Russian@20,000! ರಾಜಧಾನಿಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ವೇಶ್ಯಾವಾಟಿಕೆ

Published : Apr 10, 2022, 12:29 PM IST
Russian@20,000! ರಾಜಧಾನಿಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ವೇಶ್ಯಾವಾಟಿಕೆ

ಸಾರಾಂಶ

ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ವೇಶ್ಯಾವಾಟಿಕೆ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಇದೀಗ ರಷಿಯನ್‌ ಹುಡುಗಿಯರು 20,000ಕ್ಕೆ ಎಂಬ ಜಾಹಿರಾತು ಹರಿದಾಡುತ್ತಿರುವುದನ್ನು ನೋಡಿದರೆ, ಮಾತು ಸತ್ಯವೇನೋ ಎಂಬ ಅನುಮಾನ ಹುಟ್ಟಿಸಿದೆ.

ದೇಶದ ರಾಜಧಾನಿ ನವದೆಹಲಿಯಲ್ಲಿ ಶಾಕಿಂಗ್‌ ಘಟನೆಯೊಂದು ನಡೆದಿದೆ. ಇತ್ತೀಚೆಗೆ ದೆಹಲಿಯಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ವರದಿಗಳು ಕೇಳಿ ಬಂದಿದ್ದವು. ಆದರೆ ಇಷ್ಟು ರಾಜಾರೋಷವಾಗಿ ನಡೆಸಲಾಗುತ್ತಿದೆ ಎಂಬುದು ಈಗ ಬೆಳಕಿಗೆ ಬಂದಿದೆ. ದಿನಸಿ ಅಂಗಡಿಯ ಆಚೆ ಎಲ್‌ಇಡಿ ಬೋರ್ಡ್‌ನಲ್ಲಿ Russians@20,000 (20,000 ಸಾವಿರಕ್ಕೆ ರಷಿಯನ್‌ಗಳು) ಎಂಬ ಜಾಹೀರಾತು ಹಾಕಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ ಅಂಗಡಿಯ ಸಿಸ್ಟಮ್‌ ಹ್ಯಾಕ್‌ ಮಾಡಿ ಈ ರೀತಿಯ ಬೋರ್ಡ್‌ ಹಾಕಲಾಗಿದೆ ಎನ್ನಲಾಗಿದೆ. ಆದರೆ ಹೆಚ್ಚುತ್ತಿರುವ ಮಾಂಸದ ದಂಧೆಯ ವಾಸನೆ ಇನ್ನಷ್ಟು ಹೆಚ್ಚಿರುವುದಂತೂ ಸತ್ಯ. 

ಈ ಘಟನೆ ಕಳೆದ ಗುರುವಾರ ಬೆಳಕಿಗೆ ಬಂದಿದ್ದು, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಜಾಹೀರಾತಿನ ವಿಡಿಯೋವನ್ನು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ದೆಹಲಿ ಪೊಲೀಸರನ್ನು ಟ್ಯಾಗ್‌ ಮಾಡಿ ಮಾಹಿತಿ ನೀಡಿದ್ದಾರೆ. ಅದಾದ ನಂತರ ಪ್ರಕರಣವನ್ನು ಪೊಲೀಸರು ಕೈಗೆತ್ತಿಕೊಂಡು ವಿಚಾರಣೆ ನಡೆಸಿದ್ದಾರೆ. ಬ್ಯಾಂಕಾಕ್‌ನ ಪಟ್ಟಾಯ ಸ್ಟ್ರೀಟ್‌ನ ಹೆಣ್ಣುಮಕ್ಕಳ ಮಾಂಸದಂಧೆಯ ಮಾರುಕಟ್ಟೆಯಲ್ಲಿ ಹಾಕುವ ಬೋರ್ಡಿನಂತೆ "Russians@20,0000, S** market," ಎಂದು ಎಲ್‌ಇಡಿಯಲ್ಲಿ ಡಿಸ್ಪ್ಲೇ ಮಾಡಲಾಗಿತ್ತು. 

"ಲಜ್ಜೆಗೆಟ್ಟ ವೇಶ್ಯಾವಾಟಿಕೆ ದಂಧೆ ದೆಹಲಿಯಲ್ಲಿ ಅತಿರೇಕಕ್ಕೆ ಹೋಗಿದೆ. ಎಲ್ಲಿಯವರೆಗೆಂದರೆ ಬಹಿರಂಗವಾಗಿ ವ್ಯವಹಾರ ಮಾಡುಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ. ಬ್ಯೂಟಿ ಪಾರ್ಲರ್‌ಗಳು, ಸ್ಪಾಗಳು ಪೊಲೀಸರಿಗೆ ಭಯ ಪಡುತ್ತಿಲ್ಲ. ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿರುವ ಸ್ಪಾವನ್ನು ತಕ್ಷಣವೇ ಮುಚ್ಚಬೇಕು ಮತ್ತು ಅಲ್ಲಿನ ಸಿಬ್ಬಂದಿ, ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು," ಎಂದು ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಳ್‌ ಆಗ್ರಹಿಸಿದ್ದಾರೆ. 

ಮಾಹಿತಿ ಬಂದ ನಂತರ ಪೊಲೀಸರು ಅಂಗಡಿಗೆ ಭೇಟಿ ಕೊಟ್ಟಾಗ, ಅಂಗಡಿಯ ಡಿಸ್‌ಪ್ಲೇ ಬೋರ್ಡ್‌ನ್ನು ಹ್ಯಾಕ್‌ ಮಾಡಲಾಗಿದೆ ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಉಪ ಪೊಲೀಸ್‌ ಆಯುಕ್ತ ಸಮೀರ್‌ ಶರ್ಮ ಘಟನೆಯ ಬಗ್ಗೆ ಹಾಸ್ಯ ಮಾಡಿದ್ದಾರೆ. ಈ ಘಟನೆ ನಡೆದಿರುವುದು ದಿನಸಿ ಅಂಗಡಿಯಲ್ಲಿ, ಯಾವುದೇ ಸ್ಪಾ ನಲ್ಲಿ ಅಲ್ಲ ಎಂದು ಹೇಳಿದ್ದಾರೆ. "ಅಶ್ಲೀಲ ಜಾಹಿರಾತು ಪ್ರದರ್ಶನ ಮಾಡಿರುವುದು ಗ್ರಾಸರಿಯಲ್ಲಿ, ಯಾವುದೇ ಸ್ಪಾನಲ್ಲೂ ಅಲ್ಲ. ಗ್ರಾಸರಿ ಶಾಪ್‌ನಲ್ಲಿ ವೇಶ್ಯಾವಾಟಿಕೆ ನಡೆಯುವುದಿಲ್ಲ," ಎಂದು ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಪತ್ನಿಯನ್ನು ಭೇಟಿ ಮಾಡುವ ಅವಕಾಶ ನೀಡದ ತಾಯಿಯನ್ನು ಕೊಂದ ಮಗ!

ದೆಹಲಿ ಪೊಲೀಸ್‌ ಅಧಿಕೃತ ಟ್ವಿಟ್ಟರ್‌ ಖಾತೆಯಿಂದಲೂ ಘಟನೆ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, "ಪಶ್ಚಿಮ ವಿಹಾರದ ಜಾಹೀರಾತು ಫಲಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅದು ಹೇಳಿದಂತೆ ಸ್ಪಾ ಅಲ್ಲ, ಅದು ಸಾಮಾನ್ಯ ದಿನಸಿ ಅಂಗಡಿ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ದಿನಸಿ ಅಂಗಡಿಯಲ್ಲಿ ನಡೆಯುತ್ತಿಲ್ಲ. ಅಂಗಡಿ ಮಾಲೀಕರ ಜಾಹೀರಾತು ಫಲಕ ಹ್ಯಾಕ್‌ ಆಗಿರುವ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಶ್ಲೀಲ ಜಾಹೀರಾತಿನ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡುಹಿಡಿಯಲು ತನಿಖೆ ಮುಂದುವರೆದಿದೆ," ಎಂದು ದೆಹಲಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. 
ದೆಹಲಿ ಪಶ್ಚಿಮ ವಿಹಾರ ಪೊಲೀಸ್‌ ಠಾಣೆಯಲ್ಲಿ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗಳ ಬೆದರಿಕೆಗೆ ಹೆದರಿ ಕಬಾಬ್ ಸ್ಟೋರಿ ಹೇಳಿದ ಬಾಲಕಿ

ಭಾರತದಲ್ಲಿ ರಷಿಯನ್‌ ಮಾಡೆಲ್‌ ಮೇಲಿನ ವ್ಯಾಮೋಹ:

ವರದಿಗಳು ಮತ್ತು ಪೊಲೀಸ್‌ ಮೂಲಗಳ ಮಾಹಿತಿ ಪ್ರಕಾರ ಭಾರತದಲ್ಲಿ ರಷಿಯನ್‌ ಮಾಡೆಲ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಗಲು ಕಾಣುವ ಒಂದು ಪ್ರಪಂಚವಿದ್ದರೆ, ರಾತ್ರಿಯ ನಂತರ ಬೇರೊಂದು ಜಗತ್ತೇ ಜಾಗೃತವಾಗುತ್ತದೆ. ಅಲ್ಲಿ ಹೆಣ್ಣು, ನಶೆ, ಮಾದಕವಸ್ತು ಎಲ್ಲವೂ ಲಭ್ಯವಿರುತ್ತದೆ. ಅಲ್ಲಿ ಅತಿಹೆಚ್ಚು ಬೇಡಿಕೆ ಇರುವುದು ರಷಿಯನ್‌ ಹೆಣ್ಣುಮಕ್ಕಳಿಗೆ. ಅಖಂಡ ರಷ್ಯಾದ ಹಲವು ದೇಶಗಳ ಹೆಣ್ಣುಮಕ್ಕಳು ಭಾರತದಂತ ದೇಶಗಳಿಗೆ ಬಂದು ಬೆರಳೆಣಿಕೆಯ ತಿಂಗಳುಗಳಲ್ಲಿ ಲಕ್ಷಾಂತರ ಸಂಪಾದಿಸಿ ವಾಪಸಾಗುತ್ತಾರೆ. ಇನ್ನು ಕೆಲವರು ಮಾಂಸದ ದಂಧೆಯ ಬಲಿಪಶುಗಳು. ಅನಿವಾರ್ಯ ಪರಿಸ್ಥಿತಿಯಿಂದಲೂ, ಬೆದರಿಕೆಯಿಂದಲೋ ಇಷ್ಟವಿಲ್ಲದಿದ್ದರೂ ದೇಹ ಮಾರಿಕೊಳ್ಳುವ ಅನಿವಾರ್ಯತೆ ಇರುವುವರ ಸಂಖ್ಯೆಯೂ ದೊಡ್ಡದಿದೆ ಎನ್ನಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು