ಚಿತ್ರದುರ್ಗ: ಬಡವರ ಆಶ್ರಯ ಮನೆ ಯೋಜನೆಯಲ್ಲೂ ಅಕ್ರಮದ ವಾಸನೆ

By Suvarna NewsFirst Published Jun 23, 2022, 4:27 PM IST
Highlights

* ಆಶ್ರಯ ಮನೆ ಯೋಜನೆಯಲ್ಲೂ ಅಕ್ರಮದ ವಾಸನೆ
* ಇದ್ದಂತವರಿಗೆ ಆಶ್ರಯ ಮನೆ ವಿತರಿಸಲಾಗಿದೆ ಎಂದು  ಗಂಭೀರ ಆರೋಪ.
* ಅಧಿಕಾರಿಗಳ ಯಡವಟ್ಟಿನಿಂದ  ಮನೆ ಸಿಗದೇ ಫಲಾನುಭವಿಗಳು ಪರದಾಟ.

ವರದಿ; ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ, (ಜೂನ್.23) :
ಬಡವರು, ಸೂರಿಲ್ಲದವರು, ನಿರ್ಗತಿಕರ ಪಾಲಿಗೆಂದೆ ಜನ್ಮತಾಳಿದ ಸರ್ಕಾರದ ಯೋಜನೆ ಅಂದ್ರೆ ಆಶ್ರಯ ಮನೆಗಳ ಯೋಜನೆ. ಆದರೆ ಬಡವರಿಗೆ ಎಷ್ಟರಮಟ್ಟಿಗೆ ಅನುಕೂಲ ಆಯ್ತು ಬಿಡ್ತೋ ಗೊತ್ತಿಲ್ಲ. ಬಡವರ ಬದಲು ಬಲಿತವರ ಕಲ್ಯಾಣವಂತು ಆಗ್ತಿದೆ ಅನ್ನೋ ಅನುಮಾನಗಳು ಮೂಡತೊಡಗಿದೆ. ಅಷ್ಟಕ್ಕೂ ಬಡವರ ಆಶ್ರಯ ಮನೆಯ ಯೋಜನೆಯಲ್ಲೂ ಅಕ್ರಮದ ವಾಸನೆ ಕೇಳಿ ಬಂದಿರುವುದು ಎಲ್ಲಿ ಗೊತ್ತಾ..? ಈ ಸ್ಟೋರಿ ನೋಡಿ..!

ಆಶ್ರಯ ಮನೆ ಅಂದ್ರೆ ಸಾಕು ಬಡವರು ,ನಿರ್ಗತಿಕರ ಪಾಲಿನ  ಸಂಜೀವಿನಿ. ಆದರೆ ನೈಜ ಫಲಾನುಭವಿಗಳ ಹೊರತು ನಕಲಿ ಫಲಾನುಭವಿಗಳಿಗೆ ಹಣ ಮಾಡುವ ದಂಧೆ ಆಗ್ತಿದ್ಯಾ ಅನ್ನೋ ಅನುಮಾನ  ಕೋಟೆನಾಡು ಚಿತ್ರದುರ್ಗದಲ್ಲಿ ಮೂಡಿದೆ. ಚಿತ್ರದುರ್ಗ ನಗರಸಭೆಯಿಂದ ವಿತರಿಸುವ ಆಶ್ರಯ ಮನೆ ಯೋಜನೆಯಲ್ಲಿ ಅಕ್ರಮದ ಗಾಟು ಜೋರಾಗಿ ಬೀಸತೊಡಗಿದೆ. ನಗರದ ವಿವಿಧ ಭಾಗಗಳಲ್ಲಿ ಆಶ್ರಯ ಮನೆ ಯೋಜನೆ ಅಡಿಯಲ್ಲಿ ನೊಂದ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡುವ ಬದಲು  ಪ್ರಭಾವಿಗಳಿಗೆ ಒಂದಲ್ಲ, ಎರಡಲ್ಲ ಮೂರ್ನಾಲ್ಕು ಮನೆಗಳನ್ನು ಚಿತ್ರದುರ್ಗ ನಗರಸಭೆ ಮಾಡಿಕೊಟ್ಟಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಮೃಗಾಲಯ ಅಂತ ದೊಡ್ಡ ಬೋರ್ಡ್, ಒಳಗೆ ಹೋಗಿ ನೋಡಿದ್ರೆ ಖಾಲಿ ಬೋನ್

ಅಲ್ಲದೇ ನೈಜ ಫಲಾನುಭವಿಗಳನ್ನು ಗುರುತಿಸುವಲ್ಲಿ ಎಡವಟ್ಟು ಮಾಡಿಕೊಂಡಿರುವ  ಚಿತ್ರದುರ್ಗ ನಗರಸಭೆ ಅಧಿಕಾರಗಳು ಅವರ ಸ್ವಾರ್ಥಕ್ಕಾಗಿ ಅಮಾಯಕ 124 ಜನ ನಿರ್ಗತಿಕರಿಗೆ ಮೋಸ ಮಾಡಿದೆಯಂತೆ. ಸುಖಾ ಸುಮ್ನೆ ನಿವೇಶನಕ್ಕಾಗಿ ಅಲೆದಾಡಿಸುತ್ತಿದೆಯಂತೆ. ಹೀಗಾಗಿ ಅರ್ಹ ಫಲಾನುಭವಿಗಳು ಕಂಗಾಲಾಗಿ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ

ಇನ್ನು ನಗರದ  ನೈಜ ಫಲಾನುಭವಿಗಳನ್ನು ಗುರುತಿಸುವ ಭರದಲ್ಲಿ ನಕಲಿ ಫಲಾನುಭವಿಗಳಿಗೆ ಮನೆ ವಿತರಿಸಿ, ಅರ್ಹ ಬಡವರಿಗೆ ಮನೆ ನೀಡುವಲ್ಲಿ ನಗರಸಭೆ ವಿಫಲವಾಗಿದೆ. ಅಲ್ಲದೇ ಅವರಲ್ಲೂ ಕೆಲ ನೈಜ ಫಲಾನುಭವಿಗಳಿಗೆ ಮನೆ ತಲುಪಿತ್ತು. ಆದ್ರೆ ಇದೇ ನೆಪದಲ್ಲಿ ಅವರ ಹಕ್ಕುಪತ್ರವನ್ನು ಸಹ ಖಾತೆ ಮಾಡಿಕೊಡದೇ ಕೋರ್ಟ್ ನೆಪವೊಡ್ಡಿ ತಡೆಹಿಡಿದಿದ್ದೂ, ಬಲಗೈಯಲ್ಲಿ ಕೋಟ್ಟು ಎಡಗೈಯಲ್ಲಿ ಮನೆಗಳನ್ನು ಕಿತ್ತುಕೊಂಡಿದ್ದಾರೆನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಚಿತ್ರದುರ್ಗ ನಗರಸಭೆ ಪೌರಾಯುಕ್ತರನ್ನು ಕೇಳಿದ್ರೆ ನಾನು ಮಾಡಿದ ಸರ್ವೇಯಲ್ಲಿ ಅವರು ಮನೆಯಲ್ಲಿ ವಾಸ ಮಾಡುತ್ತಿಲ್ಲ ಹೀಗಾಗಿ ಈ ರೀತಿ ಕ್ರಮ ಕೈಗೊಂಡಿದ್ದೇವೆ. ಅಂತಹ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಿ ಎಂದು ಸಬೂಬು ಹೇಳ್ತಿದ್ದಾರೆ.

ಒಟ್ಟಾರೆ ಚಿತ್ರದುರ್ಗ ನಗರಸಭೆ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಸತ್ಯ ಅಸತ್ಯಗಳ ಪರಾಮರ್ಶೆಯಲ್ಲಿ ನೊಂದವರ ಪಾಲಿನ ಯೋಜನೆ ಹೆಸರಲ್ಲಿ ಅಕ್ರಮ ಎಸಗುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಆಶ್ರಯ ಮನೆ ಕೊಟ್ಟವರಿಗೆ ಮತ್ತೆ ಮತ್ತೆ ನೀಡಿ ನೈಜ ಫಲಾನುಭವಿಗಳಿಗೆ ಅನ್ಯಾಯ ಮಾಡಿದೆ. ಹೀಗಾಗಿ ಸರ್ಕಾರ ಈ ಕೂಡಲೇ ಸೂಕ್ತ ತನಿಖೆ ನಡೆಸಿ ನೊಂದವರ ಪಾಲಿಗೆ ನ್ಯಾಯ ಒದಗಿಸಬೇಕಿದೆ.

click me!