ಶಿವಮೊಗ್ಗ; ಬಾವಿಯೊಳಗೆ ಶ್ರೀಗಂಧ ಅಡಗಿಸಿಟ್ಟಿದ್ದರು. ಚಾಲಾಕಿಗಳು!

By Suvarna News  |  First Published Dec 2, 2020, 9:40 PM IST

ಚಾಲಾಕಿ ಶ್ರೀಗಂಧ ಚೋರರು/  ಬಾವಿಯೊಳಗೆ ಶ್ರೀಗಂಧದ ತುಂಡುಗಳನ್ನು ಬಚ್ಚಿಟ್ಟಿದ್ದವರು ಸಿಕ್ಕಿಬಿದ್ದರು/ 3 ಲಕ್ಷ ಮೌಲ್ಯದ 38 ಕೆಜಿ ಶ್ರೀಗಂಧ ವಶ/ ಹೊಸನಗರ ವಲಯ ಅರಣ್ಯಾಧಿಕಾರಿ ಕೃಷ್ಣ ಅಣ್ಣಯ್ಯಗೌಡ  ಹಾಗೂ ಅರಣ್ಯ ಸಂಚಾರಿ ದಳದ ಎಸಿ ಎಫ್ ಬಾಲಚಂದ್ರ ನೇತೃತ್ವದಲ್ಲಿ ನಡೆದ ದಾಳಿ 


ಶಿವಮೊಗ್ಗ(  ಡಿ. 02)  ಬಾವಿಯೊಳಗೆ ಬರೋಬ್ಬರಿ 38 ಕೆಜಿ ಶ್ರೀಗಂಧ ಬಚ್ಚಿಟ್ಟಿದ್ದ ಭೂಪ ಸಿಕ್ಕಿಬಿದ್ದಿದ್ದಾನೆ. ಶಿವಮೊಗ್ಗ ಅರಣ್ಯ ಸಂಚಾರಿ ದಳ ಮತ್ತು ಹೊಸನಗರ ವಲಯ ಅರಣ್ಯಾಧಿಕಾರಿ ಜಂಟಿ ಕಾರ್ಯಾಚರಣೆಯಲ್ಲಿ  ತಂಡವೊಂದು ಸಿಕ್ಕಿಬಿದ್ದಿದೆ.

ಅಕ್ರಮವಾಗಿ ಬಾವಿಯೊಂದರಲ್ಲಿ ಬಚ್ಚಿಟ್ಟಿದ್ದ ಅಂದಾಜು 3 ಲಕ್ಷ ಮೌಲ್ಯದ 38 ಕೆಜಿ ಶ್ರೀಗಂಧ ವಶಕ್ಕೆ ಪಡೆಯಲಾಗಿದೆ ಹೊಸನಗರ ಅರಣ್ಯ ವಲಯ ವ್ಯಾಪ್ತಿಯ ಬಾಣಿಗ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ಬಂಧನ ಮಾಡಲಾಗಿದೆ. 

Tap to resize

Latest Videos

ಸ್ಮಶಾನದ ಬಳಿ ಸಿಕ್ಕ ಒಂಟಿ ಕಾರು ಹೇಳಿದ ಮೂವತ್ತು ಕೋಟಿ ಕತೆ

ಅಕ್ರಮವಾಗಿ ಶ್ರೀಗಂಧ ತುಂಡುಗಳನ್ನು ಸಂಗ್ರಹಿಸಿದ್ದ ಬಾಣಿಗ ಗ್ರಾಮದ ಹನೀಫ್ ಸಾಬ್ ನನ್ನು ಬಂಧಿಸಲಾಗಿದೆ. ಯಾರಿಗೂ ಗೊತ್ತಾಗದಂತೆ ಬಾವಿಯೊಳಗೆ ಪಂಪಸೆಟ್ ಇಳಿಸುವಂತೆ ಶ್ರೀಗಂಧವನ್ನು ಚೀಲದೊಳಗೆ ತುಂಬಿ ಬಾವಿಗೆ ಇಳಿಸಿಟ್ಟಿದ್ದ. ಆರೋಪಿಯ ಚಾಣಾಕ್ಷತೆಯನ್ನು ಭೇದಿಸಿದ ಅಧಿಕಾರಿಗಳು ಶ್ರೀಗಂಧವನ್ನು ವಶ ಪಡಿಸಿಕೊಂಡಿದ್ದಾರೆ.

ಆರೋಪಿ ಹನೀಫ್ ಜೊತೆಗೆ ಮಂಜುನಾಥ್, ಹೊಸಕೆಸರೆ ಗ್ರಾಮದ ಹಾಲೇಶ್ , ಮತ್ತು ಸಾಗರದ  ಮಂಜುನಾಥ್ ಎಂಬುವವರ ಬಂಧನ ಮಾಡಲಾಗಿದೆ. ಹೊಸನಗರ ವಲಯ ಅರಣ್ಯಾಧಿಕಾರಿ ಕೃಷ್ಣ ಅಣ್ಣಯ್ಯಗೌಡ  ಹಾಗೂ ಅರಣ್ಯ ಸಂಚಾರಿ ದಳದ ಎಸಿ ಎಫ್ ಬಾಲಚಂದ್ರ ನೇತೃತ್ವದಲ್ಲಿ ನಡೆದ ದಾಳಿ ನಡೆಸಲಾಗಿತ್ತು

 

click me!