ಕಾಫಿನಾಡಲ್ಲಿ ಕಾಡುಪ್ರಾಣಿಗಳೆನೂ ಹೊಸದಲ್ಲ. ನಿತ್ಯ ಒಂದಲ್ಲ ಒಂದು ಊರಿನಲ್ಲಿ ಕಾಣಿಸಿಕೊಳ್ತಾನೇ ಇರುತ್ತೇ ಅದ್ರಲ್ಲಿ ಕಾಡಾನೆಯಂತೂ ನಾಡಿರಲಿ, ತೋಟವಿರಲಿ ಓಡಾಡ್ತಾನೇ ಇರುತ್ತೇ. ಆದರೆ ಕಾಫಿ ನಾಡಿನ ಕೆಳಗೂರಿನಲ್ಲಿ ನಡೆದಿರೋ ದಾಳಿಯಂತೂ ಜನರ ನಿದ್ದೆಗೆಡಿಸಿದೆ. ಕಾರ್ಮಿಕರಂತೂ ತೋಟಕ್ಕೆ ಹೋಗೋಕೆ ಹಿಂಜರಿಯುತ್ತಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.26): ಕಾಫಿನಾಡಲ್ಲಿ ಕಾಡುಪ್ರಾಣಿಗಳೆನೂ ಹೊಸದಲ್ಲ. ನಿತ್ಯ ಒಂದಲ್ಲ ಒಂದು ಊರಿನಲ್ಲಿ ಕಾಣಿಸಿಕೊಳ್ತಾನೇ ಇರುತ್ತೇ ಅದ್ರಲ್ಲಿ ಕಾಡಾನೆಯಂತೂ ನಾಡಿರಲಿ, ತೋಟವಿರಲಿ ಓಡಾಡ್ತಾನೇ ಇರುತ್ತೇ. ಆದರೆ ಕಾಫಿ ನಾಡಿನ ಕೆಳಗೂರಿನಲ್ಲಿ ನಡೆದಿರೋ ದಾಳಿಯಂತೂ ಜನರ ನಿದ್ದೆಗೆಡಿಸಿದೆ. ಕಾರ್ಮಿಕರಂತೂ ತೋಟಕ್ಕೆ ಹೋಗೋಕೆ ಹಿಂಜರಿಯುತ್ತಿದ್ದಾರೆ.
ತೋಟದ ಕಾರ್ಮಿಕರ ಮೇಲೆ ಕಾಡಾನೆ ದಾಳಿ-ಸ್ಥಳದಲ್ಲೇ ಮಹಿಳೆ ಸಾವು: ಹೊಟ್ಟೆಪಾಡಿಗಾಗಿ ಕೂಲಿ ಅರಸಿಬಂದ ಮಹಿಳಾ ಕಾರ್ಮಿಕರೊಬ್ಬರು ಆನೆದಾಳಿಗೆ ಬಲಿಯಾಗಿದ್ದಾರೆ.ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೇದೇವರು ತಾಂಡದ ಸರೋಜ(45) ಸಾವಪ್ಪಿರುವ ಮಹಿಳೆ. ಡಿಸೆಂಬರ್ ತಿಂಗಳಲ್ಲಿ ಕೂಲಿ ಅರಸಿ ಕಬ್ಬಿಣಸೇತುವೆ ಸಮೀಪದ ಕೆಳಗೂರು ಗ್ರಾಮದ ಎಸ್ಟೇಟ್ವೊಂದಕ್ಕೆ ಆಗಮಿಸಿದ್ದರು. ಕಾಫಿಕೊಯ್ಲು ಮುಗಿಸಿ, ಈಗ ಕೆಲವು ಕಾರ್ಮಿಕರು ಮೆಣಸುಕೊಯ್ಲಿನಲ್ಲಿ ನಿರತವಾಗಿದ್ದಾರೆ. ಇಂದು ಬೆಳಿಗ್ಗೆ ಮೃತ ಸರೋಜ ಮತ್ತು ಪುತ್ರಿ ಸ್ವಪ್ನ ಕಾಫಿಬೀಜ ಆರಿಸುವ ಕೆಲಸಕ್ಕೆ ಹೋಗಿದ್ದು, ಕೆಲಸನಿರ್ವಹಿಸುತ್ತಿದ್ದಾಗ ಎಸ್ಟೇಟಿನಲ್ಲೆ ಇದ್ದ ಕಾಡಾನೆ ದಾಳಿ ನಡೆಸಿದೆ.
ಭದ್ರಾ ಅಭಯಾರಣ್ಯದಲ್ಲಿ ಜೆಸಿಬಿಯಿಂದ ಕಾಡಾನೆಯನ್ನು ಹಿಂಸಿಸಿದ ಕಿಡಿಗೇಡಿಗಳು!
ಮಹಿಳೆ ದಾಳಿಗೆ ಒಳಗಾಗುತ್ತಿದ್ದಂತೆ ಮಗಳನ್ನು ಅಲ್ಲಿಂದ ಓಡಿಹೋಗುವಂತೆ ತಿಳಿಸಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಬಂದ ಸ್ವಪ್ನ ನಡೆದ ಘಟನೆಯನ್ನು ವಿವರಿಸಿದ್ದು, ಉಳಿದ ಕಾರ್ಮಿಕರು ಸ್ಥಳಕ್ಕೆ ಹೋದಾಗ ಮಹಿಳೆಯ ಪ್ರಾಣಪಕ್ಷಿಹಾರಿಹೋಗಿತ್ತು.ಮೃತರು ಪತಿ ನಾಗರಾಜ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಭಾನುವಾರ ಕಲ್ಲೇದೇವರತಾಂಡದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಐಬೆಕ್ಸ್ ಬೇಲಿಯಿಂದ ಕಾಡು ಪ್ರಾಣಿ ಹಾವಳಿ ತಡೆಯೋ ಪ್ಲಾನ್ ಗೆ ಕಾಡಾನೆ ತಣ್ಣೀರು: ಇನ್ನೂ ಕಾಡಾನೆ ದಾಳಿಯಂತೂ ಸ್ಥಳೀಯರನ್ನು ಬೆಚ್ಚಿ ಬಿಳಿಸಿರೋದು ಒಂದು ಕಡೆಯಾದ್ರೆ ಕಾಡು ಪ್ರಾಣಿ ಹಾವಳಿ ತಡೆಯೋಕೆ ಅಂತಾನೇ ಐಬೆಕ್ಸ್ ಬೇಲಿಗಳನ್ನು ಕೆಲವರು ಅಳವಡಿಸಿದ್ದಾರೆ.ಐಬೆಕ್ಸ್ ಬೇಲಿಯಿಂದ ಕಾಡು ಪ್ರಾಣಿ ಹಾವಳಿ ತಡೆಯೋ ಪ್ಲಾನ್ ಗೆ ಕಾಡಾನೆ ತಣ್ಣೀರು ಎರಚಿದೆ.
Hassan: ದಂತಕ್ಕಾಗಿ ಕಾಡಾನೆ ಹತ್ಯೆ: ಮೂವರ ಬಂಧನ
ಸೌರ ವಿದ್ಯುತ್ ತಂತಿ ಬೇಲಿಯನ್ನೇ ದಾಟಿ ಹೋಗಿ ದಾಳಿ ನಡೆಸಿರೋದಂತೂ ಮುಂದೇ ಹೇಗೆ ಕಾಡಾನೆ ದಾಳಿ ನಡೆಸೋದನ್ನು ತಪ್ಪಿಸಿಕೊಳ್ಳೋದು ಅನ್ನೋ ಅನುಮಾನದಲ್ಲಿದ್ದಾರೆ ಸ್ಥಳೀಯರು..ಒಟ್ಟಾರೆ ಮಾನವ ಪ್ರಾಣಿ ಸಂಘರ್ಷವಂತೂ ನಡೆಯುತ್ತಲೇ ಇರುತ್ತೇ ಕಾಫಿ ನಾಡಲ್ಲಿ ಅದ್ರೆ ಕೆಳಗೂರಿನ ಕಾಡಾನೆ ದಾಳಿಯಂತೂ ಮಲೆನಾಡಿಗರ ನಿದ್ದೆಗೆಡಿಸಿದೆ..ಕಾಫಿ ತೋಟಕ್ಕೂ ಕಾರ್ಮಿಕರು ಹೋಗೋಕೆ ಹಿಂಜರಿಯುವಂತೆ ಮಾಡಿರು ಒಂಟಿ ಸಲಗವನ್ನು ಸ್ಥಳಾಂತರ ಮಾಡುವಂತೆ ಸ್ಥಳೀಯರು ಅರಣ್ಯ ಇಲಾಖೆ ಗೆ ಒತ್ತಾಯಿಸಿದ್ದಾರೆ.