ರಾಮನಗರ: ಚುನಾವಣಾ ಅಧಿಕಾರಿಗಳನ್ನು ಅಡ್ಡಗಟ್ಟಿ ದರೋಡೆ, ನಾಲ್ವರ ಬಂಧನ

By Kannadaprabha News  |  First Published Oct 1, 2023, 7:32 AM IST

ಬಂಧಿತರಿಂದ ಒಂದು ಲ್ಯಾಪ್ ಟಾಪ್, ಎರಡು ಮೊಬೈಲ್, ಒಂದು ಮತ ಪತ್ರದ ಪುಸ್ತಕವನ್ನು ವಶಪಡಿಸಿಕೊಂಡು ಎರಡು ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ. 


ಮಾಗಡಿ(ಅ.01):  ತಾಲೂಕಿನ ಹುಳ್ಳೆನಹಳ್ಳಿ ಡೇರಿ ಚುನಾವಣೆಗೆ ತೆರಳುತ್ತಿದ್ದ ಚುನಾವಣಾ ಅಧಿಕಾರಿಗಳನ್ನು ಅಡ್ಡಗಟ್ಟಿ ಚುನಾವಣೆಗೆ ಸಂಬಂಧಿಸಿದಂತೆ ವಸ್ತುಗಳನ್ನು ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ. 

ತಾಲೂಕಿನ ಹೊಸಪಾಳ್ಯ ಮುಖ್ಯ ರಸ್ತೆಯಲ್ಲಿ ದಾಸೇಗೌಡ (28), ಹೇಮಂತ್ (26), ಶ್ರೀನಿವಾಸ್(28), ಮನು(25) ಇವರನ್ನು ಕುಣಿಗಲ್‌ ಮತ್ತು ಸೋಲೂರಿನಲ್ಲಿ ಬಂಧಿಸಿ, ಒಂದು ಲ್ಯಾಪ್ ಟಾಪ್, ಎರಡು ಮೊಬೈಲ್, ಒಂದು ಮತ ಪತ್ರದ ಪುಸ್ತಕವನ್ನು ವಶಪಡಿಸಿಕೊಂಡು ಎರಡು ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ. 

Tap to resize

Latest Videos

ರಾಮನಗರ ಚುನಾವಣಾ ಸಿಬ್ಬಂದಿಯ ಕಾರು ಅಡ್ಡಗಟ್ಟಿ ವೋಟಿಂಗ್‌ ಮಿಷನ್‌ ಕದ್ದೊಯ್ದ ದುಷ್ಕರ್ಮಿಗಳು

ಆರೋಪಿಗಳನ್ನು ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಕುದೂರು ಕುಮಾರ್, ಮಾಗಡಿ ಗಿರಿರಾಜ್, ಅಪರಾಧ ವಿಭಾಗದ ಬೀರಪ್ಪ, ಮುನೀಂದ್ರ, ಸೂರ್ಯ ಕುಮಾರ್, ಗುರುಮೂರ್ತಿ ತಂಡ ಬಂಧಿಸಿದೆ.

click me!