ಫೋರ್ಡ್ ಐಕಾನ್ ಕಾರಿನ ಹಿಂದಿನ ಸೀಟಿನಲ್ಲಿ ವ್ಯಕ್ತಿ ಶವ ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿದೆ
ಬೈಂದೂರು(ಜು.14): ಇಲ್ಲಿಗೆ ಸಮೀಪದ ಹೇನ್‌ಬೇರು ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ವ್ಯಕ್ತಿಯೊಬ್ಬ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬುಧವಾರ ಮುಂಜಾನೆ ಪತ್ತೆಯಾಗಿದೆ. ಕಾರು ಕೂಡ ಸಂಪೂರ್ಣ ಸುಟ್ಟುಹೋಗಿದ್ದು, ಅನುಮಾನಸ್ಪದ ರೀತಿಯಲ್ಲಿ ಕಂಡುಬಂದಿದೆ. ಫೋರ್ಡ್ ಐಕಾನ್ ಕಾರಿನ ಹಿಂದಿನ ಸೀಟಿನಲ್ಲಿ ವ್ಯಕ್ತಿ ಶವ ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿದೆ. ಪೆಟ್ರೋಲ್ ತುಂಬಿಸಿಕೊಂಡು ಬಂದಿರುವ ಸಂಶಯವಿದ್ದು, ಸಮೀಪದಲ್ಲೇ ಖಾಲಿ ಬಾಟಲಿ ಕಂಡು ಬಂದಿದ್ದು, ಇನ್ನಷ್ಟು ಅನುಮಾನಸ್ಪದಕ್ಕೆ ಕಾರಣವಾಗಿದೆ.
ಕಾರಿನ ನಂಬರ್ ಪ್ಲೇಟ್ ಸೇರಿದಂತೆ ಸಂಪೂರ್ಣ ಸುಟ್ಟು ಹೋಗಿದ್ದು, ಹೀಗಾಗಿ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಕೊಂಡಂತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಶಂಕೆಯೂ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಆನಂದ ಕಾಯ್ಕಿಣಿ, ಠಾಣಾ ಉಪನಿರೀಕ್ಷಕ ಪವನ ನಾಯ್‌್ಕ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
undefined
ಲವ - ಕುಶರನ್ನು ಹತ್ಯೆ ಮಾಡಿದ್ದ ಹಂದಿ ಅಣ್ಣಿ ಬರ್ಬರ ಕೊಲೆ ಮತ್ತು ಮುನ್ನೆಲೆಗೆ ಬಂದ ಶಿವಮೊಗ್ಗ ಭೂಗತಲೋಕ
ಪಾವಂಜೆ ಸೇತುವೆಯಲ್ಲಿ ಹಾರಿದ ವ್ಯಕ್ತಿಯ ಶವ ಪತ್ತೆ
ಮೂಲ್ಕಿ: ರಾಷ್ಟ್ರೀಯ ಹೆದ್ದಾರಿಯ ಪಾವಂಜೆಯ ಸೇತುವೆಯಲ್ಲಿ ಮಂಗಳವಾರ ರಾತ್ರಿ ಬೈಕ್ ಇಟ್ಟು ನದಿಗೆ ಹಾರಿದ ವ್ಯಕ್ತಿಯ ಶವ ಪಾವಂಜೆ ಸೇತುವೆ ಬಳಿ ನದಿಯಲ್ಲಿ ಪತ್ತೆಯಾಗಿದೆ.
ಮಂಡ್ಯ ಮದ್ದೂರು ತೂಬಿನಕೆರೆ ನಿವಾಸಿ ರಾಕೇಶ್ ಗೌಡ (26) ಮಂಗಳವಾರ ರಾತ್ರಿಯ ಅವಧಿಯಲ್ಲಿ ನದಿಗೆ ಹಾರಿರಬೇಕೆಂದು ಅಂದಾಜಿಸಲಾಗಿದ್ದು ಬುಧವಾರ ಬೆಳಗ್ಗಿನಿಂದ ಅಗ್ನಿ ಶಾಮಕ ದಳ ಹಾಗೂ ಎಸ್‌ಆರ್‌ಡಿಎಫ್ ಪಡೆ ನದಿಯಲ್ಲಿ ಪಾವಂಜೆ ಸೇತುವೆಯಿಂದ ಸಸಿಹಿತ್ಲು ವರೆಗೆ ಹುಡುಕಾಟ ನಡೆಸಿದ್ದು ಮಧ್ಯಾಹ್ನದ ಅವಧಿಯಲ್ಲಿ ಶವ ಪತ್ತೆಯಾಗಿದೆ.
ರಾಕೇಶ್ ಆರು ತಿಂಗಳ ಹಿಂದೆ ಮಂಗಳೂರಿನ ಅಂಚೆ ಕಚೇರಿಯಲ್ಲಿ ಉದ್ಯೋಗಕ್ಕೆ ಸೇರಿದಂತೆ ಪಿಜಿಯಲ್ಲಿ ಉಳಿದು ಕೊಂಡಿದ್ದು ಮಂಗಳವಾರ ರಾತ್ರಿ ಸ್ನೇಹಿತನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ನದಿಗೆ ಹಾರಿರಬೇಕು ಎಂದು ಶಂಕಿಸಲಾಗಿದೆ.