜಾಲದ ಪಿನ್ ಟು ಪಿನ್ ಮಾಹಿತಿ?  ಎಂಬ ಪ್ರಶ್ನೆಗಳು ಎದ್ದಿವೆ.

ಎಸ್ ಐ ಟಿ ರಚನೆ ಆಗೋ ಮುನ್ನವೇ  ಬೆಳಗಾವಿ ನಾಯಕನ ಕೈಗೆ ದಾಖಲಾತಿಗಳು ಸಿಕ್ಕಿದ್ದು ಇದೇ ಮಾಜಿ ಸಚಿವರ ಕಾನ್ಫಿಡೆನ್ಸ್ ಲೆವಲ್ ಹೆಚ್ಚಿಸಲು ಕಾರಣವಾಗಿದೆ ಎಂಬ ಮಾತಿದೆ. ತಮ್ಮ ಬತ್ತಳಿಕೆಯ ಯಾವ ಅಸ್ತ್ರ ಬಳಿಸ್ತಾರೆ ಅನ್ನೋದೆ ಕುತೂಹಲ ಮನೆ ಮಾಡಿದೆ. ಈಗ ಸಿಡಿಸುವ ಬಾಂಬ್ ಗೆ ಹಳೆಯ ಎಲ್ಲ ಕೇಸ್ ಗಳು ಪುಡಿ ಪುಡಿಯಾಗಲಿವೆಯಾ? ಕಾದು ನೋಡಬೇಕಿದೆ. 

 

click me!