ಡ್ರಗ್ಸ್ ಘಾಟು; ನಿರೂಪಕ ಅಕುಲ್ ಬಾಲಾಜಿ ಜತೆ ಪ್ರಭಾವಿ 'ಕೈ' ನಾಯಕನ ಪುತ್ರನಿಗೂ ನೋಟಿಸ್

By Suvarna News  |  First Published Sep 18, 2020, 2:40 PM IST

ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು/  ನಿರೂಪಕ, ನಟ ಅಕುಲ್ ಬಾಲಾಜಿಗೆ ಸಿಸಿಬಿ ನೋಟೀಸ್ / ಸದ್ಯ ಹೈದರಾಬಾದ್ ನಲ್ಲಿರುವ ಅಕುಲ್ ಬಾಲಾಜಿ/ ಸಿಸಿಬಿ ನೊಟೀಸ್ ತಲುಪಿದೆ ಶನಿವಾರ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ ಎಂದ ಬಾಲಾಜಿ


ಬೆಂಗಳೂರು( ಸೆ.18) ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನಲ್ಲಿ ಹೊಸ ಹೊಸ ಹೆಸರುಗಳು ಕೇಳಿಬರುತ್ತಿದ್ದು  ನಟ, ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಮೂವರಿಗೆ ಸಿಸಿಬಿ ನೋಟಿಸ್ ನೀಡಿದೆ.

"

Tap to resize

Latest Videos

ಸದ್ಯ ಹೈದರಾಬಾದ್ ನಲ್ಲಿರುವ ಅಕುಲ್ ಬಾಲಾಜಿ  ಸಿಸಿಬಿ ನೊಟೀಸ್ ತಲುಪಿದೆ  ಎಂದಿದ್ದಾರೆ. ಶನಿವಾರ ವಿಚಾರಣೆಗೆ ಹಾಜರಾಗಲು ತಿಳಿಸಿದ್ದು ಬರುತ್ತೇನೆ ಎಂದು  ಸುವರ್ಣ ನ್ಯುಸ್ ಗೆ ಅಕುಲ್ ಬಾಲಾಜಿ ಹೇಳಿಕೆ ನೀಡಿದ್ದಾರೆ.

ರಾಗಿಣಿಯನ್ನು ಜೈಲಿನಲ್ಲೇ ಬಿಗಿದಪ್ಪಿದ ಸಂಜನಾ

undefined

ಈಗ ತಾನೆ ಸಿಸಿಬಿ ನೋಟೀಸ್ ನೋಡಿದೆ . ಯಾವುದೇ ಸಮಸ್ಯೆ ಇಲ್ಲ. ಸದ್ಯ ನಾನು ಹೈದ್ರಾಬಾದ್ ನಲ್ಲಿದ್ದೆನೆ . ಮೂರು‌ ತಿಂಗಳಿಂದ ಫ್ಯಾಮಿಲಿ ಜೊತೆ ಇಲ್ಲೇ ಇದ್ದೆವೆ. ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅಕುಲ್ ತಿಳಿಸಿದ್ದಾರೆ.

"

ಅಕುಲ್ ಜತೆಗೆ ವಿ.ದೇವರಾಜ್ ಮಗ ಯುವರಾಜ್, ಸಂತೋಷ್ ಗೆ ನೋಟಿಸ್ ನೀಡಲಾಗಿದ್ದು ವಿಚಾರಣೆಗೆ ಬರಲುನ ಸೂಚಿಸಲಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ಸಂಜನಾ ಹಾಗೂ ನಟಿ ರಾಗಿಣಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನು ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ವಿಚಾರಣೆ ಸಿಸಿಬಿ ನಡೆಸಿದ್ದು ಇದು ಮತ್ತೊಂದು ಹಂತ. 

click me!