ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಕಾರು ಅಪಘಾತ: ಮಹಿಳೆ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

By Sathish Kumar KH  |  First Published Oct 1, 2023, 10:55 AM IST

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಅವರು ಬೆಂಗಳೂರಿನಲ್ಲಿ ರಾತ್ರಿ ವೇಳೆ ಹಿಟ್‌ ಅಂಡ್‌ ರನ್‌ ಮಾಡಿದ್ದು, ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ್ದಾಳೆ. ಇವರ ಜೊತೆಗಿದ್ದ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ.


ಬೆಂಗಳೂರು (ಅ.01): ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ನಟ ನಾಗಭೂಷಣ್‌ ಅವರು ಬೆಂಗಳೂರಿನಲ್ಲಿ ರಾತ್ರಿ ವೇಳೆ ಹಿಟ್‌ ಅಂಡ್‌ ರನ್‌ ಮಾಡಿದ್ದು, ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ್ದಾಳೆ. ಇವರ ಜೊತೆಗಿದ್ದ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇನ್ನು ಶನಿವಾರ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ರಾತ್ರಿ ವೇಳೆ ಊಟ ಮಾಡಿ ವಾಕಿಂಗ್‌ಗೆ ಬಂದಿದ್ದ ದಂಪತಿಗೆ ಕಾರನ್ನು ಗುದ್ದಲಾಗಿದೆ. ಇನ್ನು ಕಾರು ಅಪಘಾತದ ಘಟನೆಯಲ್ಲಿ ಪ್ರೇಮಾ (48) ಮಹಿಳೆ ಸ್ಥಳದಲ್ಲಿಯೇ ಸಾನ್ನಪ್ಪಿದ್ದಾಳೆ. ಇವರ ಪತಿ ಕೃಷ್ಣಾ ಎನ್ನುವವರ ಸ್ಥಿತಿಯೂ ಗಂಭೀರವಾಗಿದೆ, ಇನ್ನು ಗಾಯಾಳುಗಳನ್ನು ಕೂಡಲೇ ನಟ ನಾಗಭೂಷಣ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಅಪಘಾತದ ಘಟನೆಯ ಕೆಲವೇ ಕ್ಷಣಗಳಲ್ಲಿ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದು, ನಟ ನಾಗಭೂಷಣ್‌ನನ್ನು ಬಂಧಿಸಿದ್ದಾರೆ.

Tap to resize

Latest Videos

ಇನ್ಸ್ಟಾಗ್ರಾಮ್‌ನಲ್ಲಿ ಬೆಂಗಳೂರು, ಕನ್ನಡಿಗರ ಬಗ್ಗೆ ನಿಂದನೆ: ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು..!

ಬೆಂಗಳೂರಿನ ವಸಂತಪುರ ಮುಖ್ಯರಸ್ತೆಯಲ್ಲಿರುವ ಸುಪ್ರಭಾತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರೇಮಾ ಮತ್ತು ಕೃಷ್ಣ ದಂಪತಿ ಊಟ ಮಾಡಿ ರಾತ್ರಿ 10 ಗಂಟೆ ಸುಮಾರು ವಾಯು ವಿಹಾರಕ್ಕೆ ಬಂದಾಗ ಘಟನೆ ನಡೆದಿದೆ. ಇನ್ನು ಗಾಯಾಳುಗಳನ್ನು ಕೂಡಲೇ ಅಸ್ತ್ರಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಅಷ್ಟರಲ್ಲಾಗಲೇ ಮಹಿಳೆ ಸಾವನ್ನಪ್ಪಿದ್ದಾಳೆ. ಇನ್ನು ಕೃಷ್ಣ (58) ಎನ್ನುವವರಿಗೆ ಗಂಭೀರ ಗಾಯವಾಗಿದೆ. ಈ ಬಗ್ಗೆ ದೂರು ನೀಡಿರುವ ದಂಪತಿಯ ಪುತ್ರ ಕಾರು ಚಾಲಕನ ನಿರ್ಲಕ್ಷ್ಯದಿಂದಲೇ ಈ ಅಪಘಾತ ಸಂಭವಿಸಿದೆ ಎಂದು ದೂರು ನೀಡಿದ್ದಾರೆ. ಫುಟ್‌ಪಾತ್‌ ಮೇಲೆ ನಡೆದುಕೊಂಡು ಹೋಗುತ್ತಿದ್ದವರಿಗೆ ಗುದ್ದಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಮದ್ಯಪಾನದ ಸೇವನೆ ಬಗ್ಗೆ ಮೆಡಿಕಲ್‌ ಚೆಕಪ್‌ ಮಾಡಿಸಿದ ಪೊಲೀಸರು: ಘಟನೆ ನಡೆದ ತಕ್ಷಣವೇ ಕುಮಾರಸ್ವಾಮಿ ಟ್ರಾಫಿಕ್ ಪೊಲೀಸರಿಂದ ನಾಗಭೂಷಣ್ ಬಂಧನ ಮಾಡಲಾಗಿದೆ. ಸದ್ಯಕ್ಕೆ ನಾಗಭೂಷಣ್ ಪೊಲೀಸ್ ಠಾಣೆಯಲ್ಲಿದ್ದಾರೆ. ರಾಜರಾಜೇಶ್ವರಿ ನಗರದ ಸ್ನೇಹಿತನ ಮನೆಯಿಂದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆಯು ನಡೆದಿದೆ. ಅಪಘಾತದ ಬಗ್ಗೆ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಅಪಘಾತದ ನಂತರ ತಾನೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿರುವ ಮಾಹಿತಿ ನೀಡಿದ್ದಾರೆ. ಇನ್ನು ತಾನು ಮದ್ಯ ಸೇವನೆ ಮಾಡಿಲ್ಲ ಎಂಬ ಬಗ್ಗೆಯೂ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಮೆಡಿಕಲ್‌ ಚೆಕಪ್‌ ಕೂಡ ಮಾಡಿಸಿದ್ದು, ಮದ್ಯಪಾನ ಮಾಡಿಲ್ಲವೆಂದು ವರದಿ ಬಂದಿದೆ. ಆದರೆ, ಕಾರು ಚಾಲನೆಯ ವೇಳೆ ಕಾರು ತಿರುವಿನಲ್ಲಿ ನಿಯಂತ್ರಣ ಸಿಗದೇ ಅಪಘಾತ ಸಂಭವಿಸಿದೆ ಎಂದು ನಟ ನಾಗಭೂಷಣ್‌ ತಿಳಿಸಿದ್ದಾರೆ.

click me!