* ಯುವಕರ ಥಳಿಸಿದ್ದ ಪೊಲೀಸ್ ಸಿಬ್ಬಂದಿ ಅಮಾನತು
* ಆರ್ ಆರ್ ಸಿನಿಮಾಕ್ಕೆ ತೊಂದರೆ, ಥಿಯೇಟರ್ ಪುಡಿ ಪುಡಿ
* ನಿಗೂಢ ಶೂಟೌಟ್ ಗೆ ಸ್ಥಳೀಯ ಮುಖಂಡ ಬಲಿ
* ಮಂಡ್ಯದಲ್ಲಿ ಭೀಕರ ಕಾರು ಅಪಘಾತ
ಬಳ್ಳಾರಿ(ಮಾ. 27) ಎಮ್ಮೆ ಕಳ್ಳತನದ ಆರೋಪದಲ್ಲಿ ಯುವಕನಿಗೆ ಪೊಲೀಸರಿಂದ (Karnataka Police) ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕುರುಗೋಡು ಪಿಎಸ್ ಐ ಹಾಗೂ ಹೆಡ್ ಕಾನ್ಸಟೇಬಲ್ (Suspend) ಅಮಾನತಾಗಿದ್ದಾರೆ.
ಪಿಎಸ್ ಐ ಮೌನೇಶ ರಾಠೋಡ್ ಹಾಗೂ ಮುಖ್ಯ ಪೇದೆ ಸುರೇಶ ಅವರನ್ನು ಅಮಾನತು ಮಾಡಲಾಗಿದೆ. ಎಫ್ ಐಆರ್ ದಾಖಲಿಸದೇ ಆರೋಪಿ ಬಂಧನ ಹಾಗೂ ಬಂಧನ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿದ್ದ ಆರೋಪ ಕೇಳಿ ಬಂದಿತ್ತು.
ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಎಸ್ ಪಿ ಆದೇಶ ಹೊರಡಿಸಿದ್ದಾರೆ. ದನ ಕಳ್ಳತನ ಅರೋಪದ ಮೇರೆಗೆ ವದ್ದಟ್ಟಿ ಗ್ರಾಮದ ಭರತ ಹಾಗೂ ಮಂಜು ಎನ್ನುವವರನ್ನ ವಶಕ್ಕೆ ಪಡೆಯಲಾಗಿತ್ತು. ಕುರುಗೋಡು ಪೊಲೀಸರಿಂದ ದಲಿತ ಯುವಕ ಭರತಗೆ ಹಿಗ್ಗಾಮುಗ್ಗಾ ಥಳಿಸಿದ್ದ ಆರೋಪ ಬಂದಿತ್ತು.
ಬೆಂಗಳೂರು; ವರ್ಕ್‌ಔಟ್ ಮಾಡುತ್ತಲೇ ಕುಸಿದು ಬಿದ್ದು ಮಹಿಳೆ ಸಾವು? ಏನ್ ಕಾರಣ
ಪೊಲೀಸರ ಥಳಿತಕ್ಕೆ ಪ್ರಜ್ಞೆ ತಪ್ಪಿದ್ದ ಯುವಕನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಂಪ್ಲಿ ಕ್ಷೇತ್ರದ ಕುರಗೋಡ ಠಾಣೆಯ ಪೊಲೀಸರ ದೌರ್ಜನ್ಯ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.
ಆರ್ ಆರ್ ಆರ್ ಸಿನಿಮಾಕ್ಕೆ ಅಡ್ಡಿ.. ಗಾಜು ಪುಡಿ ಪುಡಿ: ಆರ್ ಆರ್ ಆರ್ (RRR) ಸಿನೆಮಾಗೆ ತಾಂತ್ರಿಕ ಸಮಸ್ಯೆಯಾದ ಕಾರಣ ಥಿಯೇಟರ್ ಪಿಓಪಿ ಶೀಟ್ ಪುಡಿಪುಡಿ ಮಾಡಿ ಅಭಿಮಾನಿಗಳು ದಾಂಧಲೆ ಎಬ್ಬಿಸಿದ್ದಾರೆ. ದಾವಣಗೆರೆಯ ಜಗಳೂರು ಪಟ್ಟಣದ ಭಾರತ್ ಚಿತ್ರಮಂದಿರದಲ್ಲಿ ಘಟನೆ ನಡೆದಿದೆ.
ಸಿನಿಮಾ ಸರಿಯಾಗಿ ಸೌಂಡ್ ಇಲ್ಲದೆ ಸ್ಟ್ರಕ್ ಆಗ್ತಾ ಇತ್ತು. ತಾಂತ್ರಿಕ ದೋಷದಿಂದ ಸಿನೆಮಾ ಕಟ್ ಆಗ್ತಾ ಇತ್ತು. ಇದರಿಂದ ರೊಚ್ಚಿಗೆದ್ದ ಜನರಿಂದ ಥಿಯೇಟರ್ ಪಿಓಪಿ ಸೀಟ್ ಪುಡಿ ಪುಡಿಯಾಗಿದೆ. ಕೊನೆಗೆ ಅಭಿಮಾನಿಗಳ ಕ್ಷಮೆ ಕೇಳಿ ಸಿನಿಮಾ ಮಂದಿರ ಮಾಲೀಕ ಹಣ ಹಿಂದಿರುಗಿಸಿದ್ದಾರೆ.
ನಿಗೂಢ ಶೂಟೌಟ್: ತೀರ್ಥಹಳ್ಳಿ ಕಾಡಿನಲ್ಲಿ ಗನ್ ಶಾಟ್ ಗೆ ನೊಣಬೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಕಾಂತರಾಜ್ ಸಾವು ಕಂಡಿದ್ದಾರೆ. ಅರಳಸುರಳಿ ಸಮೀಪ ಕಾಡಿನಲ್ಲಿ ಬೇಟೆಯಾಡುತ್ತಿದ್ದ ವೇಳೆ ಅವಘಡವಾಗಿದೆ ಸುಮಾರು 10 ಕ್ಕೂ ಹೆಚ್ಚು ಜನರಿದ್ದ ಗುಂಪು ಬೇಟೆ ನಡೆಸಿತ್ತು. ಪ್ರಾಣೀಯೊಂದಕ್ಕೆ ಗುರಿಯಿಟ್ಟ ಬುಲೆಟ್ ಕಾಂತರಾಜ್ ಗೆ ಬಿದ್ದು ಸಾವು ಕಂಡಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಜೆ ಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ವಕ್ಷೇತ್ರ ತೀರ್ಥಹಳ್ಳಿ ಪ್ರವಾಸದಲ್ಲಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು ಹಾಗೂ KSRTC ಬಸ್ ನಡುವೆ ಡಿಕ್ಕಿ (Road Accident) ಸಂಭವಿಸಿ ಮುನ್ ಮುಲ್ ನಿರ್ದೇಶಕ ಸೇರಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೇಲುಕೋಟೆಯ ಕಣಿವೆ ಬಳಿ ಘಟನೆ ನಡೆದಿದೆ. ಮನ್ ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರ ಮತ್ತು ಅವರ ಕಾರು ಚಾಲಕನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಖಾಸಗಿ ಬಸ್ ಅಪಘಾತ: ಖಾಸಗಿ ಬಸ್ (Private Bus) ಅಪಘಾತದಲ್ಲಿ (Accident) ಆರು ಜನ ಮೃತಪಟ್ಟ ಘಟನೆ ಮಾಸುವಮುನ್ನ ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಖಾಸಗಿ ಬಸ್ಸೊಂದು (Bus) ಕಂದಕ್ಕೆ ಉರುಳಿತ್ತು. ದತ್ತಪೀಠದ (Dattatreya Swamy Dattapita)ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಖಾಸಗಿ ಬಸ್ ಬಿದ್ದಿತ್ತು. ಪ್ರಾಣ ಹಾನಿ ಸಂಭವಿಸಿರಲಿಲ್ಲ. ಚಾಮರಾಜನಗರ ಜಿಲ್ಲೆಯಿಂದ ಇನ್ನೊಂದು ಘಟನೆ ವರದಿಯಾಗಿತ್ತು. ತುಮಕೂರು ಬಸ್ ಅಪಘಾತದಲ್ಲಿ ಅರಳಬೇಕಿದ್ದ ಜೀವಗಳು ಕೊನೆಯಾಗಿದ್ದವು.