ಮಾಸ್ಕ್ ಇಲ್ಲದೆ ಬ್ಯಾಂಕ್ ಪ್ರವೇಶ; ಗ್ರಾಹಕನ ಮೇಲೆ ಗುಂಡು ಹಾರಿಸಿದ ಸೆಕ್ಯೂರಿಟಿ ಗಾರ್ಡ್!

By Suvarna NewsFirst Published Jun 25, 2021, 6:08 PM IST
Highlights
  • ಮಾಸ್ಕ್ ಧರಿಸಿದ ಬ್ಯಾಂಕ್ ಪ್ರವೇಶಿಸಲು ಗ್ರಾಹಕನ ಯತ್ನ
  • ಗ್ರಾಹಕನ ಮೇಲೆ ಗುಂಡಿನ ದಾಳಿ ನಡೆಸಿದ ಸೆಕ್ಯೂರಿಟಿ ಗಾರ್ಡ್
  • ಗಂಭೀರವಾಗಿ ಗಾಯಗೊಂಡ ಗ್ರಾಹಕ ಆಸ್ಪತ್ರೆ ದಾಖಲು

ಉತ್ತರ ಪ್ರದೇಶ(ಜೂ.25):  ಕೊರೋನಾ ವೈರಸ್ ಕಾರಣ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಕೊರೋನಾ ಮಾರ್ಗಸೂಚಿ ಪಾಲನೆ ಮಾಡಬೇಕಿದೆ. ಕೊರೋನಾ ನಿಯಮ ಉಲ್ಲಂಘಿಸಿದರೆ ಎಚ್ಚರಿಕೆ ಜೊತೆಗೆ ದಂಡ ವಿಧಿಸಲಾಗುತ್ತದೆ. ಆದರೆ ಹೀಗೆ ಮಾಸ್ಕ್ ಧರಿಸಿದೆ ಬ್ಯಾಂಕ್ ಒಳಪ್ರವೇಶಿಸಲು ಯತ್ನಿಸಿದ ಗ್ರಾಹಕನ ಮೇಲೆ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಅಬ್ಬಬ್ಬಾ...! ಎರಡಂತಸ್ತಿನ ಕಟ್ಟಡದಿಂದ ಬಾಲಕಿಯ ಕೆಳಗೆ ತಳ್ಳಿದ ಮೂವರು ದುಷ್ಟರು!.

ಗ್ರಾಹಕ ರಾಜೇಶ್ ಕುಮಾರ್ ಬರೇಲಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಗೆ ಆಗಮಿಸಿದ್ದಾನೆ.  ಬ್ಯಾಂಕ್‌ನಲ್ಲಿನ ಕೆಲಸಕ್ಕೆ  11.30ಕ್ಕೆ ಆಗಮಿಸಿದ ರಾಜೇಶ್ ಕುಮಾರ್ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಮಾಸ್ಕ್ ಧರಿಸಿದೆ ಒಳ ಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದಾನೆ.

ಸೆಕ್ಯೂರಿಟಿ ಗಾರ್ಡ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಹಕ ನೇರವಾಗಿ ಬ್ಯಾಂಕ್ ಒಳ ಪ್ರವೇಶಿಸಲು ಯತ್ನಿಸಿದ್ದಾನೆ. ಇದರಿಂದ ಕೆರಳಿದ ಸೆಕ್ಯೂರಿಟಿ ಗಾರ್ಡ್, ಬಂದೂಕಿನಿಂದ ನೇರವಾಗಿ ಗುಂಡು ಹಾರಿದ್ದಾನೆ. ತೀವ್ರವಾಗಿ ಗಾಯಗೊಂಡ ಗ್ರಾಹಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡ್ಯಾನ್ಸ್ ವಿಡಿಯೋ ರೆಕಾರ್ಡ್ ವೇಳೆ ದುಪ್ಪಟ್ಟ ಕೊರಳಿಗೆ ಸುತ್ತಿ 11 ವರ್ಷದ ಬಾಲಕಿ ಸಾವು!

ಇತ್ತ ಸೆಕ್ಯೂರಿಟಿ ಗಾರ್ಡ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬ್ಯಾಂಕ್ ಅಳವಡಿಸಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಹಾಗೂ ಗ್ರಾಹಕನ ನಡುವಿನ ಮಾತುಕತೆ, ಅಲ್ಲಿನ ಪರಿಸ್ಥಿತಿ ಸಿಸಿಟಿವಿ ದೃಶ್ಯದಿಂದ ಬಯಲಾಗಲಿದೆ. ಇದರಿಂದ ತಪ್ಪಿತಸ್ಥರು ಯಾರು ಅನ್ನೋದು ಹೊರಬೀಳಲಿದೆ ಎಂದು ಬರೋಡ ಜಂಕ್ಷನ ಶಾಖೆಯ ಬ್ಯಾಂಕ್ ಮ್ಯಾನೇಜರ್ ಗೀತಾ ಭುಸಾಲ್ ಹೇಳಿದ್ದಾರೆ.

click me!