ಅರಳುವ ಮುನ್ನವೇ ಕಮರಿ ಹೋದ ಬಾಲ ಪ್ರತಿಭೆ
ಎಸಿ ಶಾರ್ಟ್ ಸರ್ಕ್ಯೂಟ್ ನಿಂದ ನಾಲ್ವರು ಸಾವು ಪ್ರಕರಣ
ಶಾಸಕ ಸಚಿವರಿಂದ ಸಾಂತ್ವನ
ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ, (ಏ.09): ಇನ್ನೇನು ಬೆಳಾಗಾದ್ರೇ ಊರಿನ ಆಂಜನೇಯ ಲಕ್ಷ್ಮೀ ನಾರಾಯಣ ಸ್ವಾಮಿ ಜಾತ್ರೆ ಊರಿನಲ್ಲಿರೋರಿಗೆ ಊಟ ಹಾಕಿಸೋ ಯೋಜನೆ ಮಾಡಿಕೊಂಡಿದ್ರು ಆದ್ರೇ, ಅಷ್ಟರಲ್ಲಾಗಲೇ ಜವರಾಯ ತನ್ನ ಅಟ್ಟಾಹಾಸ ಮೆರೆದು ಒಂದೇ ಮನೆಯ ನಾಲ್ವರನ್ನು ಕರೆದುಕೊಂಡು ಹೋಗಿದ್ದಾನೆ. ಆದ್ರೇ ಮೃತ ನಾಲ್ವರಲ್ಲಿ ಬಾಲ ಪ್ರತಿಭೆಯೊಂದು ಮೃತಪಟ್ಟಿದ್ದು, ಭರತನಾಟ್ಯ ಲೋಕ ಬಡವಾದಂತಾಗಿದೆ..
undefined
ಮರಿಯಮ್ಮನಹಳ್ಳಿಎಸಿ ಸ್ಟೋಟ ಮನೆಗೆ ಬೆಂಕಿ ಪ್ರಕರಣ.
ನಿನ್ನೆ (ಶುಕ್ರವಾರ) ಬೆಳಗಿನ ಜಾವ ಮರಿಯಮ್ಮನ ಹಳ್ಳಿಯಲ್ಲಿ ರಾಘವೇಂದ್ರ ಶೆಟ್ಟಿ ಎನ್ನುವವರ ಮನೆಯಲ್ಲಿ ಎಸಿ ವಿಷಾನಿಲ ಸೋರಿಕೆ ಮತ್ತು ಸ್ಪೋಟದಿಂದ ವೆಂಕಟ್ ಪ್ರಶಾಂತ್ (42) ಪತ್ನಿ ಡಿ ಚಂದ್ರಕಲಾ (38 )ವರ್ಷ, ಮಕ್ಕಳಾದ ಎಚ್. ಎ ಅರ್ದ್ವಿಕ್( 16) ವರ್ಷ, ಪ್ರೇರಣಾ,( 8 ) ಹೊರಬರಲಾಗದೇ ಸಾವನ್ನಪ್ಪಿದರು.ಮೃತರಲ್ಲಿ ಚಿಕ್ಕವಳಾದ ಪ್ರೇರಣಾ ಭರತನಾಟ್ಯ ಪ್ರವೀಣೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನೃತ್ಯ ಪ್ರದರ್ಶನ ಮಾಡೋ ಮೂಲಕ ಗಮನ ಸೆಳೆದಿದ್ದಳು. ಇಂತಹಾ ಪ್ರತಿಭೆಯೊಂದ ದುರ್ಘಟನೆಯಲ್ಲಿ ಸಾವನ್ನಪ್ಪಿರೋದು ನಿಜಕ್ಕೂ ಕಲಾ ಲೋಕ ಬಡವಾಗಿದೆ. ಇನ್ನೂ ಘಟನೆ ನಂತರ ಪ್ರೇರಣಾಳ ಭರತನಾಟ್ಯದ ವಿಡಿಯೋ ವೈರಲ್ ಮಾಡ್ತಿರೋ ಸ್ನೇಹಿತರು ಮಿಸ್ ಯೂ ಪ್ರೇರಣಾ ಎಂದು ಸ್ಟೇಟಸ್ ಹಾಕ್ತಿದ್ದಾರೆ.
Hosapete: ಎಸಿ ವಿಷಾನಿಲ ಸೋರಿಕೆಯಿಂದ ಮನೆಗೆ ಬೆಂಕಿ: ದಟ್ಟ ಹೊಗೆಯಿಂದ ಹೊರಬರಲಾರದೇ ನಾಲ್ವರ ಸಾವು
ಶಾಸಕ ಸಚಿವರಿಂದ ಕುಟುಂಬಸ್ಥರಿಗೆ ಸಾಂತ್ವನ
ಘಟನೆಯಲ್ಲಿ ಮೃತಪಟ್ಟ ವೆಂಕಟ ಪ್ರಶಾಂತ ಮತ್ತವರ ತಂದೆ ರಾಘವೇಂದ್ರ ಶೆಟ್ಟಿ ಗ್ರಾಮದಲ್ಲಿ ಹಲವು ಉತ್ತಮ ಕೆಲಸ ಮಾಡಿದ್ರು. ಸಮಾಜ ಸೇವೆಯಷ್ಟೇ ಅಲ್ಲದೇ ಬಿಜೆಪಿ ಯಲ್ಲಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ರು ಹೀಗಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಹಗರಿಬೊಮ್ಮನ ಹಳ್ಳಿ ಶಾಸಕ ಭೀಮಾನಾಯ್ಕ್ ಭೇಟಿ ನೀಡಿ ಸಾಂತ್ವನ ಹೇಳಿದ್ರು.. ಘಟನೆಯ ಸಂಪೂರ್ಣ ಮಾಹಿತಿ ಪಡೆದ ಸಚಿವ ಆನಂದ್ ಸಿಂಗ್ ಮತ್ತು ಶಾಸಕ ಭೀಮಾನಾಯ್ಕ್ ಘಟನೆ ನಿಖರ ಕಾರಣವೇನು ಅನ್ನೋದ್ರ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ರು.
ವರ್ತಕ ಕುಟುಂಬ ಹಿನ್ನೆಲೆ ಇರೋದ್ರಿಂದ ಸಾಕಷ್ಟು ಜನರ ಒಡನಾಟ ಇತ್ತು. ಅಲ್ಲದೇ ಮೂರು ದಿನ ನಡೆಯೋ ಜಾತ್ರೆಯಲ್ಲಿ ಹಲವು ಸೇವೆ ಮಾಡೋದ್ರೋ ಜತೆ ಒಂದು ದಿನ ಅನ್ನದಾನ ವ್ಯವಸ್ಥೆ ಮಾಡ್ತಿದ್ರಂತೆ. ಹೀಗಾಗಿ ಮನೆಯಲ್ಲಿ ಸಾಕಷ್ಟು ಪ್ರಮಾಣದ ಅಡುಗೆ ದಾಸ್ತಾನು ಮನೆಯಲ್ಲಿ ಸಂಗ್ರಹ ಮಾಡಿಟ್ಟಿದ್ರು. ಇನ್ನೂ ಅನ್ನಾದನಕ್ಕೆ ತಂದಿರೋ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.. ಪ್ರಾಥಮಿಕ ಮಾಹಿತಿ ಪ್ರಕಾರ ಒಂದು ಕೋಟಿಗೂ ಹೆಚ್ಚು ಹಾನಿಯಾಗಿದೆ ಎನ್ನಲಾಗ್ತಿದೆ.. ಬಾರದ ಲೋಕಕ್ಕೆ ಮಕ್ಕಳು ಮೊಮ್ಮೊಕ್ಕಳು ಹೋದ ಮೇಲೆ ಆಸ್ತಿ ಯಾವ ಲೆಕ್ಕಕ್ಕೆ ಎನ್ನುವ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ..