ಶತ್ರುಗಳ ಗುಂಡಿಗೂ ಬಗ್ಗದ ಸೈನಿಕನ ಗುಂಡಿಗೆಯನ್ನೇ ಪ್ರೀತಿ ನಾಟಕವಾಡಿ ನಿಲ್ಲಿಸಿದ ಕಿ'ಲೇಡಿ'! ಹನಿಟ್ರ್ಯಾಪ್‌ಗೆ ಯೋಧ ಬಲಿ

By Sathish Kumar KH  |  First Published Nov 8, 2023, 10:40 AM IST

ಶತ್ರವಿನ ಬಂದೂಕಿಗೂ ಬಗ್ಗದ ಸೈನಿಕನ ಗುಂಡಿಗೆಯನ್ನು ಪ್ರೀತಿ ನಾಟಕವಾಡಿ ನಿಲ್ಲಿಸಿದ ಕಿಲಾಡಿ ಲೇಡಿ. 20 ಲಕ್ಷ ರೂ. ಕೊಟ್ಟರೂ ಕಿರುಕುಳ ತಪ್ಪದ ಹಿನ್ನೆಲೆ ಆತ್ಮಹತ್ಯೆಗೆ ಶರಣಾದ ಯೋಧ.


ಕೊಡಗು (ನ.08): ದೇಶದ ಗಡಿ ಕಾಯುತ್ತಿದ್ದ ವೀರ ಯೋಧ ಉಗ್ರರು ಹಾಗೂ ದೇಶಕ್ಕೆ ಒಳನುಸುಳುವ ಕ್ರಿಮಿಗಳ ಬಂದೂಕಿನ ಗುಂಡಿಗೂ ಬಗ್ಗದೇ ಸೇವೆ ಮಾಡಿದ್ದಾನೆ. ಇಂತಹ ವೀರ ಯೋಧನಿಗೆ ನೀನೇ ನನ್ನ ಹೀರೋ, ನೀನೇ ನನ್ನ ಪ್ರೇರಣೆ ಎಂದು ಹೇಳಿಕೊಂಡು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡ ಸುಪನಾತಿ ಸುಬ್ಬಿ ಜೀವಿತಾ ಎನ್ನುವ ಕಿಲಾಡಿ ಲೇಡಿ ಪ್ರೀತಿಯ ನಾಟಕ ಹಾಗೂ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಸಾವಿಗೆ ಶರಣಾಗಿರುವ ದುರ್ಘಟನೆ ಕೊಡಗುನಲ್ಲಿ ನಡೆದಿದೆ.

ಮೃತ ಯೋಧನನ್ನು ಸಂದೇಶ್ ಎಂದು ಹೇಳಲಾಗಿದೆ. ಈತನಿಗೆ ವಂಚನೆ ಮಾಡಿದ ಹಾಗೂ ಸಾವಿಗೆ ಕಾರಣವಾದ ಮಹಿಳೆಯನ್ನು ಜೀವಿತಾ ಎಂದು ಗುರುತಿಸಲಾಗಿದೆ. ಮದುವೆಯಾಗಿದ್ದ ಯೋಧನನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡ ಯುವತಿ ಜೀವಿತಾ ಆತನೊಂದಿಗೆ ಸುತ್ತಾಟ ಮಾಡಿದ್ದಾಳೆ. ನಂತರ ಸಲುಗೆಯಿಂದ ಸರಸವಾಡುವ ಫೋಟೋ ಹಾಗೂ ದೃಶ್ಯವನ್ನು ಇಟ್ಟುಕೊಂಡು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ನಿರಂತರವಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಾ ಲಕ್ಷಾಂತರ ರೂ. ಹಣವನ್ನು ಕಿತ್ತುಕೊಂಡಿದ್ದಾಳೆ. ಆದರೆ, ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಕೊಯ್ಯುವ ಕೆಲಸ ಮಾಡಿದಾಗ ಕೋಳಿಯೇ ಸತ್ತು ಹೋದಂತೆ, ಹಣವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಯೋಧನಿಗೆ ಏಕಾಏಕಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಾಗ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Tap to resize

Latest Videos

undefined

ಬೆಂಗಳೂರಲ್ಲಿ ಬಾಂಗ್ಲಾದ ರೋಹಿಂಗ್ಯಾ ಮುಸ್ಲಿಮರಿಂದ ಉಗ್ರ ಚಟುವಟಿಕೆ: 10 ಕಡೆ ಎನ್‌ಐಎ ದಾಳಿ

ಫೇಸ್‌ಬುಕ್‌ನಲ್ಲಿ ಪ್ರೀತಿ ನಾಟಕ ಮಾಡಿದ ಜೀವಿತಾ: ನಮ್ಮ ದೇಶದ ಗಡಿ ಕಾಯುವ ಸೈನಿಕರೆಂದರೆ ಪ್ರತಿಯೊಬ್ಬರೂ ಹೆಮ್ಮೆಪಡುತ್ತೇವೆ. ಕಾರಣ ತಮ್ಮ ಪ್ರಾಣವನ್ನೇ ಮುಡಿಪಿಟ್ಟು ನಮ್ಮ ದೇಶದ ಗಡಿಯನ್ನು ಕಾಯುತ್ತಾ ನೆಮ್ಮದಿಯ ಜೀವನ ನಡೆಸಲು ಕಾರಣರಾಗಿರುತ್ತಾರೆ. ಹೀಗಾಗಿ, ಶತ್ರವಿನ ಬಂದೂಕಿನ ಗುಂಡಿಗೆಗೆ ಎದೆಯೊಡ್ಡಿ ಹೋರಾಡುವ ಸೈನಿಕರೆಂದರೆ ಎಲ್ಲರೂ ಹೆಮ್ಮೆ ಪಡುತ್ತಾರೆ. ಆದರೆ, ಇಲ್ಲೊಬ್ಬ ಯುವತಿ ಸೈನಿಕರೆಂದರೆ ಹೆಮ್ಮೆಯೆಂದು ಮಾತನಾಡುತ್ತಾ ಪ್ರೀತಿಯ ನಾಟಕವಾಡಿದ್ದಾಳೆ. ಇನ್ನು ಪ್ರೀತಿಯನ್ನು ನಂಬಿಕೊಂಡ ಯೋಧ ಸಲುಗೆಯಿಂದ ನಡೆದುಕೊಂಡಿದ್ದಾನೆ. ಆದರೆ, ಯೋಧ ತನ್ನೊಂದಿಗೆ ಸಲುಗೆಯಿಂದಿದ್ದ ದೃಶ್ಯಗಳನ್ನೇ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಲು ಮುಂದಾಗಿದ್ದಾಳೆ.

20 ಲಕ್ಷ ಹಣ, ಕಾರು, ಆಸ್ತಿ ದಾಖಲೆಗಳನ್ನು ಕಿತ್ತುಕೊಂಡ ಕಿಲಾಡಿ: ಯೋಧನಿಗೆ ಮದುವೆ ಆಗಿದ್ದರೂ ಯುವತಿಯ ಅಂದ- ಚಂದ ಹಾಗೂ ಆಕೆಯ ಮಾತಿಗೆ ಮರುಳಾಗಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ. ಆದರೆ, ಈತನಿಗೆ ಮದುವೆಯಾಗಿ ಹೆಂಡತಿಯಿದ್ದರೂ ತನ್ನೊಂದಿಗೆ ಸಲುಗೆಯಿಂದ ನಡೆದುಕೊಂಡ ಎಲ್ಲ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಯುವತಿ ಬ್ಲ್ಯಾಕ್‌ಮೇಲ್‌ ಮಾಡಲು ಮುಂದಾಗಿದ್ದಾಳೆ. ಇದಕ್ಕೆ ತನ್ನ ಸ್ನೇಹಿತರಿಂದಲೂ ಸಾಥ್‌ ಪಡೆದಿದ್ದಾಳೆ. ಹಂತ ಹಂತವಾಗಿ ಯುವತಿ ಬರೋಬ್ಬರಿ 20 ಲಕ್ಷ ರೂ. ಹಣವನ್ನೂ ಕಿತ್ತುಕೊಂಡಿದ್ದಾಳೆ. ಮುಂದುವರೆದು ಯೋಧನ ಬಳಿಯಿದ್ದ ಕಾರು ಹಾಗೂ ಆಸ್ತಿಯ ಎಲ್ಲ ದಾಖಲೆಗಳನ್ನು ಕಿತ್ತುಕೊಂಡಿದ್ದಾಳೆ.

ರಶ್ಮಿಕಾ ಬಳಿಕ ಕತ್ರಿನಾ ಡೀಪ್‌ ಫೇಕ್ ಫೋಟೊ ವೈರಲ್: ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ

ಏಕಾಏಕಿ 50 ಲಕ್ಷ ರೂ. ಕೇಳಿದ್ದಕ್ಕೆ ಸಾವಿಗೆ ಶರಣಾದ ಯೋಧ? 
ಇಷ್ಟಕ್ಕೇ ನಿಲ್ಲದ ಈ ಸುಪನಾತಿ ಯುವತಿಯ ಬ್ಲ್ಯಾಕ್‌ಮೇಲ್‌ ಯೋಧನ ನಿವೃತ್ತಿಯ ನಂತರವೂ ಬರುವ ಸೆಟಲ್‌ಮೆಂಟ್‌ ಹಣ ಸೇರಿದಂತೆ 50 ಲಕ್ಷ ರೂ. ಹಣ ನೀಡುವಂತೆ ಬೆದರಿಕೆ ಹಾಕಿದ್ದಾಳೆ. ಆದರೆ, ಯೋಧ ತನಗೆ ಮದುವೆಯಾಗಿದ್ದರೂ ಯುವತಿಯ ಪ್ರೀತಿಯ ಬಲೆಗೆ ಸಿಲುಕಿ ಒದ್ದಾಡುತ್ತಿದ್ದನು. ಇದೆಲ್ಲವನ್ನೂ ತನ್ನ ಪತ್ನಿ ಯಶೋಧರೊಂದಿಗೆ ಹೇಳಿಕೊಂಡಿದ್ದನು. ಆದರೆ, ಲೇಡಿಯ ಕಾಟವನ್ನು ತಾಳಲಾರದೆ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಯೋಧನ ಪತ್ನಿ ಯಶೋಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ತನ್ನ ಗಂಡನ ವಿರುದ್ಧ ಜೀವಿತಾ ಹನಿಟ್ರ್ಯಾಪ್‌ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. 

click me!