Honeytrap ಜಾಲಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾದನಾ ನಿವೃತ ಯೋಧ!

By Govindaraj S  |  First Published Nov 8, 2023, 11:30 PM IST

ಆತ 17 ವರ್ಷ ದೇಶ ಸೇವೆಸಲ್ಲಿಸಿದ್ದ ವೀರ ಯೋಧ. ಮೂರು ತಿಂಗಳ ಹಿಂದೆಯಷ್ಟೇ ನಿವೃತಿ ಹೊಂದಿ ಮನೆಗೆ ಬಂದಿದ್ದ. ಸುಂದರ ಸಂಸಾರದೊಂದಿಗೆ ಇನ್ನು ಆರಾಮವಾಗಿ ಕಾಲ ಕಳೆಯಬೇಕಾಗಿದ್ದ ಸಮಯವದು. ಆದ್ರೆ ಆತನ ಬಾಳಲ್ಲಿ‌ ಎಂಟ್ರಿಯಾದ ಸುಂದರಿಯಿಂದ ಯೋಧ ಇದೀಗ ನಾಪತ್ತೆಯಾಗಿದ್ದಾನೆ. 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ನ.08): ಆತ 17 ವರ್ಷ ದೇಶ ಸೇವೆಸಲ್ಲಿಸಿದ್ದ ವೀರ ಯೋಧ. ಮೂರು ತಿಂಗಳ ಹಿಂದೆಯಷ್ಟೇ ನಿವೃತಿ ಹೊಂದಿ ಮನೆಗೆ ಬಂದಿದ್ದ. ಸುಂದರ ಸಂಸಾರದೊಂದಿಗೆ ಇನ್ನು ಆರಾಮವಾಗಿ ಕಾಲ ಕಳೆಯಬೇಕಾಗಿದ್ದ ಸಮಯವದು. ಆದ್ರೆ ಆತನ ಬಾಳಲ್ಲಿ‌ ಎಂಟ್ರಿಯಾದ ಸುಂದರಿಯಿಂದ ಯೋಧ ಇದೀಗ ನಾಪತ್ತೆಯಾಗಿದ್ದಾನೆ. ಹಾಗಾದ್ರೆ ಸುಂದರಿಯ ಎಂಟ್ರಿಗೂ ಆತನ ನಾಪತ್ತೆಗೂ ಸಂಬಂಧವೇನು ಎನ್ನುವುದೇ ಇಂಟ್ರೆಸ್ಟಿಂಗ್. ಹೀಗೆ ಆರ್ಮಿ ಉಡುಪಿನಲ್ಲಿ ಇರೋನೆ ನಿವೃತ ಯೋಧ ಸಂದೇಶ್. ಈತ 17 ವರ್ಷ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ಮೂರು ತಿಂಗಳ ಹಿಂದೆಯಷ್ಟೇ ನಿವೃತಿ ಹೊಂದಿ ಊರಿಗೆ ಬಂದಿದ್ದ. 

Tap to resize

Latest Videos

undefined

ಮದುವೆಯಾಗಿ 10 ವರ್ಷವಾಗಿದ್ದು ತನ್ನ ಪತ್ನಿ, ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸಬೇಕಾಗಿತ್ತು. ಇಬ್ಬರು ಮಕ್ಕಳು ಕೂಡ ಇದ್ದು, ಎಲ್ಲವು ಚೆನ್ನಾಗಿ ಇರಬೇಕು ಎನ್ನುವಾಗ ಆ ಸಂಸಾರದಲ್ಲಿ ಬಿರುಗಾಳಿಯಂತೆ ಬಂದವಳೆ ಈ ಚೆಂದೊಳ್ಳಿ ಚೆಲುವೆ. 2020 ರಲ್ಲಿಯೇ ಫೇಸ್ ಬುಕ್ ಮೂಲಕ ಪರಿಚಯವಾಗಿದ್ಲಂತೆ. ಇಬ್ಬರ ಗೆಳೆತನ ಆತ್ಮೀಯತೆಗೆ ತಿರುಗಿ ಅದು ಖಾಸಗೀ ಬದುಕನ್ನೂ ಹಂಚಿಕೊಳ್ಳುವಷ್ಟು ಸಲಿಗೆಗೆ ತಿರುಗಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಇವಳೊಂದಿಗೆ ಸಾಕಷ್ಟು ಕಡೆಗಳಲ್ಲಿ ಸುತ್ತಾಟ ನಡೆಸಿದ್ದಾನೆ ಎನ್ನಾಲಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬತ್ತೆ ಆಕೆಯೊಂದಿಗಿನ ಸಂದೇಶ್ ತೆಗೆದುಕೊಂಡಿರುವ ಫೋಟೋಗಳೇ ಸಾಕ್ಷಿ. 

ಪ್ರಧಾನಿ ಮೋದಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಿ: ಸಚಿವ ಎಂ.ಸಿ.ಸುಧಾಕರ್

ಬರೀ ಸುತ್ತಾಟ, ಅಥವಾ ಲವ್ವಿಡವ್ವಿಗೆ ಸೀಮಿತವಾಗಿದ್ದರೆ ಬಹುಷ್ಯ ಏನೂ ಆಗುತ್ತಿರಲಿಲ್ಲವೇನೋ. ಆದರೆ ಆಕೆ ಸಂದೇಶನಿಂದ ಲಕ್ಷ ಲಕ್ಷ ಹಣ ಪೀಕಿದ್ದಾಳೆ. ಒಂದೊಂದು ಬಾರಿಯೂ 20 ಸಾವಿರ, 50 ಸಾವಿರ ಒಂದು ಲಕ್ಷ ಅಂತ ಲಕ್ಷಾಂತರ ರೂಪಾಯಿಯನ್ನು ಯುಪಿಐ ಟ್ರಾನ್ಸ್ಕ್ಷನ್ ಮಾಡಿಸಿಕೊಂಡಿದ್ದಾಳೆ. ಅವುಗಳ ದಾಖಲೆಯೇ ರಾಶಿ ರಾಶಿ ಇದೆ ನೋಡಿ. ಮಡಿಕೇರಿಯ ನಿವಾಸಿಯೇ ಆಗಿರುವ ಈಕೆಗೆ ಸ್ವಂತ ಮನೆಯೆಂಬುದು ಇರಲಿಲ್ಲ. ಬದಲಾಗಿ ಸಂದೇಶ್ ನಗರದ ಗಣಪತಿ ಬೀದಿಯಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಟ್ಟಿದ್ದ ಎನ್ನಲಾಗಿದೆ. ಅಷ್ಟಕ್ಕೆ ಸುಮ್ಮನಾಗದ ಸುರಸುಂದರಾಂಗಿ ಈತ ನಿವೃತಿಯಾಗುತ್ತಿದ್ದಂತೆ ನನಗೆ ನೀನು 50 ಲಕ್ಷ ಕೊಡು. 

ಇಲ್ಲವೇ ಸ್ವಂತ ಮನೆಕಟ್ಟಿಸಿಕೊಡು. ಇಲ್ಲದಿದ್ದರೆ ನನ್ನೊಂದಿಗೆ ಇರುವ ಖಾಸಗಿ ವಿಡಿಯೋಗಳನ್ನೆಲ್ಲಾ ಮಾಧ್ಯಮಗಳ ಮುಂದೆ ಕೊಡುತ್ತೇನೆ ಎಂದು ಬೆದರಿಕೆ ಹಾಕಿದ್ದಳಂತೆ. ಅಲ್ಲದೆ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಮಡಿಕೇರಿ ಮಹಿಳಾ ಠಾಣೆ ಮೆಟ್ಟಿಲೇರಿದ್ದಳಂತೆ. ಹೀಗೆ ಈ ಮಹಿಳೆಯ ಟಾರ್ಚರ್ ನಿಂದ ನನ್ನ ಪತಿ ಹೀಗೆ ಮಾಡಿಕೊಂಡಿದ್ದಾರೆಂದು ಸಂದೇಶ್ ಪತ್ನಿ ಆರೋಪಿಸುತ್ತಿದ್ದಾರೆ. ಯೋಧ ಸಂದೇಶ್ ಕಣ್ಮರೆಯಾಗುವುದಕ್ಕೂ ಮುನ್ನ ಡೆತ್ ನೋಟ್ ಬರೆದು, ಮನೆ ಹಿಂಬದಿಯಲ್ಲಿ ನಿಲ್ಲಿಸಿರುವ ಕಾರಿನ ಒಳಗಿಟ್ಟು, ಇವೆಲ್ಲವನ್ನು ಬೆಂಗಳೂರಿನಲ್ಲಿರುವ ತನ್ನ ತಂಗಿಗೆ ಮೆಸೇಜ್ ಮಾಡಿದ್ದಾನೆ. ಮಂಗಳವಾರ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಿ ಬರುತ್ತೇನೆ ಎಂದು ಹೋದವನು ತಿರುಗಿ ಬಂದೇ ಇಲ್ಲ. 

ಆದರೆ ಬೆಳಿಗ್ಗೆ 11 ಗಂಟೆ ವೇಳೆ ತನ್ನ ಅಣ್ಣ ಮೊಬೈಲ್ಗೆ ಕಳುಹಿಸಿದ ಮೆಸೇಜನ್ನು ನೋಡಿದ ತಂಗಿ ಆಶಾ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ಆಗಲೇ ಇದೆಲ್ಲಾ ನಡೆದಿರುವುದು ಗೊತ್ತಾಗಿದೆ. ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಜೀವಿತಾ ಎಂಬ ಮಹಿಳೆ ಕಾರಣ. ಪ್ರೀತಿ ಎಂದು ನಾಟಕವಾಡಿ ಹನಿಟ್ರ್ಯಾಪ್ ಮಾಡಿ ನನ್ನ ಬ್ಲಾಕ್ ಮೇಲ್ ಮಾಡಿದ್ದಾಳೆ. ಜೊತೆಗೆ ಆಕೆಯ ತಾಯಿ ಹಾಗೂ ತಂಗಿ ಕೂಡ ಬ್ಲಾಕ್ ಮೇಲ್ ಮಾಡಿದ್ದಾರೆ. ಹಾಗೆಯೇ ಟ್ರಾವಲ್ಸ್ ಮಾಲೀಕ ಸತ್ಯ ಹಾಗೂ ಪೊಲೀಸ್ ಪೇದೆ ಸತೀಶ್ ಎಂಬುವರು ಕೂಡ ನನಗೆ ಟಾರ್ಚರ್ ಮಾಡಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ತನ್ನ ತಂಗಿಗೆ ಕಳುಹಿಸಿರುವ ಮೆಸೇಜ್ನಲ್ಲಿ ನನ್ನ ಮೋಬೈಲ್ ಹಾಗೂ ಚಪ್ಪಲಿಗಳು ಪಂಪಿನ ಕೆರೆಯ ಬಳಿ ಇರೋದಾಗಿ ತಿಳಿಸಿದ್ದಾನೆ. ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ಹುಡುಕಾಟ ನಡೆಸಿದ್ದು ಆತ ಹೇಳಿದ ಜಾಗದಲ್ಲೆ ಸಂದೇಶ್ ನ ವಸ್ತುಗಳು ಪತ್ತೆಯಾಗಿವೆ. 

ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು

ಹಾಗೂ ಆತ ನೀರಿಗೆ ಬಿದ್ದಿರುವ ಕುರುಹುಗಳು ಪತ್ತೆಯಾಗಿದ್ದು, ಮುಳುಗು ತಜ್ಞ ಮುತ್ತಪ್ಪ, ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ಕೆರೆ ಬಹಳ ಆಳವಾಗಿದ್ದು ಹುಡುಕಾಟ ಕಷ್ಟ ಸಾಧ್ಯವಾದ ಹಿನ್ನಲೆಯಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನ ಕರೆಸಲಾಗುತ್ತಿದೆ. ಯೋಧ ಕಣ್ಮರೆಯಾಗಿ 24 ಗಂಟೆ ಕಳೆದರೂ ಯೋಧನ ಸುಳಿವು ಮಾತ್ರ ಸಿಕ್ಕಿಲ್ಲ. ಒಟ್ನಲ್ಲಿ ಪರಸ್ತ್ರಿ ಸಂಗ ಮಾಡಿ ಹನಿಟ್ರ್ಯಾಪ್ಗೆ ಒಳಗಾಗಿ‌ ಆಕೆಯ ಟಾರ್ಚರ್‌ ನಿಂದ ನಿವೃತ್ತ ಯೋಧ ಪ್ರಾಣವನ್ನೆ ಕಳೆದುಕೊಂಡನಾ ಎನ್ನುವ ಅನುಮಾನ ಶುರುವಾಗಿದೆ. ಏನೇ ಆದರೂ ಪೊಲೀಸ್ ತನಿಖೆಯ ಬಳಿಕ ಇಡೀ ಪ್ರಕರಣದ ಸತ್ಯ ಏನು ಎನ್ನುವುದು ಗೊತ್ತಾಗಬೇಕಾಗಿದೆ.

click me!