ಬೆಂಗಳೂರು: ಕಂಡಕ್ಟರ್ ಮೇಲಿನ ಆ್ಯಸಿಡ್ ದಾಳಿ‌ ಹಿಂದೆ ಮೈದುನ -ಅತ್ತಿಗೆಯ ಪ್ರೇಮ್ ಕಹಾನಿ

Published : Dec 21, 2019, 08:32 PM IST
ಬೆಂಗಳೂರು: ಕಂಡಕ್ಟರ್ ಮೇಲಿನ ಆ್ಯಸಿಡ್ ದಾಳಿ‌ ಹಿಂದೆ ಮೈದುನ -ಅತ್ತಿಗೆಯ ಪ್ರೇಮ್ ಕಹಾನಿ

ಸಾರಾಂಶ

ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿದ್ದ ಘಟನೆ ಬೆಂಗಳೂರಿನ ಬಾಗಲಗುಂಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಅಸಲಿ ಕಾರಣವನ್ನು ಕಕ್ಕಿದ್ದಾನೆ. ಏನದು..? ಈ ಕೆಳಗಿನಂತಿದೆ ನೋಡಿ ಆ್ಯಸಿಡ್ ದಾಳಿ ಹಿಂದಿನ ಅಸಲಿ ಕಹನಿ....

ಬೆಂಗಳೂರು, [ಡಿ.21]: ಬೆಂಗಳೂರಿನ ಬಾಗಲಗುಂಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.19ರಂದು ಕರ್ತವ್ಯ ನಿರತ ಮಹಿಳಾ ಕಂಡಕ್ಟರ್​ ಮೇಲೆ ನಡೆದಿದ್ದ ಆ್ಯಸಿಡ್​ ದಾಳಿಗೆ ಅಸಲಿ ಕಾರಣ ಬಯಲಾಗಿದೆ. 

ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್​ ದಾಳಿಯ ಹಿಂದೆ ಮೈದುನ-ಅತ್ತಿಗೆಯ ಲವ್​ ಕಹಾನಿ ಇದೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ರಾಜ್ಯದಲ್ಲಿ ಮತ್ತೆ ಆ್ಯಸಿಡ್‌ ದಾಳಿ : ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ

ಡಿ.16ರಂದು ಬಾಗಲಗುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಕಂಡಕ್ಟರ್​ ಇಂದಿರಾ ಬಾಯಿ ಎನ್ನುವವರ ಮೇಲೆ ಸ್ಕೂಟರ್​ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಆ್ಯಸಿಡ್​ ದಾಳಿ ನಡೆಸಿದ್ದರು.  ಪರಿಣಾಮ ಮುಖ, ಕೈ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಗಾಯಗಳಾಗಿದ್ದು, ಸದ್ಯಕ್ಕೆ ಇಂದಿರಾ ಬಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆ್ಯಸಿಡ್​ ದಾಳಿ ಹಿಂದೆ ಲವ್ ಕಹಾನಿ
ಹೌದು...ಕಂಡಕ್ಟರ್ ಮೇಲಿನ ಆ್ಯಸಿಡ್​ ದಾಳಿ ಹಿಂದೆ ಪ್ರೇಮ್ ಕಹಾನಿ ಇದೆ. ಈ ಪ್ರಕರಣದ ಕಾರಣ ಏನು ಎಂದು ತನಿಖೆ ಶುರು ಮಾಡಿದ ಪೊಲೀಸರಿಗೆ ಇದು ಮೈದುನನೇ ನಡೆಸಿದ ಕೃತ್ಯ ಎಂಬ ಸಂಗತಿ ಬಯಲಾಗಿದೆ.

ಪೀಣ್ಯಾದ 9ನೇ ಡಿಪೋದ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಇಂದಿರಾಬಾಯಿ ಕರ್ತವ್ಯ ನಿರ್ವಹಿಸುತ್ತಿದ್ದರು, ಇವರ ಜತೆ ಅದೇ ಡಿಪೋದಲ್ಲಿ ಇಂದಿರಾಬಾಯಿ ಮೈದುನ ಅರುಣ್​ [ಇಂದಿರಾಬಾಯಿ ತಂಗಿ ಗಂಡ] ಕೂಡ ಡ್ರೈವರ್ ಆಗಿದ್ದ. 

ಕೆಲವೊಮ್ಮೆ ಒಂದೇ ಬಸ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರಿಬ್ಬರ ನಡುವೆ ಅಕ್ರಮ ಸಂಬಂಧ ಕೂಡ ಇತ್ತು. ಆದರೆ, ಇತ್ತೀಚೆಗೆ ಇಂದಿರಾ ಬಾಯಿ ಆರೋಪಿ ಮೈದುನ ಅರುಣ್​ನನ್ನು ಬಿಟ್ಟು ಬೇರೊಬ್ಬನ ಜತೆ ಅಕ್ರಮ ಸಂಬಂಧ ಬೆಳಸಿದ್ದಳು. ಇದೇ ಕೋಪಕ್ಕೆ ಅರುಣ್​ ಇಂದಿರಾಬಾಯಿ ಮೇಲೆ ಆ್ಯಸಿಡ್​ ದಾಳಿ ಮಾಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?