* ನ್ಯಾಯಾಲಯ ಆವರಣದಲ್ಲೇ ಪತ್ನಿಯ ಮೇಲೆ ಪತಿ ಮಾರಣಾಂತಿಕ ಹಲ್ಲೆ
* ಮಚ್ಚಿನಿಂದ ಹಲ್ಲೆ ಮಾಡಿ ಪತ್ನಿಯ ಕಾಲು ಕಟ್ ಮಾಡಿದ ಪತಿ
* ಬೆಳಗಾವಿ ಜಿಲ್ಲೆ ಬೈಲಹೊಂಗಲ ನ್ಯಾಯಾಲಯ ಆವರಣದಲ್ಲಿ ಘಟನೆ
* ನನಗುಂಡಿಕೊಪ್ಪದ ನಿವೃತ್ತ ಸೈನಿಕ ಶಿವಪ್ಪ ಅಡಕಿಯಿಂದ ಕೃತ್ಯ
ಬೆಳಗಾವಿ(ಸೆ. 29) ನ್ಯಾಯಾಲಯದ(Court) ಆವರಣದಲ್ಲೇ ಪತ್ನಿಯ(Wife) ಮೇಲೆ ಪತಿ(Husband) ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಮಚ್ಚಿನಿಂದ ಹಲ್ಲೆ ಮಾಡಿದ ಪರಿಣಾಮ ಪತ್ನಿಯ ಕಾಲು ತುಂಡರಿಸಿದೆ.
ಬೆಳಗಾವಿ (Belagavi) ಜಿಲ್ಲೆ ಬೈಲಹೊಂಗಲ ನ್ಯಾಯಾಲಯ ಆವರಣದಲ್ಲಿ ಘಟನೆ ನಡೆದಿದೆ. ನನಗುಂಡಿಕೊಪ್ಪದ ನಿವೃತ್ತ ಸೈನಿಕ (Retired Soldier) ಶಿವಪ್ಪ ಅಡಕಿ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಹಣಕಾಸಿನ ವಿಚಾರಕ್ಕೆ ಪತಿ ಪತ್ನಿಯ ಮಧ್ಯೆ ಕಲಹ ಇತ್ತು. 11 ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ(Hubballi) ತಾಲೂಕಿನ ವರೂರ್ ಗ್ರಾಮದ ಜಯಮಾಲಾ ಎಂಬುವರನ್ನು ಶಿವಪ್ಪ ಮದುವೆಯಾಗಿದ್ದ.
ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂ
ಬುಧವಾರ ಬೈಲಹೊಂಗಲ ದಿವಾಣಿ ನ್ಯಾಯಾಲಯದಲ್ಲಿ ವಿಚಾರಣೆ ಇತ್ತು. ವಿಚಾರಣೆಗೆ ಬಂದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪತ್ನಿ ಜಯಮಾಲಾ ಸ್ಥಿತಿ ಗಂಭೀರವಾದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಕೊಲೆಗೆ ಯತ್ನಿಸಿದ ಆರೋಪಿ ಶಿವಪ್ಪನನ್ನು ಬೈಲಹೊಂಗಲ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ಪ್ರವೇಶ ದ್ವಾರದಲ್ಲಿ ತಪಾಸಣೆ ಮಾಡದ ಕಾರಣ ಚೀಲದಲ್ಲಿ ಮಚ್ಚು ತಂದಿದ್ದ. ವಿಚಾರಣೆ ಮುಗಿಸಿಕೊಂಡು ವಾಪಾಸ್ ಬರುವಾಗ ಹಿಂಬದಿಯಿಂದ ಹೆಂಡತಿ ಮೇಲೆ ಅಟ್ಯಾಕ್ ಮಾಡಿದ್ದ. ಮೂರು ಬಾರಿ ಕೊಚ್ಚಿ ಕೊಲ್ಲಲು ಯತ್ನಿಸಿದ್ದು ಪೊಲೀಸರು ಬಂಧಿಸಿದ್ದಾರೆ.