ಮೆಟ್ರೋ ನಿಲ್ದಾಣದಲ್ಲಿ ಬೈಕ್‌ ಕದಿಯುತ್ತಿದ್ದ ಸೆಕ್ಯೂರಿಟಿ ಸೆರೆ

By Kannadaprabha NewsFirst Published Jul 14, 2022, 2:21 PM IST
Highlights

2 ವರ್ಷದಿಂದ ಆರ್‌ಆರ್‌ ನಗರದ ನಿಲ್ದಾಣದಲ್ಲಿ ಕಳ್ಳತನ ಮಾಡಿದ್ದ ಸೆಕ್ಯೂರಿಟಿ ಗಾರ್ಡ್  ಸೆರೆಯಾಗಿದ್ದಾನೆ. ಮದ್ಯ, ಜೂಜಾಟಕ್ಕಾಗಿ ಈ ಕೃತ್ಯ ಎಸಗುತ್ತಿದ್ದ ಎಂದು ತಿಳಿದುಬಂದಿದೆ ಈತನಿಂದ 12 ಲಕ್ಷದ ಬೈಕ್‌ಗಳ ವಶವಾಗಿದೆ.

 ಬೆಂಗಳೂರು (ಜು.14): ಮೋಜು ಮಸ್ತಿ ಜೀವನಕ್ಕಾಗಿ ಮೆಟ್ರೋ ನಿಲ್ದಾಣಗಳ ಬಳಿ ನಿಲ್ಲಿಸುವ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಖಾಸಗಿ ಕಂಪನಿ ಸೆಕ್ಯೂರಿಟಿ ಗಾರ್ಡ್‌ವೊಬ್ಬ ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಲಗ್ಗೆರೆ ಸಮೀಪದ ಕೆಂಪೇಗೌಡ ಲೇಔಟ್‌ ನಿವಾಸಿ ಶ್ರೀನಿವಾಸ್‌ ಬಂಧಿತನಾಗಿದ್ದು, ಆರೋಪಿಯಿಂದ .12.5 ಲಕ್ಷ ಮೌಲ್ಯದ 25 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ರಾಜಾಜಿ ನಗರ ಮೆಟ್ರೋ ನಿಲ್ದಾಣ ಬಳಿ ದೀಪಕ್‌ ಕುಮಾರ್‌ ಮಿಶ್ರಾ ಎಂಬುವರ ಬೈಕ್‌ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿದ್ದ ಶ್ರೀನಿವಾಸ್‌, ಮದ್ಯ ಹಾಗೂ ಜೂಜಾಟಾದ ವ್ಯಸನಿಯಾಗಿದ್ದ. ಈ ದುಶ್ಚಟಗಳಿಗೆ ಹಣ ಹೊಂದಿಸುವ ಸಲುವಾಗಿ ಆತ ಅಡ್ಡದಾರಿ ತುಳಿದಿದ್ದ. ಮೂರು ವರ್ಷಗಳ ಹಿಂದೆ ಆಕಸ್ಮಿಕವಾಗಿ ತನ್ನ ಬೈಕ್‌ನ ಕೀ ಬಳಸಿ ಬೇರೊಂದು ಬೈಕ್‌ಅನ್ನು ಸ್ಟಾರ್ಚ್‌ ಮಾಡಿ ಕಳವು ಮಾಡಿದ್ದ. ಇದಾದ ನಂತರ ಹಣದ ಅವಶ್ಯಕತೆ ಇದ್ದಾಗಲೆಲ್ಲ ಶ್ರೀನಿವಾಸ್‌ಗೆ ಬೈಕ್‌ ಕಳವನ್ನು ಕಳವು ಚಾಳಿ ಶುರುವಾಗಿದೆ.

ಎರಡು ವರ್ಷಗಳಿಂದ ಮೆಟ್ರೋ ನಿಲ್ದಾಣ ಸಮೀಪ ನಿಲ್ಲುವ ಬೈಕ್‌ಗಳನ್ನು ಆರೋಪಿ ಗುರಿಯಾಗಿಸಿದ್ದ. ಅದರಲ್ಲೂ ರಾಜಾಜಿ ನಗರ ಮೆಟ್ರೋ ನಿಲ್ದಾಣ ಹಾಗೂ ಅಕ್ಕಮಹಾದೇವಿ ಉದ್ಯಾನ ಬಳಿ ಬೈಕ್‌ಗಳನ್ನು ಶ್ರೀನಿವಾಸ್‌ ಕಳವು ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಕದ್ದ ಬೈಕ್‌ಗಳನ್ನು ಕೋಲಾರ ಹಾಗೂ ಆಂಧ್ರ ಪ್ರದೇಶದಲ್ಲಿ ದಾಖಲೆ ನೀಡುವುದಾಗಿ ಹೇಳಿ ಸ್ನೇಹಿತರಿಗೆ 5ರಿಂದ 10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಆರೋಪಿ ಮೋಜು ಮಸ್ತಿ ಮಾಡುತ್ತಿದ್ದ.

Latest Videos

Nomads Drug Peddlers; ಅಲೆಮಾರಿ ಸೋಗಲ್ಲಿ ಗ್ಯಾಂಗ್‌ನಿಂದ ಡ್ರಗ್ ಸಪ್ಲೈ!

ಜ್ಯೋತಿಷಿ ಮನೆಯಲ್ಲಿ ದರೋಡೆ ಮಾಡಿಸಿದ್ದು ಆಪ್ತ ಸಹಾಯಕಿ!: ಬೆಂಗಳೂರಿನಲ್ಲಿ ನಾಲ್ಕು ದಿನಗಳ ಹಿಂದೆ ಜ್ಯೋತಿಷಿ ಪ್ರಮೋದ್‌ ಮನೆ ದರೋಡೆ ಪ್ರಕರಣ ಸಂಬಂಧ ಅವರ ಆಪ್ತ ಸಹಾಯಕಿ ಸೇರಿದಂತೆ ನಾಲ್ವರನ್ನು ಕೆಂಗೇರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಮೋದ್‌ ಆಪ್ತ ಸಹಾಯಕಿ ಮೇಘನಾ ಈ ಕೃತ್ಯದ ಮಾಸ್ಟರ್‌ ಮೈಂಡ್‌ ಆಗಿದ್ದು, ತನ್ನ ಸ್ನೇಹಿತರ ಮೂಲಕ ಆಕೆ ದರೋಡೆ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಜು.9 ರಂದು ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದ ಪ್ರಮೋದ್‌ ಮನೆಗೆ ನುಗ್ಗಿದ ಆರೋಪಿಗಳು, ಜ್ಯೋತಿಷಿ ಮನೆಯಲ್ಲಿದ್ದ ಲಾಕರ್‌ ಸಮೇತ 400 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರು. ನಗದು ದೋಚಿದ್ದರು. ಹಲವು ದಿನಗಳಿಂದ ಅವಿವಾಹಿತ ಪ್ರಮೋದ್‌ ಅವರಿಗೆ ಆಪ್ತ ಸಹಾಯಕಿಯಾಗಿದ್ದ ಮೇಘನಾಳಿಗೆ, ಪ್ರಮೋದ್‌ ಹಣಕಾಸು ವಹಿವಾಟಿನ ಬಗ್ಗೆ ಸ್ಪಷ್ಟಮಾಹಿತಿ ಇತ್ತು. ಹಣ ಹಾಗೂ ಆಭರಣ ದೋಚುವ ಸಲುವಾಗಿಯೇ ಆಕೆ ದರೋಡೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!