ಇನ್ಸ್ಟಾಗ್ರಾಮ್‌ನಲ್ಲಿ ಬೆಂಗಳೂರು, ಕನ್ನಡಿಗರ ಬಗ್ಗೆ ನಿಂದನೆ: ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು..!

By Girish Goudar  |  First Published Oct 1, 2023, 10:42 AM IST

ಬೆಂಗಳೂರಿನಲ್ಲಿ ಕಾಫಿ ತಿಂಡಿಗೆ ಹೆಚ್ಚಿನ ದರ ಚಾರ್ಜ್ ಮಾಡ್ತಾರೆ. ಕನ್ನಡ ಮಾತಾಡಲು ಒತ್ತಾಯ ಮಾಡ್ತಾರೆ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ನಿಂದಿಸಿ ಇನ್ಸ್ಟಾಗ್ರಾಮ್‌ನಲ್ಲಿ ಹಲವು ಪೋಸ್ಟ್ ಮಾಡಿದ್ದ ಆರೋಪಿ ಮಂಡಲ್ 


ಬೆಂಗಳೂರು(ಅ.01):  ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ನಿಂದನೆ ಮಾಡಿದ್ದ ಆರೋಪಿಯನ್ನ ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.  ಪಶ್ಚಿಮ ಬಂಗಾಳ ಮೂಲದ ನಿಲಯ್ ಮಂಡಲ್ ಬಂಧಿತ ಆರೋಪಿಯಾಗಿದ್ದಾನೆ. 

ಬಂಧಿತ ಆರೋಪಿ ಮಂಡಲ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಂಗಳೂರಿನಲ್ಲಿ ಕಾಫಿ ತಿಂಡಿಗೆ ಹೆಚ್ಚಿನ ದರ ಚಾರ್ಜ್ ಮಾಡ್ತಾರೆ. ಕನ್ನಡ ಮಾತಾಡಲು ಒತ್ತಾಯ ಮಾಡ್ತಾರೆ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ನಿಂದಿಸಿ ಇನ್ಸ್ಟಾಗ್ರಾಮ್‌ನಲ್ಲಿ ಹಲವು ಪೋಸ್ಟ್ ಮಾಡಿದ್ದನು. 

Tap to resize

Latest Videos

ಹುಡುಗಿ ಹೆಸರಲ್ಲಿ ಬಂದಿತ್ತು ಇನ್ಸ್ಟಾಗ್ರಾಂ ಮೆಸೇಜ್: 2 ದಿನ ಚಾಟ್‌ ಮಾಡಿದವನು ಸತ್ತೇ ಹೋದ..!

ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಕೊಡಿಗೆಹಳ್ಳಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!