* ಕನಸಿನಲ್ಲಿ ಬಂದು ನನ್ನ ಮೇಲೆ ಅತ್ಯಾಚಾರ ಮಾಡ್ತಾನೆ
* ಮಗನ ಕಳೆದುಕೊಂಡ ಮಹಿಳೆಯಿಂದ ಮಾಂತ್ರಿಕನ ಮೇಲೆ ದೂರು
* ಬಿಹಾರದಿಂದ ವಿಲಕ್ಷಣ ಘಟನೆ ವರದಿ
* ಮಾನಸಿಕವಾಗಿ ಮಹಿಳೆ ನೊಂದಿದ್ದಾರೆ ಎಂದ ಪೊಲೀಸರು
ಪಾಟ್ನಾ (ಜೂ. 25) ಕನಸಿನಲ್ಲಿ ಬರುವ ಮಾಂತ್ರಿಕನೊಬ್ಬ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದಾನೆ ಎಂದು ಮಹಿಳೆಯೊಬ್ಬರು ದೂರು ಸಲ್ಲಿಸಿದ್ದಾರೆ. ಔರಂಗಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಏನು ಮಾಡಬೇಕೆಂದು ತೋಚದೆ ಕುಳಿತಿದ್ದಾರೆ.
ಮಾಂತ್ರಿಕನೊಬ್ಬ ಕನಸಿನಲ್ಲಿ ಬಂದು ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದು ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳೆ ಆಗ್ರಹ ಮಾಡಿದ್ದಾರೆ.
ಈ ಜನ್ಮ ರಾಶಿಯವರನ್ನು ಭೂತ ಕಾಡುತ್ತದೆ
ನನ್ನ ಮಗನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಕಾಳಿ ದೇವಾಲಯದ ಸಮೀಪ ಅಂಜನಿ ಕುಮಾರ್ ಎಂಬಾತನ ಭೇಟಿ ಮಾಡಿದ್ದೆ. ಆತ ಹೇಳಿದ ಎಲ್ಲ ಪೂಜೆಗಳನ್ನು ಮಾಡಿದೆ. ಆದರೆ ನನ್ನ ಮಗ ಸಾವನ್ನಪ್ಪಿದ. ಈಗ ಅದೇ ಮಾಂತ್ರಿಕ ನನ್ನ ಕನಸಿನಲ್ಲಿ ಬಂದು ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ದೂರಿನ ಆಧಾರದಲ್ಲಿ ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಾನು ಮಹಿಳೆ ಭೇಟಿ ಮಾಡಿದ್ದು ನಿಜ ಆದರೆ ಮುಂದೆ ಏನಾಯಿತು ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾನೆ. ಮಹಿಳೆ ಮಾನಸಿಕ ಸಮಸ್ಯೆ ಎದುರಿಸುತ್ತಿರುವಂತೆ ಕಂಡಿದ್ದು ಕುಟುಂಬಕ್ಕೆ ಮಾಹಿತಿ ನೀಡಿದ್ದೇವೆ. ಸೂಕ್ತ ಚಿಕಿತ್ಸೆ ನೀಡಲು ತಿಳಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಚಿತ್ರ ಪ್ರಕರಣ ದೊಡ್ಡ ಸುದ್ದಿ ಮಾಡಿದೆ.