ಪ್ರೇಯಸಿ ಮಗಳನ್ನು ಕೊಂದು ಮೃತದೇಹದೊಂದಿಗೆ ಸಂಭೋಗ ನಡೆಸಿದ ಪಾಪಿ ಅಂದರ್..!

By BK Ashwin  |  First Published Nov 20, 2022, 6:26 PM IST

ಕೆಲವು ವಾರಗಳ ಮುಂಚೆಯೇ ರಾಜು ನಾಯರ್ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಬಗ್ಗೆ ಮಹಿಳೆ ಪೂನಮಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಳು.


ಪ್ರೇಯಸಿಯ (Girlfriend) ಹದಿಹರೆಯದ ಬಾಲಕಿಯನ್ನು (Teenage Daughter) ಕೊಂದು ನಂತರ ಆಕೆಯ ಶವದೊಂದಿಗೆ (Dead Body)  ಸಂಭೋಗ (Sex) ನಡೆಸಿ ವಿಕೃತಿ ಮೆರೆದ ಆರೋಪದ ಮೇರೆಗೆ 38 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರ ಪೊಲೀಸರು (Maharashtra Police) ಬಂಧಿಸಿದ್ದಾರೆ. ಚೆನ್ನೈನಲ್ಲಿ (Chennai) ನವೆಂಬರ್‌ 12 ರಂದು ಈ ಕೃತ್ಯವೆಸಗಿ ಅಲ್ಲಿಂದ ಮುಂಬೈಗೆ (Mumbai) ಪರಾರಿಯಾಗಿರುವ ಆರೋಪಿಯನ್ನು ಮಹಾರಾಷ್ಟ್ರದ ವಿರಾರ್‌ನಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. 

ತಮಿಳುನಾಡಿನ ಚೆನ್ನೈನ ಪೂನಮಲ್ಲಿಯ ಸೆನೀರ್‌ಕುಪ್ಪಂ ಪ್ರದೇಶದಲ್ಲಿ ವಾಸವಿದ್ದ ರಾಜು ನಾಯರ್‌ ಎಂಬ ತಾಯಿಯ ಲವರ್‌ ಮನೆಗೆ 18 ವರ್ಷದ ಯುವತಿ ಜುಲೈ ತಿಂಗಳಿಂದ ತನ್ನ ತಾಯಿಯ ಜತೆ ವಾಸ ಮಾಡುತ್ತಿದ್ದಾಳೆ. ಗಂಡನಿಂದ ದೂರವಾಗಿದ್ದ ಮಹಿಳೆ ರಾಜು ನಾಯರ್‌ ಜತೆ 4 ವರ್ಷಗಳಿಂದ ವಾಸ ಮಾಡುತ್ತಿದ್ದಾಳೆ. ಆತ ಆಕೆಯ ಮಗಳನ್ನು ಸಹ ನೋಡಿಕೊಳ್ಳುವುದಾಗಿ ಹೇಳಿದ ಹಿನ್ನೆಲೆ ಜುಲೈ ತಿಂಗಳಲ್ಲಿ ಆಕೆಯನ್ನು ಕರೆತರಲಾಗಿದೆ. 

Tap to resize

Latest Videos

ಇದನ್ನು ಓದಿ: Bengaluru: ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದವನಿಗೆ ಮರಣದಂಡನೆ

ನವೆಂಬರ್‌ 12 ರಂದು ತಾಯಿ ಕೆಲಸದಿಂದ ಮರಳಿದ ಬಳಿಕ ಮನೆಯ ಬಾಗಿಲಿಗೆ ಬೀಗ ಹಾಕಲಾಗಿತ್ತು. ನಂತರ ಬಾಗಿಲು ತೆರೆದಾಗ, ಆಕೆಯ ಮಗಳನ್ನು ನೋಡಿ ತಾಯಿ ಗಾಬರಿಯಾದಳು. ಅಲ್ಲದೆ, ಆಕೆಯ ಕಿವಿಯೋಲೆ, ಕಾಲುಂಗುರ ಹಾಗೂ 25 ಸಾವಿರ ರೂ. ಹಣ ಸಹ ಇರಲಿಲ್ಲ. ಅಲ್ಲದೆ, ಮನೆಯ ಮತ್ತೊಂದು ಕೀ ಹೊಂದಿದ್ದ ರಾಜು ನಾಯರ್‌ ಸಹ ಪತ್ತೆಯಾಗಿರಲಿಲ್ಲ. ಇನ್ನು, ನಾಯರ್ ತರಾತುರಿಯಲ್ಲಿ ಹೋಗುವುದನ್ನು ನೆರೆಹೊರೆಯವರು ನೋಡಿ ಆ ಮಹಿಳೆಗೆ ತಿಳಿಸಿದರು.

ನಂತರ ಆಕೆ, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವದ ಮೇಲೆ ಲೈಂಗಿಕ ಕ್ರಿಯೆ ನಡೆಸಿರುವುದು ಪತ್ತೆಯಾಗಿದೆ. ಮೃತರು ಹಾಗೂ ಆಕೆಯ ತಾಯಿಯ ಸೆಲ್‌ಫೋನ್‌ಗಳೊಂದಿಗೆ ಪರಾರಿಯಾಗಿದ್ದ ರಾಜು ನಾಯರ್‌ಗಾಗಿ ಹುಡುಕಾಟ ಆರಂಭಿಸಲಾಗಿತ್ತು.

ಇದನ್ನು ಓದಿ: Hassan: ಜಮೀನು ವಿಷಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಇನ್ನು, ಕೆಲವು ವಾರಗಳ ಮುಂಚೆಯೇ ರಾಜು ನಾಯರ್ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಬಗ್ಗೆ ಮಹಿಳೆ ಪೂನಮಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಆರೋಪಿ ನಾಯರ್ ನಂತರ ವಿರಾರ್ (ಪೂರ್ವ) ನಲ್ಲಿರುವ ಫೂಲ್ಪಾಡಾಗೆ ಆಗಮಿಸಿದ್ದು, ಅಲ್ಲಿ ಆತ ದಿನಗೂಲಿ ಕೆಲಸ ಮಾಡಲು ಪ್ರಾರಂಭಿಸಿದ್ದ ಎಂದು ವರದಿಯಾಗಿದೆ.

ಆದರೆ, ಗರ್ಲ್‌ಫ್ರೆಂಡ್‌ನಿಂದ ಕದ್ದ ಫೋನ್‌ ಒಂದನ್ನು ಆತ ಸ್ವಿಚ್‌ ಆನ್ ಮಾಡಿದ್ದು, ನಂತರ ಶುಕ್ರವಾರ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಆರೋಪಿಯನ್ನು ತಮಿಳುನಾಡಿನ ಚೆನ್ನೈನ ಪೂನಮಲ್ಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಈತ ಈ ಹಿಂದೆ ಕ್ರಿಮಿನಲ್ ದಾಖಲೆ ಹೊಂದಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ. ರಾಜು ನಾಯರ್ ಅವರನ್ನು ಟ್ರಾನ್ಸಿಟ್‌ ಕಸ್ಟಡಿಗಾಗಿ ವಸಾಯ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇನ್ನು, ಬಾಲಕಿಯ ಕತ್ತು ಹಿಸುಕಿದಾಗ ತಾನು ಕುಡಿದಿದ್ದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ತಂದೆ​- ಮಲತಾಯಿ ಕೊಲೆಗೆ ಸಂಚು: ವಕೀಲನ ಬಂಧನ

ರಾಜು ನಾಯರ್‌ ಪತ್ನಿ ಮನ್ವೇಲ್ಪದ ಎಂಬಲ್ಲಿ ವಾಸವಾಗಿದ್ದು, ಆತ 7 ವರ್ಷಗಳ ಹಿಂದೆ ಕೆಲಸಕ್ಕಾಗಿ ಚೆನ್ನೈಗೆ ತೆರಳಿದ್ದ ಎಂಬುದು ಸಹ ಬೆಳಕಿಗೆ ಬಂದಿದೆ. ಸದ್ಯ, ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿ ಆತ ಮಾಡಿದ ಕೃತ್ಯಕ್ಕೆ ಕಠಿಣ ಶಿಕ್ಷೆಯನ್ನು ನ್ಯಾಯಾಲಯ ನೀಡಬೇಕಿದೆ. 

click me!