ಆರ್‌ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿದ್ದ ಒಂದೇ ನಂಬರಿನ ಎರಡು ಖಾಸಗಿ ಬಸ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ರಾಮನಗರ ಆರ್‌ಟಿಒ ಅಧಿಕಾರಿ ಶಿವಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದರು.
ರಾಮನಗರ (ಆ.5): ಆರ್‌ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿದ್ದ ಒಂದೇ ನಂಬರಿನ ಎರಡು ಖಾಸಗಿ ಬಸ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.
ರಾಮನಗರ ಆರ್‌ಟಿಒ ಅಧಿಕಾರಿ ಶಿವಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಹಲವು ವರ್ಷಗಳಿಂದ ಒಂದೇ ನಂಬರ್ ಬಳಸಿ ಸಂಚಾರ ಮಾಡುತ್ತಿದ್ದ KA.06, B 5766 ನಂಬರ್ ನ ಎರಡು ಖಾಸಗಿ ಬಸ್ ಗಳನ್ನು ಸೀಜ್ ಮಾಡಿದ್ದಾರೆ.
ಟ್ಯಾಕ್ಸ್ ಹಾಗೂ ಪರ್ಮಿಟ್ ಹಣ ತಪ್ಪಿಸಲು ಫೇಕ್ ನಂಬರ್ ಬಳಸಿದ್ದ ಬಸ್ ಮಾಲೀಕ, ಒಂದೇ ನಂಬರ್ ಅನ್ನು ಎರಡು ಬಸ್ ಗಳಿಗೆ ಹಾಕಿದ್ದಾರೆ. ಆರ್‌ಟಿಒ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಎರಡು ಬಸ್‌ಗಳನ್ನು ಸೀಜ್ ಮಾಡಿದ್ದಾರೆ.
VRL: 500 ಕೋಟಿ ರು. ವೆಚ್ಚದಲ್ಲಿ 550 ಹೊಸ ಲಕ್ಷುರಿ ಬಸ್ ಖರೀದಿ!
ಸೈಕಲ್ ಟೈರ್‌ಗೆ ಲಗೇಜ್ ಶುಲ್ಕ ವಿಧಿಸಿದ ಬಸ್ ನಿರ್ವಾಹಕ
ಹಾವೇರಿ: ಸೈಕಲ್ ಟೈರ್‌ಗೆ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕರೊಬ್ಬರು .5 ಲಗೇಜ್ ಶುಲ್ಕ ವಸೂಲಿ ಮಾಡಿದ ಘಟನೆ ಶುಕ್ರವಾರ ನಡೆದಿದೆ. ರಾಣಿಬೆನ್ನೂರಿನಿಂದ ಶಿಕಾರಿಪುರಕ್ಕೆ ಹೋಗುತ್ತಿದ್ದ ಬಸ್‌ನಲ್ಲಿ ರಟ್ಟಿಹಳ್ಳಿಗೆ ಮಗನೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಉಮೇಶ ಪಾಟೀಲ ಅವರಿಗೆ ಕಂಡಕ್ಟರ್ ಸೈಕಲ್ ಟೈರ್‌ಗೆ .5 ಲಗೇಜ್ ಚಾಜ್‌ರ್ ಮಾಡಿದ್ದಾರೆ. ಇಬ್ಬರಿಗೆ ಬಸ್ ಪ್ರಯಾಣ ದರ .70 ಸೇರಿದಂತೆ .5 ಲಗೇಜ್ ಟಿಕೆಟ್ ನೀಡಿದ್ದಾರೆ.
ದಾವಣಗೆರೆ: ಅಧಿಕಾರಿಗಳಿಗೇ ಖೆಡ್ಡಾ, ಅಕ್ರಮ ಬೈಕ್‌ಗಳಿಗೆ ಸಕ್ರಮ ಮುದ್ರೆ ಒತ್ತುತ್ತಿದ್ದ ಆರ್‌ಟಿಒ ಸಿಬ್ಬಂದಿ ಬಂಧನ