ಮಣಿಪುರದಲ್ಲಿ ಶಾಲಾ ಬಸ್ ಪಲ್ಟಿ: 7 ವಿದ್ಯಾರ್ಥಿಗಳ ಸಾವು, ಹಲವರ ಸ್ಥಿತಿ ಗಂಭೀರ

By BK AshwinFirst Published Dec 21, 2022, 6:09 PM IST
Highlights

ಹೆಚ್ಚು ಬೆಟ್ಟ ಗುಡ್ಡವನ್ನೇ ಹೊಂದಿರುವ ಈ ಜಿಲ್ಲೆಯ ಓಲ್ಡ್ ಕ್ಯಾಚಾರ್ ರಸ್ತೆಯಲ್ಲಿ ಬಸ್ ತೀಕ್ಷ್ಣವಾದ ತಿರುವು ಪಡೆಯಲು ಪ್ರಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಶಾಲಾ ಬಸ್  (School Bus) ಪಲ್ಟಿಯಾದ ಪರಿಣಾಮ ಕನಿಷ್ಠ ಏಳು ವಿದ್ಯಾರ್ಥಿಗಳು (Students) ಮೃತಪಟ್ಟಿರುವ (Death) ಆಘಾತಕಾರಿ ಘಟನೆ ಮಣಿಪುರದ (Manipur) ನೋನಿ ಜಿಲ್ಲೆಯ ಬಿಷ್ಣುಪುರ್ - ಖೌಪುಮ್ ರಸ್ತೆಯಲ್ಲಿ ವರದಿಯಾಗಿದೆ. ಲಾಂಗ್ಸಾಯ್ ಟುಬುಂಗ್ ಗ್ರಾಮದಲ್ಲಿ ಹಾಗೂ ಖೌಪುಂ ಬಳಿ ಈ ಘಟನೆ ನಡೆದಿದ್ದು, ಹೆಚ್ಚು ಬೆಟ್ಟ ಗುಡ್ಡವನ್ನೇ ಹೊಂದಿರುವ ಈ ಜಿಲ್ಲೆಯ ಓಲ್ಡ್ ಕ್ಯಾಚಾರ್ ರಸ್ತೆಯಲ್ಲಿ ಬಸ್ ತೀಕ್ಷ್ಣವಾದ ತಿರುವು ಪಡೆಯಲು ಪ್ರಯತ್ನಿಸುತ್ತಿದ್ದಾಗ ಈ ಅಪಘಾತ (Accident) ಸಂಭವಿಸಿದೆ ಎಂದು ತಿಳಿದುಬಂದಿದೆ. ಇನ್ನು, ಈ ಘಟನೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಶಂಕೆಯೂ ವ್ಯಕ್ತವಾಗಿದೆ.

ಈ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನಿಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆತಂದ ನಂತರ ಮೃತಪಟ್ಟಿದ್ದಾರೆ. ಅಲ್ಲದೆ, ಇತರ 20 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದೂ ತಿಳಿದುಬಂದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಕನಿಷ್ಠ 15 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಈವರೆಗೆ 7 ಮಂದಿ ಮೃತಪಟ್ಟಿರುವುದು ಮಾತ್ರ ದೃಢಪಟ್ಟಿದೆ.

ಇದನ್ನು ಓದಿ: Vijayanagara: 50 ವಿದ್ಯಾರ್ಥಿಗಳಿದ್ದ ಪ್ರವಾಸದ ಬಸ್‌ನ ಆಕ್ಸಲ್‌ ಕಟ್: ತಪ್ಪಿದ ಭಾರಿ ಅನಾಹುತ

ಯೈರಿಪೋಕ್‌ನ ತಂಬಲ್ನು ಹೈಯರ್ ಸೆಕೆಂಡರಿ ಶಾಲೆಯ ಸುಮಾರು 36 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಯಿತು ಮತ್ತು 
ಪೊಲೀಸರ ಪ್ರಕಾರ, ಯೈರಿಪೋಕ್‌ನ ತಂಬಲ್ನು ಹೈಯರ್ ಸೆಕೆಂಡರಿ ಶಾಲೆಯ ಸುಮಾರು 36 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಯಿತು.  ಮತ್ತು ಬುಧವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಇಂಫಾಲ್‌ನಿಂದ ನೈಋತ್ಯ ಭಾಗದ 50 ಕಿಮೀ ದೂರದಲ್ಲಿರುವ ನುಂಗ್ಸೈ ಗ್ರಾಮದಲ್ಲಿ ಬಸ್‌ ಪಲ್ಟಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶೈಕ್ಷಣಿಕ ಪ್ರವಾಸಕ್ಕಾಗಿ ಖೌಪುಮ್ ಕಡೆಗೆ ವಿದ್ಯಾರ್ಥಿಗಳು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು, ಬಸ್‌ ಅಪಘಾತದ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಸದ್ಯಕ್ಕೆ ಮೃತಪಟ್ಟವರ ಸಂಖ್ಯೆಯ ಬಗ್ಗೆ ಯಾವುದೇ ದೃಢೀಕೃತ ವರದಿಗಳಿಲ್ಲ, ಆದರೆ ಸಾವುನೋವುಗಳು ಹೆಚ್ಚಾಗಬಹುದು ಎಂದು ನೋನಿ ಜಿಲ್ಲೆಯ ಹಿರಿಯ ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಗಾಯಗೊಂಡ ಕೆಲವು ವಿದ್ಯಾರ್ಥಿಗಳನ್ನು ಇಂಫಾಲ್‌ನ ಖಾಸಗಿ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Belagavi: ಅಪಘಾತ ಮರೆಮಾಚಲು ಮರಾಠಿಗರ ದಾಳಿ ಎಂದು ಸುಳ್ಳು ದೂರು!

ರಾಜ್ಯದಲ್ಲಿ ತಪ್ಪಿದ್ದ ಭಾರಿ ಅನಾಹುತ..!

ಡಿಸೆಂಬರ್‌ ತಿಂಗಳಿಂದ ಫೆಬ್ರವರಿ ತಿಂಗಳು ಚಳಿಗಾಲ ಆಗಿರುವುದರಿಂದ ಪ್ರವಾಸ ಮಾಡಲಿಕ್ಕೆ ಹೇಳಿ ಮಾಡಿಸಿದ ಅವಧಿಯಾಗಿರುತ್ತದೆ. ಹೀಗೆ, ಪ್ರವಾಸಕ್ಕೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಬಳಿ ಆಕ್ಸಲ್‌ ತುಂಡಾಗಿ ಅಪಘಾತವಾಗಿರುವ ಘಟನೆ ಇತ್ತೀಚೆಗಷ್ಟೇ ನಡೆದಿದೆ. ಚಾಲಕನ ಸಮಯ ಪ್ರಜ್ಯ ಕಾರಣದಿಂದಾಗಿ ದೊಡ್ಡ ಪ್ರಮಾಣದ ಅಪಘಾತ ತಪ್ಪಿತ್ತು.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟ ಶಾಲಾ ಮಕ್ಕಳನ್ನು ಶಿಕ್ಷಕರು ಖಾಸಗಿ ಬಸ್‌ನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ಬಸ್‌ನಲ್ಲಿ 50 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರವಾಸಕ್ಕೆ ಹೋಗುತ್ತಿದ್ದರು. ಈ ವೇಳೆ, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಬಳಿಯ ರಸ್ತೆಯಲ್ಲಿ ಉಂಟಾಗಿದ್ದ ರಸ್ ತೆಗುಂಡಿಗೆ ಬಿದ್ದಿರುವ ಖಾಸಗಿ ಬಸ್‌ನ ಆಕ್ಸಲ್‌ ಕಟ್ ಆಗಿದೆ. 

ಇದರಿಂದ ಹಿಂಬದಿಯ ಎರಡೂ ಚಕ್ರಗಳು ಕಳಚಿಕೊಂಡು ಹೋಗಿವೆ. ಆದರೆ, ರಸ್ತೆ ಗುಂಡಿಯ ಬಳಿ ವಾಹನವನ್ನು ನಿಧಾನವಾಗಿ ಚಾಲನೆ ಮಾಡುತ್ತಿದ್ದ ಚಾಲಕನ ಸಮಯ ಪ್ರಜ್ಞೆಯಿಂದ ವಾಹನದ ಆಕ್ಸಲ್‌ ತುಂಡಾದ ಬೆನ್ನಲ್ಲೇ ನಿಲ್ಲಿಸಿದ್ದಾರೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಅಪಘಾತ ಉಂಟಾಗುವುದನ್ನು ತಪ್ಪಿಸಿದ್ದಾರೆ ಎಂದೂ ವರದಿಯಾಗಿದೆ. 

click me!