Crime News; 8 ಮರ್ಡರ್ ಮಾಡಿದ್ದೇವೆ, ಬಾಯಿಬಿಟ್ರೆ ನಿಂದು 9ನೇದು'

By Suvarna News  |  First Published Nov 13, 2021, 6:13 PM IST

* ದೊಡ್ಡಜಾಲದ ಐಷಾರಾಮಿ ಮನೆಯಲ್ಲಿ ನಡೆದ ದರೋಡೆ.

* ಗೀತಾ ಎಂಬ ಮಹಿಳೆಯ ಮನೆಗೆ ನುಗ್ಗಿದ್ದ ಆರೋಪಿಗಳು.

* ಮನೆಯೊಡತಿ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುಂಬಿದ್ರು. 

* 10 ಸಾವಿರ ನಗದು, 160 ಗ್ರಾಂ ಚಿನ್ನಾಭರಣ ಕದ್ದು ಪರಾರಿ


ಬೆಂಗಳೂರು(  ನ. 13)  ದೊಡ್ಡಜಾಲದ(Bengaluru) ಐಷಾರಾಮಿ ಮನೆಯಲ್ಲಿ ದರೋಡೆ ಪ್ರಕರಣವನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿದ್ದಾರೆ.  ಗೀತಾ ಎಂಬ ಮಹಿಳೆಯ ಮನೆಗೆ ನುಗ್ಗಿದ್ದ ಆರೋಪಿಗಳು ಮನೆಯೊಡತಿ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುಂಬಿದ್ದಾರೆ.  ಆಕೆ ಕುತ್ತಿಗೆಗೆ ಚಾಕು ಇಟ್ಟು, ಕಟ್ಟಿ ಹಾಕಿದ್ದ ಖತರ್ನಾಕ್​ಗಳು​ಮನೆಯೆಲ್ಲಾ ಜಾಲಾಡಿ ಹಣ, ಚಿನ್ನಾಭರಣ(Robbery) ದೋಚಿದ್ದರು.

ನಂತರ 10 ಸಾವಿರ ನಗದು, 160 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಮನೆಯಿಂದ ತೆರಳುವ  ವೇಳೆ ಮನೆಯೊಡತಿಗೆ ಅವಾಜ್ ಹಾಕಿದ್ದಾರೆ. ಹುಷಾರ್ ನಾವು ಈಗಾಗಲೇ 8 ಮರ್ಡರ್ ಮಾಡಿದ್ದೀವಿ. ಪೊಲೀಸರಿಗೆ ಏನಾದ್ರು ಹೇಳಿದ್ಯೋ ನೀನೇ 9ನೇ (Murder) ಕೊಲೆಯಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

Latest Videos

undefined

ನಂತರ ಮನೆಯೊಡತಿಯನ್ನು ರೂಂನಲ್ಲಿ ತಳ್ಳಿ ಲಾಕ್ ಮಾಡ್ಕೊಂಡು ಎಸ್ಕೇಪ್ ಆಗಿದ್ದಾರೆ. ರಾಬರಿ ಬೆನ್ನಲ್ಲೇ ಪೊಲೀಸರಿಗೆ ಫೋನ್ ಮಾಡಿ ಮಹಿಳೆ ವಿಚಾರ ತಿಳಸಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದು ಮಾಹಿತಿ ಪಡೆದ ಚಿಕ್ಕಜಾಲ ಪೊಲೀಸರು  ಅಂಕಿ ಅಂಶ ಕಲೆ ಹಾಕಿದ್ದಾರೆ. ಆರೋಪಿಗಳ ಪೈಕಿ ಒರ್ವ ಬ್ಲೂ ಶರ್ಟ್ ಧರಿಸಿದ್ದ ಎಂಬ ಮಾಹಿತಿ ಸಿಕ್ಕಿದೆ. ಕೂಡಲೇ ಇಡೀ ಏರಿಯಾ ಜಾಲಾಡಿ ಹೊಯ್ಸಳಕ್ಕೆ ಮೆಸೇಜ್ ನೀಡಿದ್ದಾರೆ. ಬ್ಲೂ ಶರ್ಟ್ ಯುವಕನನ್ನ ತಪಾಸಣೆ ಮಾಡಿ ಎಂದು ಸೂಚನೆ ನೀಡಲಾಗಿದೆ. ಇದರಂತೆ ಪೊಲೀಸರು ತಕ್ಷಣ ರೌಂಡ್ಸ್ ಶುರು ಮಾಡಿದ್ದಾರೆ.

ಅನುಮಾನಾಸ್ಪದವಾಗಿ ಓಡಾಡ್ತಿರೋ ಯುವಕನ ತಪಾಸಣೆ ನಡೆಸಲಾಗಿದೆ. ಕ್ರೈಂ ಸೀನ್​ನಿಂದ ಏರಿಯಾ ರೌಂಡ್ಸ್​ಗಿಳಿದಿದ್ದ ಪೊಲೀಸರ ಜೀಪ್ ನೋಡ್ತಿದ್ದಂತೆ ಓಡಲು ಆರಂಭಿಸಿದ ಆರೋಪಿ ರಾಕೇಶ್ ಓಡಲು ಆರಂಭಿಸಿದ್ದಾನೆ ಕೂಡಲೇ ಆರೋಪಿ ರಾಕೇಶ್​ನನ್ನ ಬಂಧಿಸಿದಾಗ ಪ್ರಕರಣದ ಸತ್ಯನ ಹೊರಗೆ ಬಂದಿದೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.

ಪೆಟ್ರೋಲ್ ಬಂಕ್ ಕ್ಯಾಶೀಯರ್ ಮೇಲೆ ಮಚ್ಚು  ಬೀಸಿದ
 
ಉದ್ಯಮಿ ಮನೆ ದರೋಡೆ;  ದೆಹಲಿಯ ಪಶ್ಚಿಮ ವಿಹಾರ್ ಪ್ರದೇಶದಲ್ಲಿ ಉದ್ಯಮಿಯೊಬ್ಬರ  ಮನೆ ದರೋಡೆ ಮಾಡಿದ್ದ  ಐವರ ತಂಡ ಐದು 2 ಕೋಟಿ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ದೋಚಿತ್ತು. ಈ ಪ್ರಕರಣ ದೊಡ್ಡ ಸಂಚಲನಕ್ಕೆ ಕಾರಣವಾಗಿ ಭದ್ರತೆಗೆ ಸಂಬಂಧಿಸಿ ಪ್ರಶ್ನೆ ಎತ್ತಿತ್ತು.

ಕರೋನಾ ಕಾಲದಲ್ಲಿಯೂ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ದೋಚುತ್ತಿದ್ದ ತಂಡವನ್ನು ಪೊಲೀಸರು  ಬೆಂಗಳೂರಿನಲ್ಲಿ ಜೈಲಿಗೆ ಅಟ್ಟಿದ್ದರು. ಮೈಸೂರು ರಸ್ತೆಯ ಪೆಟ್ರೋಲ್ ಬಂಕ್ ಕ್ಯಾಶಿಯರ್ ಮೇಲೆ ಮಚ್ಚು ಬೀಸಿ ಹಣದ ಚೀಲ ಕಸಿಯಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿತ್ತು.

ಬ್ರಿಟಿಷರ ಕಾಲದ ಆನೆ ಪಾದ ಸೇರಿದಂತೆ ಪ್ರಾಚೀನ(Ancient) ಕಾಲದ ದುಬಾರಿ ಮೌಲ್ಯದ ವಸ್ತುಗಳನ್ನು ಹಾಡಹಗಲೇ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು.

ಕಟ್ಟಿಗೇನಹಳ್ಳಿ ನಿವಾಸಿ ಆರ್ಯನ್‌ ಖಾನ್‌(32) ಬಂಧಿಸಿ ವನ್ಯಜೀವಿಗಳಿಗೆ(Wildlife) ಸಂಬಂಧಿಸಿದ ಹಾಗೂ ದೇಶ-ವಿದೇಶಗಳ ಪ್ರಾಚೀನ ಕಾಲದ ವಸ್ತುಗಳನ್ನು ವಶಕ್ಕೆ  ಪಡೆಯಲಾಗಿತ್ತು.   ಆರೋಪಿಯಿಂದ ಸುಮಾರು 1 ಕೋಟಿ ರು. ಮೌಲ್ಯದ ಸುಮಾರು 80 ವರ್ಷ ಹಳೆಯದಾದ ಆನೆ ಕಾಲಿನ ಪಾದ(Elephant Foot), ಆನೆಯ ದಂತದಿಂದ ಮಾಡಿದ ಶೂ ರಿಮೂವರ್‌, ಯೂ ಬೋಟ್ಸ್‌ ವೆಸ್ಟ್‌ ವಾರ್ಡ್‌ ಹೆಸರಿನ ಪುಸ್ತಕ, ತಾಮ್ರದ ಪ್ಲೇಟ್‌, ಮಿಲ್ಕ್‌ ಜಗ್‌, ಶುಗರ್‌ ಪಾಟ್‌, ಜರ್ಮನ್‌ ಸಿಲ್ವರ್‌ ಸ್ಪೂನ್‌, ಭೂತನ್‌ ಶೋ ಪೀಸ್‌, ಐರೀಷ್‌ ಟೀ ಮೇಕರ್‌, ಪ್ರಾಣಿ(Animal) ಮೂಳೆಯಿಂದ ಮಾಡಲಾದ ಚಮಚ, ಜರ್ಮನ್‌ ಸಿಲ್ವರ್‌ನ ಪೋರ್ಕ್ ಸ್ಪೂನ್‌, ಟೇಬಲ್‌ ನೈಫ್‌ ಶಾರ್ಪನರ್‌ ಸೇರಿದಂತೆ ಹಲವು ಪ್ರಾಚೀನ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. 

 

 

click me!