ಬೀದರ್‌ನಲ್ಲಿ ಭೀಕರ ಅಪಘಾತ: ತೆಲಂಗಾಣದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!

By Gowthami K  |  First Published Oct 7, 2024, 7:56 PM IST

ಬೀದರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಈ ದುರಂತ ನಡೆದಿದೆ.


ಬೀದರ್ ನಲ್ಲಿ ಭೀಕರ ಅಪಘಾತವಾಗಿ ಒಂದೇ ಕುಟುಂಬದ ನಾಲ್ವರು ದುರ್ಮರಣವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಬಸ್ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ, ಸ್ಥಳದಲ್ಲೆ ನಾಲ್ಕು ಜನ ಸಾವು. ತೆಲಂಗಾಣ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಗಂಡ, ಹೆಂಡತಿ ಹಾಗೂ ಮಗ ಸೇರಿ ನಾಲ್ಕು ಜನ ಸ್ಥಳದಲ್ಲೇ ಭೀಕರ ಅಂತ್ಯ ಕಂಡಿದ್ದಾರೆ.

ಬೀದರ್‌ನ ದೇವ ದೇವವನ ಪಾರ್ಕ್ ಬಳಿ ಈ ಘಟನೆ ನಡೆದಿದ್ದು, ಜಗನ್ನಾಥ (35), ರೇಣುಕಾ (34), ವಿನೋದ್ ಕುಮಾರ್ (14) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಮೃತರು ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಗಣೇಶಪುರ ಗ್ರಾಮದವರು ಎಂದು ತಿಳಿದುಬಂದಿದೆ.

Tap to resize

Latest Videos

undefined

ಮುರುಘಾ ಶ್ರೀ ಜೈಲಿಂದ ಬಿಡುಗಡೆ, ಚಿತ್ರದುರ್ಗದಲ್ಲಿ ನೆಲೆ ಇಲ್ಲ, ದಾವಣಗೆರೆಯಲ್ಲಿ ವಾಸ್ತವ್ಯಕ್ಕೆ ತೆರಳಿದ ಶರಣರು!

ಜಮೀನಿನಲ್ಲಿ ಕೆಲಸ‌ ಮುಗಿಸಿಕೊಂಡು ಮನೆಗೆ ವಾಪಸ್ ಆಗುವ ವೇಳೆ ಅಪಘಾತವಾಗಿದೆ. ಹೈದ್ರಾಬಾದ್‌ನಿಂದ ಬೀದರ್ ಕಡೆಗೆ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ನಾಲ್ವರು ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ ಮತ್ತು ಬಸ್‌  ಮುಖಾಮುಖಿಯಾಗಿ ಈ ದುರಂತ ಸಂಭವಿಸಿದೆ.

ಪವನ್ ಕಲ್ಯಾಣ್ ನಿಜವಾದ ಹೆಸರೇನು? ತಾಯಿ ಅಂಜನಾ ದೇವಿ ಬಹಿರಂಗಪಡಿಸಿದ ಕುತೂಹಲಕಾರಿ ಕಥೆ

ಬೀದರ್ ಗಡಿಗೆ ಹೊಂದಿಕೊಂಡಿರುವ ತೆಲಂಗಾಣದ ಗಣೇಶಪುರ ಬಳಿ ಅಂದದೆ ಬೀದರ್ ಹಾಗೂ ತೆಲಂಗಾಣದ ಬಾರ್ಡರ್ ಕಮಾನ್ ಬಳಿಯಿಂದ ಒಂದು ಕಿಲೋ ಮೀಟರ್ ಅಂತರದಲ್ಲಿ  ಅಪಘಾತ ಸಂಭವಿಸಿದ್ದು, ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆ ಬಳಿ‌ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮೂವರ ಮೃತದೇಹವನ್ನ ಬೀದರ್ ಬ್ರಿಮ್ಸ್ ಶವಾಗಾರಕ್ಕೆ ರವಾನೆ.

click me!