* ಬೆಳಗಾವಿ ಜಿಲ್ಲೆಯ ಸಿಂದಿಕುರಬೇಟ ಗ್ರಾಮದಲ್ಲಿ ಯುವಕನ ಬಂಧನ
* ಮುಸ್ತಾಕ್ ಅಲಿ ಹೆಸರಿನಲ್ಲಿ ಹರ್ಷ ಕೊಲೆಗೆ ಪ್ರತೀಕಾರವಾಗಿ ಪೋಸ್ಟ್ ಹಾಕಿದ್ದ ಸಿದ್ದಾರೂಢ
* ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಪೋಲಿಸರಿಂದಲೂ ತನಿಖೆ
ಬಾಗಲಕೋಟೆ(ಮಾ.24): ಸಾಮಾಜಿಕ ಜಾಲತಾಣದಲ್ಲಿ(Social Media) ಕೋಮು ದ್ವೇಷದ(Communal Hate) ಪೋಸ್ಟ್ ಮಾಡಿದ್ದ ಯುವಕನನನ್ನ ಪೊಲೀಸರು ಇಂದು(ಗುರುವಾರ) ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸಿಂದಿಕುರಬೇಟ ಗ್ರಾಮದಲ್ಲಿ ಬಾಗಲಕೋಟೆ(Bagalkot) ಪೊಲೀಸರು ಬಂಧಿಸಿದ್ದಾರೆ. ಸಿದ್ದಾರೂಢ ಎಂಬಾತನೇ ಬಂಧಿತ ಯುವಕನಾಗಿದ್ದಾನೆ.
ಮುಸ್ತಾಕ್ ಅಲಿ ಹೆಸರಿನಲ್ಲಿ ಹರ್ಷ ಕೊಲೆಗೆ(Harsha Murder) ಪ್ರತೀಕಾರವಾಗಿ ಸಿದ್ದಾರೂಢ ಪೋಸ್ಟ್ ಹಾಕಿದ್ದನು. ಶಿವಮೊಗ್ಗದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ ಅವರಿಗೂ ಸಹ ಸಿದ್ದಾರೂಢ ಪೋಸ್ಟ್ ಮಾಡಿದ್ದನು.
ಮಲೆನಾಡಿನಲ್ಲಿ ಕಾಫಿ ಕಳ್ಳತನದ ಹಾದಿ ಹಿಡಿದಿರುವ ಕೆಲ ಯುವಕರು: ಓರ್ವನ ಬಂಧನ
ಈತನ ವಿರುದ್ಧ ಬಾಗಲಕೋಟೆ ಸಿಇಎನ್ ಪೋಲಿಸರಿಗೆ(Police) ದೂರು, ಅತ್ತ ಶಿವಮೊಗ್ಗದಲ್ಲೂ ಎಂಎಲ್ಸಿ ಅರುಣ ಅವರಿಂದ ದೂರು ದಾಖಲಾಗಿತ್ತು. ದೂರು ಆಧರಿಸಿ ಬಾಗಲಕೋಟೆ ಪೊಲೀಸರು ಯುವಕನನ್ನ ಬಂಧಿಸಿದ್ದಾರೆ. ಬಂಧಿತ ಯುವಕನನ್ನ ನ್ಯಾಯಾಂಗ ವಶಕ್ಕೆ ಕೊಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ(Shivamogga) ಪೊಲೀಸರೂ ಕೂಡ ಪ್ರತ್ಯೇಕ ತನಿಖೆಯನ್ನ ನಡೆಸುತ್ತಿದ್ದಾರೆ.