ಬೆಂಗಳೂರಿನಲ್ಲಿ ಅಮಾನುಷ ಘಟನೆ: ಬಾಲಕಿಯ ಮೇಲೆ 65 ವರ್ಷದ ಪ್ರಾಂಶುಪಾಲನಿಂದ ರೇಪ್‌

By Kannadaprabha News  |  First Published Aug 5, 2023, 4:04 AM IST

ಗುಂಜೂರಿನ ಶಾಲೆಯೊಂದರಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ವರ್ತೂರು ಪೊಲೀಸ್‌ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ, ಖಾಸಗಿ ಶಾಲೆಯ ಪ್ರಾಂಶುಪಾಲ ಲ್ಯಾಂಬರ್ಟ್‌ ಪುಷ್ಪರಾಜ್‌ನನ್ನು ಬಂಧಿಸಿದ್ದಾರೆ. 


ಬೆಂಗಳೂರು(ಆ.05):  ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಮೇಲೆ ಪ್ರಾಂಶುಪಾಲನೇ ಅತ್ಯಾಚಾರ ಮಾಡಿರುವ ಅಮಾನುಷ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಗುಂಜೂರಿನ ಶಾಲೆಯೊಂದರಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ವರ್ತೂರು ಪೊಲೀಸ್‌ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ, ಖಾಸಗಿ ಶಾಲೆಯ ಪ್ರಾಂಶುಪಾಲ ಲ್ಯಾಂಬರ್ಟ್‌ ಪುಷ್ಪರಾಜ್‌ನನ್ನು (65) ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಶಾಲೆಯಲ್ಲಿ 10 ವರ್ಷದ ಬಾಲಕಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಎಂದಿನಂತೆ ಗುರುವಾರ ಬೆಳಗ್ಗೆ 8.30ಕ್ಕೆ ಶಾಲೆಗೆ ತೆರಳಿದ್ದಳು. ಬೆಳಗ್ಗೆ 11.30ರ ಸುಮಾರಿಗೆ ಪ್ರಾಂಶುಪಾಲ ಲ್ಯಾಂಬರ್ಚ್‌ ಪುಷ್ಪರಾಜ್‌, ಈ ಬಾಲಕಿಯನ್ನು ಪುಸಲಾಯಿಸಿ ಶಾಲೆಯ ಖಾಲಿ ಕೊಠಡಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ತಿನ್ನಲು ಕೇಕ್‌ ಕೊಟ್ಟು ಕಳುಹಿಸಿದ್ದಾನೆ.

Tap to resize

Latest Videos

ಬಾಲಕಿ ರೇಪ್‌ ಮಾಡಿ ಸಾಕ್ಷ್ಯ ನಾಶ ಮಾಡಲು ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಕೊಂದ ಪಾಪಿಗಳು!

ಬಾಲಕಿ ಈ ಹಿಂದೆ ನರ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಳು. ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಶಾಲೆ ಮುಗಿಸಿ ಮನೆಗೆ ಬಂದ ಬಾಲಕಿಗೆ ದಿಢೀರ್‌ ಹೊಟ್ಟೆನೋವು ಶುರುವಾಗಿದೆ. ಈ ವೇಳೆ ತಾಯಿ ಬಾಲಕಿಗೆ ಸ್ನಾನ ಮಾಡಿಸಿ ಕರೆತರುವಾಗ ಗುಪ್ತಾಂಗದಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಈ ಬಗ್ಗೆ ತಾಯಿ ವಿಚಾರಿಸಿದಾಗ, ಶಾಲೆಯಲ್ಲಿ ನಡೆದ ಘಟನೆಯನ್ನು ಬಾಲಕಿ ವಿವರಿಸಿದ್ದಾಳೆ. ಬಳಿಕ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ವರ್ತೂರು ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿ ಪ್ರಾಂಶುಪಾಲ ಲ್ಯಾಂಬರ್ಚ್‌ ಪುಷ್ಪರಾಜ್‌ನನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯು ಈ ಹಿಂದೆ ಶಾಲೆಯ ವಿದ್ಯಾರ್ಥಿನಿಯರಿಗೆ ಏನಾದರೂ ಲೈಂಗಿಕ ಕಿರುಕುಳ ನೀಡಿದ್ದನೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20 ತಿಂಗಳ ಮಗುವನ್ನು ರೇಪ್‌ ಮಾಡಿ ಕೊಂದ ಯುಸೂಫ್‌ಗೆ ಮರಣದಂಡನೆ

ಬಾಲಕಿಗೆ ಡಿಸ್ಲೆಕ್ಸಿಯಾ ಸಮಸ್ಯೆ:

ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿ ‘ಡಿಸ್ಲೆಕ್ಸಿಯಾ’ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಕಾಯಿಲೆಗೆ ತುತ್ತಾದವರು ಓದುವುದು, ವಾಕ್ಯಗಳನ್ನು ಅರ್ಥೈಸಿಕೊಳ್ಳುವುದು, ಪದಗಳು ಹಾಗೂ ಚಿಹ್ನೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಬಾಲಕಿ ಶಾಲಾ ಕಲಿಕೆಯಲ್ಲಿ ಹಿಂದುಳಿದಿದ್ದಳು. ಈ ಕಾರಣದಿಂದ ಆಕೆಯ ಪೋಷಕರು 10 ವರ್ಷದ ಮಗಳನ್ನು 2ನೇ ತರಗತಿಯಲ್ಲೇ ಓದಿಸುತ್ತಿದ್ದರು.

ಆಗಿದ್ದೇನು?

- ಡಿಸ್ಲೆಕ್ಸಿಯಾ ಕಾರಣ ಬಾಲಕಿ ಶಾಲಾ ಕಲಿಕೆಯಲ್ಲಿ ಹಿಂದುಳಿದಿದ್ದಳು
- ಹೀಗಾಗಿ 10 ವರ್ಷದ ಬಾಲಕಿ 2ನೇ ತರಗತಿಯಲ್ಲಿ ಓದುತ್ತಿದ್ದಳು
- ಗುರುವಾರ ಬೆಳಗ್ಗೆ 8.30ಕ್ಕೆ ಶಾಲೆಗೆ ತೆರಳಿದ್ದ ನತದೃಷ್ಟಹುಡುಗಿ
- ಬೆಳಗ್ಗೆ 11.30ರ ಸುಮಾರಿಗೆ ಬಾಲಕಿಯನ್ನು ಕರೆದೊಯ್ದ ಪ್ರಿನ್ಸಿಪಾಲ್‌
- ಖಾಲಿ ಕೊಠಡಿಯಲ್ಲಿ ರೇಪ್‌ ಮಾಡಿ ಕೇಕ್‌ ಕೊಟ್ಟು ಕಳಿಸಿದ್ದ ದುರುಳ
- ಶಾಲೆ ಮುಗಿಸಿ ಮನೆಗೆ ಬಂದ ಬಾಲಕಿಗೆ ಹೊಟ್ಟೆನೋವು ಆರಂಭ
- ಸ್ನಾನಕ್ಕೆ ಕರೆದೊಯ್ದ ತಾಯಿ. ಗುಪ್ತಾಂಗದಲ್ಲಿ ರಕ್ತದ ಕಲೆಗಳು ಪತ್ತೆ
- ವಿಚಾರಿಸಿದಾಗ ಪ್ರಿನ್ಸಿಪಾಲ್‌ ಕೃತ್ಯವನ್ನು ತಾಯಿಗೆ ವಿವರಿಸಿದ ಬಾಲಕಿ
- ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ. ಪೊಲೀಸರಿಗೆ ದೂರು. ಬೆನ್ನಲ್ಲೇ ಬಂಧನ

click me!