* ಅಪ್ರಾಪ್ತೆ ಮೇಲೆ 8 ಮಂದಿಯಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ
* ಆರೋಪಿಗಳ ಬೆದರಿಕೆಗೆ ಹೆದರಿ ಕಬಾಬ್ ಸ್ಟೋರಿ ಹೇಳಿದ ಬಾಲಕಿ
* ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆ
ಕಿರಣ್ ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ .ಬೆಂಗಳೂರು
ಬೆಂಗಳೂರು, (ಏ.09): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿಯ ಮೇಲೆ ರಾಕ್ಷಸರಂತೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ. ಮೊದಲು ಪ್ರಮುಖ ಆರೋಪಿ ವಿಡಿಯೋ ರೆಕಾರ್ಡ್ ಮಾಡಿ ಲೈಂಗಿಕ ದೌರ್ಜನ್ಯ ನಡೆಸಿದ್ದ.. ಅಷ್ಟೇ ಅಲ್ಲ ಲ್ಲದೇ ಈ ಹೊರಗಡೆ ತಿಳಿಸಿದ್ರೆ ಕೊಲೆ ಮಾಡೋದಾಗಿ ಬೆದರಿಸಿದ್ನಂತೆ..
ಅಷ್ಟಕ್ಕೆ ಸುಮ್ಮನಿರದೆ ಅ ವಿಡಿಯೋವನ್ನ ತೋರಿಸಿ ತನ್ನ ಸ್ನೇಹಿತರ ಜೊತೆಗೂ ಸಹಕರಿಸುವಂತೆ ಹೇಳಿದ್ದ..ಹೀಗೆ ಹೀಗೆ ಎಂಟು ಜನರು ಅ ಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು...ಮೊದಲು ಇಬ್ಬರು ಆರೋಪಿಗಳು ಒಬ್ಬರಾದ ಮೇಲೆ ಒಬ್ಬರು ಲೈಂಗಿಕ ದೌರ್ಜನ್ಯ ನಡೆಸಿದ್ದರು. ನಂತರ ವಿಡಿಯೋ ಮಾಡಿ ನಿರಂತರ ಹೀನಾ ಕೃತ್ಯ ಎಸಗಿದ್ದಾರೆ.
ಮಿಡ್‌ನೈಟ್ ಆಪರೇಷನ್: ಬೆಂಗಳೂರಿನ ಈ ಗ್ಯಾಂಗ್ ಕೈಗೆ ಸಿಕ್ರೆ ನಿಮ್ಮ ಕಥೆ ಅಷ್ಟೇ!
ಇದರಿಂದ ಹೆದರಿದ್ದ ಬಾಲಕಿ ಮನೆಯಲ್ಲಿ ಅಳುತ್ತಿದ್ದಳು.. ತಾಯಿ ಬಂದು ಯಾಕೆ ಅಳುತ್ತಿದ್ದೀಯಾ ಎಂದಾಗ ಈ ಆರೋಪಿಗಳ ಬೆದರಿಕೆಗೆ ಹೆದರಿದ್ದ ಬಾಲಕಿ ಕಬಾಬ್ ಖಾರ ಇತ್ತು ಅದ್ಕೆ ಕಣ್ಣೀರು ಬರ್ತಿದೆ ಅಂದಿದ್ಲಂತೆ..ತಾಯಿ ಒತ್ತಾಯ ಮಾಡಿ ಕೇಳಿದಾಗ ಮನೆಯವರ ಬಳಿ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾಳೆ.
ವಿಚಾರ ತಿಳಿಸಿದಾಗ ಗಾಬರಿಗೊಂಡ ಬಾಲಕಿಯ ಮನೆಯವರು ತಕ್ಷಣವೇ ಯಲಹಂಕ ಪೊಲೀಸ್ ಠಾಣೆಗೆ ಬಂದು 8 ಜನ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಪೋಕ್ಸೋ, ಅತ್ಯಾಚಾರ , ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಟ್ಟು 8 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ.
ಇದರಲ್ಲಿ ಇಬ್ಬರು ಅಪ್ರಾಪ್ತರಿದ್ದು ಅವರನ್ನ ಬಾಲಮಂದಿರಕ್ಕೆ ಕಳುಹಿಸಲಾಗಿದೆ.. ಇನ್ನುಳಿದ 6 ಮಂದಿಯನ್ನ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ... ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎನ್ನುವುದೇ ಪ್ರತಿಯೊಬ್ಬರ ಆಶಯ .