ಬೆಂಗಳೂರು ಜಯಶ್ರೀ ಬಾರ್‌ನಲ್ಲಿ ಕೇವಲ 20 ರೂ.ಗೆ ಆಫ್ ಮರ್ಡರ್!

By Sathish Kumar KH  |  First Published Oct 7, 2024, 7:39 PM IST

ಬೆಂಗಳೂರಿನ ಬಾರ್‌ನಲ್ಲಿ ಕೇವಲ 20 ರೂಪಾಯಿಗೆ ಕ್ಯಾಷಿಯರ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮೂವರು ಆರೋಪಿಗಳು ಚಾಕು ಮತ್ತು ಬಾಟಲಿಗಳಿಂದ ಹಲ್ಲೆ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.


ಬೆಂಗಳೂರು (ಅ.07): ಬೆಂಗಳೂರಿನ ಬಾರ್‌ನಲ್ಲಿ ಕೇವಲ 20 ರೂಪಾಯಿಗೆ ಕ್ಯಾಷಿಯರ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮೂವರು ಆರೋಪಿಗಳು ಚಾಕು ಮತ್ತು ಬಾಟಲಿಗಳಿಂದ ಹಲ್ಲೆ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೇವಲ 20 ರೂಪಾಯಿಗೆ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಷಿಯರ್‌ನನ್ನು ಆಫ್ ಮರ್ಡರ್ ಮಾಡಿದ ಘಟನೆ ನಡೆದಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳಲು ಬಂದ ಅನೇಕರು ಸಣ್ಣ ಪುಟ್ಟಣ ಕಾರಣಕ್ಕೂ ತಮ್ಮ ಅಮೂಲ್ಯವಾದ ಜೀವವನ್ನೇ ಕಳೆದುಕೊಂಡು ಕುಟುಂಬಗಳನ್ನು ಅನಾಥ ಮಾಡುವ ಪ್ರಕರಣಗಳು ನಡೆಯುತ್ತಿವೆ. ಅಂಥದ್ದರಲ್ಲಿ ಕೇವಲ 20 ರೂ.ಗೆ ಬೆಂಗಳೂರಿನ ಜಯಶ್ರೀ ಬಾರ್‌ನಲ್ಲಿ ಕ್ಯಾಶಿಯರ್‌ನನ್ನು ಆಫ್ ಮರ್ಡರ್ ಮಾಡಿದ್ ಘಟನೆ ನಡೆದಿದೆ. ಬಾರ್ ಕ್ಯಾಷಿಯರ್ ಗೆ ಚಾಕು ಇರಿದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Latest Videos

undefined

ಇದನ್ನೂ ಓದಿ: ನೀವು ಬೆಂಗಳೂರು ನಿವಾಸಿಗಳಾಗಿದ್ದು, ನಿಮ್ಮನೆ ಬಳಿ ಪಾರಿವಾಳ ಬಂತೆಂದರೆ ಎಚ್ಚರವಾಗಿರಿ!

ಈ ಘಟನೆ ವಿದ್ಯಾರಣ್ಯಪುರ ಬಳಿಯ ನರಸೀಪುರ ಜಯಶ್ರೀ ಬಾರ್ ನಲ್ಲಿ ನಡೆದಿದೆ. ಮೂವರು ಆರೋಪಿಗಳಿಂದ ಕ್ಯಾಷಿಯರ್ ಮೇಲೆ ಹಲ್ಲೆ ಮಾಡಲಾಗಿದೆ. ಚಾಕು ಮತ್ತು ಬಾಟಲ್ ನಿಂದ ಕ್ಯಾಷಿಯರ್ ರಂಜಿತ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನು ಈ ಘಟನೆ ಕೇವಲ 20 ರೂಪಾಯಿಗೆ ನಡೆದಿದೆ ಎನ್ನುವುದೇ ತೀರಾ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಇನ್ನು ಪೊಲೀಸರು ಬಂಧಿಸಿರುವ ಆರೋಪಿಗಳು ಆಟೋ ಡ್ರೈವರ್‌ಗಳಾಗಿರುವ ಚೇತನ್ ಹಾಗು ಕಾರ್ತಿಕ್ ಎಂಬುವವರಾಗಿದ್ದಾರೆ.

ಚೇತನ್, ಕಾರ್ತಿಕ್ ಹಾಗೂ ಇನ್ನಬ್ಬ ಸ್ನೇಹಿತ ವಿದ್ಯಾರಣ್ಯಪುರ ಬಳಿಯಿರುವ ಜಯಶ್ರೀ ಬಾರ್‌ಗೆ ಹೋಗಿದ್ದಾರೆ. ಅಲ್ಲಿ ಎಣ್ಣೆ ಹೊಡೆದು ನಂತರ ಹೆಚ್ಚುವರಿಯಾಗಿ ಮದ್ಯ ಖರೀದಿ ಮಾಡಿದ್ದರ ಬೆಲೆ 150 ರೂ. ಆಗಿತ್ತು. ಆದರೆ, ಬಾರ್ ಕ್ಯಾಷಿಯರ್ ರಂಜಿತ್ 20 ರೂಪಾಯಿ ಹೆಚ್ಚಿಗೆ ಕೇಳಿದ್ದರು. ಈ ಹಿನ್ನಲೆಯಲ್ಲಿ ಮಾತಿಗೆ ಮಾತು ಬೆಲೆದು ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಚಾಕು ಹಾಗೂ ಗಾಜಿನ ಬಾಟಲಿಗಳನ್ನು ಒಡೆದು ಹಲ್ಲೆ ಮಾಡಿದ್ದಾರೆ. ಇದರಿಂದ ಕ್ಯಾಷಿಯರ್ ಗಂಭೀರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇಕ್ ದುರಂತ: ಅಪ್ಪ ತಂದುಕೊಟ್ಟ ಬರ್ತಡೇ ಕೇಕ್ ತಿಂದು ಪ್ರಾಣಬಿಟ್ಟ ಮಗು; ತಂದೆ-ತಾಯಿ ಗಂಭೀರ!

ಬಾರ್ ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿದ ಮೂರು ಜನ ಆರೋಪಿಗಳಲ್ಲಿ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.

click me!