Bengaluru Crime News: ಬೆಂಗಳೂರಲ್ಲಿ ಬೀಡು ಬಿಟ್ಟಿದೆ ಮಂಕಿ ಗ್ಯಾಂಗ್: ಐಶಾರಾಮಿ ಅಪಾರ್ಟ್‌ಮೆಂಟ್‌ಗಳೇ ಟಾರ್ಗೇಟ್

By Suvarna News  |  First Published Jun 23, 2022, 3:43 PM IST

ನಗರಕ್ಕೆ ತಮಿಳುನಾಡು ಮೂಲದ ಮಂಕಿ ಗ್ಯಾಂಗ್ ಒಂದು ಎಂಟ್ರಿಯಾಗಿದೆ. ಐಶಾರಾಮಿ ಪಾರ್ಟ್‌ಮೆಂಟ್‌ಗಳನ್ನು ಟಾರ್ಗೇಟ್ ಮಾಡುವ ಈ ಮಂಕಿ ಗ್ಯಾಂಗ್,  ಅಪಾರ್ಟ್ ಮೆಂಟ್ ಕಾಂಪೌಂಡ್ ಹಾರಿ ನಂತರ ತಮ್ಮ ಕೈ ಚಳಕ ತೋರಿಸುತ್ತಿದೆ. 


ವರದಿ:  ಪ್ರದೀಪ್ ಕಗ್ಗೆ

ಬೆಂಗಳೂರು (ಜೂ. 23): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ (Bengaluru Crime News)ಮಂಕಿ ಗ್ಯಾಂಗ್ ಒಂದು ಸದ್ದಿಲ್ಲದೇ ಬೀಡು ಬಿಟ್ಟಿದೆ. ಐಶಾರಾಮಿ ಅಪಾರ್ಟ್‌ಮೆಂಟ್‌ಗಳನ್ನೇ (Apartments)ಟಾರ್ಗೇಟ್ ಮಾಡುತ್ತಿರುವ ಖದೀಮರು, ಕಾಂಪೌಂಡ್ ಜಿಗಿದು ಫ್ಲ್ಯಾಟ್‌ಗೆ ಎಂಟ್ರಿಯಾಗಿ ಚಿನ್ನಾಭರಣ ದೋಚುತ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ಈ ಖದೀಮರು ಪೋನ್ ಬಳಸಲ್ಲ, ಹಣವನ್ನಂತೂ ಮುಟ್ಟೋದೆ ಇಲ್ಲ. 

Tap to resize

Latest Videos

ಹೀಗೆ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಹೊಸ ಮಂಕಿ ಗ್ಯಾಂಗಿನ ಕಿಂಗ್ ಪಿನ್ ಇಸೈರಾಜ್. ನಗರಕ್ಕೆ ತಮಿಳುನಾಡು (Tamil Nadu) ಮೂಲದ ಮಂಕಿ ಗ್ಯಾಂಗ್ ಒಂದು ಎಂಟ್ರಿಯಾಗಿದೆ. ಐಶಾರಾಮಿ ಪಾರ್ಟ್‌ಮೆಂಟ್‌ಗಳನ್ನು ಟಾರ್ಗೇಟ್ ಮಾಡುವ ಈ ಮಂಕಿ ಗ್ಯಾಂಗ್,  ಅಪಾರ್ಟ್ ಮೆಂಟ್ ಕಾಂಪೌಂಡ್ ಹಾರಿ ನಂತರ ತಮ್ಮ ಕೈ ಚಳಕ ತೋರಿಸುತ್ತಿದೆ. 

ಪೈಪ್‌ಗಳ ಮೂಲಕ ಹತ್ತುವ ಕಲೆ ಕರಗತ ಮಾಡಿಕೊಂಡಿರುವ ಖದೀಮರು ಸ್ಲೈಡ್ ವಿಂಡೋಗಳ ಮೂಲಕ ಮನೆಗೆ ಒಳನುಗುತ್ತಾರೆ. ಹೀಗೆ ಎಂಟ್ರಿಯಾಗೋ ಮಂಕಿ ಗ್ಯಾಂಗ್ ಖದೀಮರು ಚಿನ್ನಾಭರಣ ಬಿಟ್ಟು ಬೇರೆ ಏನು ಮುಟ್ಟೊದಿಲ್ವಂತೆ. ಹಣ ಹೋದರೆ ಮಾಲೀಕರಿಗೆ ಗೊತ್ತಾಗುತ್ತೆ, ಚಿನ್ನಾಭರಣ ಕಳುವಾದರೆ ಅಷ್ಟು ಬೇಗ ಗೊತ್ತಾಗಲ್ಲ ಎಂದು ಈ ರೀತಿಯಾಗಿ ಕೃತ್ಯವೆಸಗುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 12 ವರ್ಷದ ಮಗಳಿಗೆ ಎರಡೆರಡು ಬಾರಿ ಮದ್ವೆ: ತಾಯಿಯ ಬಂಧನ

ಇನ್ನೂ ಮೊಬೈಲ್ ಪೋನ್ (Smartphone) ಬಳಸಿದರೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಮೊಬೈಲ್‌ಗಳನ್ನು ಸಹ ಈ ಗ್ಯಾಂಗ ಬಳಸುತ್ತಿಲ್ಲ.  ಸದ್ಯ ಸಿಸಿಟಿವಿ ದೃಶ್ಯ ಆದರಿಸಿ ಗ್ಯಾಂಗಿನ ಕಿಂಗ್ ಪಿನ್ ಇಸೈರಾಜ್ ಬಂಧಿಸಿರುವ  ಸಂಪಿಗೆಹಳ್ಳಿ ಪೊಲೀಸರು (Sampigehalli Police) ಮಂಕಿ ಗ್ಯಾಂಗ್ ಕೈಚಳಕವನ್ನ ಹೊರಹಾಕಿದ್ದಾರೆ.  ತಮಿಳುನಾಡಿನಿಂದ ಬರುವ ಈ ಗ್ಯಾಂಗ್ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಲು ಐಶಾರಾಮಿ ಹೋಟೆಲುಗಳಲ್ಲಿ ಉಳಿದುಕೊಳ್ಳುತ್ತಿದ್ದಾಗಿ ತಿಳಿದು ಬಂದಿದೆ.

ಸದ್ಯ ಆರೋಪಿಯ ಬಂಧನದಿಂದ ಸಂಜಯನಗರ  ,ದೇವನಹಳ್ಳಿ, ಸಂಪಿಗೆಹಳ್ಳಿ, ಯಲಹಂಕ, ಅಮೃತಹಳ್ಳಿ ಸೇರಿದಂತೆ 21 ಕಡೆ ಅಪಾರ್ಟ್‌ಮೆಂಟ್‌ಗಳಲ್ಲಿ  ಕೈಚಳಕ ತೋರಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರೆದಿದ್ದು ಇತರ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

click me!