ರಮೇಶ್ ಜೇಬಿನಲ್ಲಿರುವ 'ಆ' ಆಡಿಯೋ ಮತ್ತು ವಿಡಿಯೋ ಬಿಡುಗಡೆ?

Published : Mar 27, 2021, 04:55 PM IST
ರಮೇಶ್ ಜೇಬಿನಲ್ಲಿರುವ 'ಆ' ಆಡಿಯೋ ಮತ್ತು ವಿಡಿಯೋ ಬಿಡುಗಡೆ?

ಸಾರಾಂಶ

ಇನ್ನೂ ರಹಸ್ಯ ಸ್ಥಳದಲ್ಲೇ ಇರುವ ರಮೇಶ್ ಜಾರಕಿಹೊಳಿ/ ರಮೇಶ್ ಜಾರಕಿಹೊಳಿ ಸಿಡಿ ಸ್ಪೋಟಕ್ಕೆ ಕ್ಷಣಗಣನೆ/ ರಹಸ್ಯ ಸ್ಥಳದಲ್ಲಿ ಕೂತು ದಾಖಲೆ ಪರಿಶೀಲನೆಯಲ್ಲಿ ತೊಡಗಿರೋ ರಮೇಶ್/ ದೇವರ ಪೂಜೆಯ ನಂತರ ಮಾಧ್ಯಮದ ಮುಂದೆ ಬರಲಿರುವ ಜಾರಕಿಹೊಳಿ/ ಹಂತ ಹಂತವಾಗಿ ದಾಖಲೆ ಬಿಡುಗಡೆ ಮಾಡಲು ಜಾರಕಿಹೊಳಿ ಸಿದ್ದತೆ

ಬೆಂಗಳೂರು(ಮಾ.  27) ಎಲ್ಲರ  ದೃಷ್ಟಿ  ರಮೇಶ್ ಜಾರಕಿಹೊಳಿ ಅವರ ಸದಾಶಿವ ನಗರದ ನಿವಾಸದ ಕಡೆ ನೆಟ್ಟಿದೆ. ಇನ್ನು ಕೆಲವೇ ಕ್ಷಣದಲ್ಲಿ ಪ್ರೆಸ್ ಮೀಟ್ ನಡೆಸಿ ಸ್ಫೋಟಕ ಮಾಹಿತಿ ನೀಡಲಿದ್ದಾರೆ.

ಇನ್ನೂ ರಹಸ್ಯ ಸ್ಥಳದಲ್ಲೇ ಇರುವ ರಮೇಶ್ ಜಾರಕಿಹೊಳಿ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ದೇವರ ಪೂಜೆಯ ನಂತರ ಮಾಧ್ಯಮದ ಮುಂದೆ ಬರಲಿರುವ ಜಾರಕಿಹೊಳಿ ಹಂತ ಹಂತವಾಗಿ ದಾಖಲೆ ಬಿಡುಗಡೆ ಮಾಡಲಿದ್ದಾರೆ.

ರಮೇಶ್ ಗೆ ಇಷ್ಟೊಂದು ಕಾನ್ಫಿಡೆನ್ಸ್ ಬಂದಿದ್ದು ಹೇಗೆ?

ಈಗಾಗಲೇ ವಕೀಲರಿಂದಲೂ ಸಲಹೆ ಪಡೆದುಕೊಂಡಿರುವ ರಮೇಶ್, ಮೊದಲು ಆಡಿಯೋ ಬಿಡುಗಡೆ ಮಾಡಲಿದ್ದಾರೆ.  ಆಡಿಯೋ ನಂತರ ಒಂದು ವೀಡಿಯೋ ಸಹ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗಿದೆ ಆ 'ಮಹಾನಾಯಕ'ನ ಗುಟ್ಟು ರಟ್ಟು ಮಾಡಲಿದ್ದಾರೆ ರಮೇಶ್ ಜಾರಕಿಹೊಳಿ ಎಂಬ ಮಾಹಿತಿಯೂ ಇದೆ. 

ಸಿಡಿ ಲೀಕ್ ಮಾಡಿದ್ದು ಯಾರು?  ಅದನ್ನ ಅಪ್ ಲೋಡ್ ಮಾಡಿದ್ದು ಯಾರು? ಎಲ್ಲಿಂದ ಅಪ್ ಲೋಡ್ ಆಯ್ತು ..?  ಎಂಬ ಎಲ್ಲ ದಾಖಲೆಗಳು ಜಾರಕಿಹೊಳಿ ಕೈ ಸೇರಿದೆಯಾ? ರಮೇಶ್ ಜಾರಕಿಹೊಳಿ ಬಳಿ ಬಳಿ ಇದೆಯಾ ಸಿಡಿ ಜಾಲದ ಪಿನ್ ಟು ಪಿನ್ ಮಾಹಿತಿ?  ಎಂಬ ಪ್ರಶ್ನೆಗಳು ಎದ್ದಿವೆ.

ಎಸ್ ಐ ಟಿ ರಚನೆ ಆಗೋ ಮುನ್ನವೇ  ಬೆಳಗಾವಿ ನಾಯಕನ ಕೈಗೆ ದಾಖಲಾತಿಗಳು ಸಿಕ್ಕಿದ್ದು ಇದೇ ಮಾಜಿ ಸಚಿವರ ಕಾನ್ಫಿಡೆನ್ಸ್ ಲೆವಲ್ ಹೆಚ್ಚಿಸಲು ಕಾರಣವಾಗಿದೆ ಎಂಬ ಮಾತಿದೆ. ತಮ್ಮ ಬತ್ತಳಿಕೆಯ ಯಾವ ಅಸ್ತ್ರ ಬಳಿಸ್ತಾರೆ ಅನ್ನೋದೆ ಕುತೂಹಲ ಮನೆ ಮಾಡಿದೆ. ಈಗ ಸಿಡಿಸುವ ಬಾಂಬ್ ಗೆ ಹಳೆಯ ಎಲ್ಲ ಕೇಸ್ ಗಳು ಪುಡಿ ಪುಡಿಯಾಗಲಿವೆಯಾ? ಕಾದು ನೋಡಬೇಕಿದೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!
ಫೇಸ್‌ಬುಕ್ ಚಿಟ್ಟೆಯ ಮುಖ ನೋಡಿ ಹನಿಹೀರಲು ಬಂದವನೇ ಟ್ರ್ಯಾಪ್ , ಯುವಕನ ಮೇಲೆ ಹಲ್ಲೆ, ಹಣಕ್ಕೆ ಬೇಡಿಕೆ ಇಟ್ಟವರು ಎಸ್ಕೇಪ್!