ಕಾಮಪಿಶಾಚಿ;  ಕೆಲಸ ಅರಸಿ ಬಂದ ಬಳ್ಳಾರಿ ಬಾಲಕಿ ಮಂಡ್ಯದ ಹೊಲದಲ್ಲಿ ಶವವಾದಳು!

By Suvarna News  |  First Published Dec 2, 2020, 8:03 PM IST

ಕೆಲಸ ಅರಸಿ ಬಂದ ಕುಟುಂಬದ ಬಾಲಕಿ ಮೇಲೆ ಕಿರಾತಕಮನ ಕಣ್ಣು/ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರಕ್ಕೆ ಯತ್ನ/ ಬಾಲಕಿ ಹತ್ಯೆ ಮಾಡಿದ ಪಾಪಿ/ ಮಂಡ್ಯದಿಂದ ಘಟನೆ ವರದಿ


ಮಂಡ್ಯ(ಡಿ. 02)  ಬಾಲಕಿಯನ್ನೂ ಬಿಡದ ಕಿರಾತಕ ಕಬ್ಬು ಕಟಾವಿಗೆ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಕಬ್ಬಿನ ಕದ್ದೆಯಲ್ಲೇ ಬಾಲಕಿ ಹೆಣವಾಗಿದ್ದಾಳೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುರುಗಲವಾಡಿ ಗ್ರಾಮದಲ್ಲಿ ಕೃತ್ಯ ನಡೆದಿದೆ  ಆರತಿ ಬಾಯಿ 12 ವರ್ಷ, ಭೀಕರವಾಗಿ ಕೊಲೆಯಾದ ಬಾಲಕಿ.

Tap to resize

Latest Videos

undefined

ಬಾಲಕಿ ಮೇಲೆ ಎರಗಿದ ಟಿವಿ ಜರ್ನಲಿಸ್ಟ್

ಮೂಲತಃ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕುಟುಂಬ ಕೆಲಸ ಅರಸಿ  ಬಂದಿದ್ದರು. ಹುರಗಲವಾಡಿ ಗ್ರಾಮದ ರೈತ ಚೆಲುವರಾಜ್ ಎಂಬವರ ಕಬ್ಬಿನಗದ್ದೆಯಲ್ಲಿ ಘಟನೆ ನಡೆದಿದೆ. ಕಬ್ಬು ಕಟಾವು ಮಾಡುತ್ತಿದ್ದ ಆರತಿ ಬಾಯಿಯನ್ನು ಆರೋಪಿ ಎಳೆದು ಒಯ್ದಿದ್ದಾನೆ. ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!