
ಬೆಂಗಳೂರು (ಫೆ.7): ಪಿಜಿ ಸೇರಬೇಕು ಎನ್ನುವ ಹೆಣ್ಣು ಮಕ್ಕಳೇ ಈ ಸ್ಟೋರಿ ಬಗ್ಗೆ ತಪ್ಪದೆ ತಿಳಿದುಕೊಳ್ಳಬೇಕು. ಕಡಿಮೆ ಹಣ ರೂಮ್ ಸಿಗುತ್ತೆ ಅಂತ ಹೋದ್ರೆ ನೀವು ಉತ್ತಮ ಆಹಾರ ಇಲ್ಲದೆ ಕಷ್ಟಪಡಬೇಕಾಗುತ್ತದೆ ಹುಷಾರ್. ಡಬಲ್ ಶೇರಿಂಗ್ , 4 ಶೇರಿಂಗ್ , 8 ಶೇರಿಂಗ್ ನಲ್ಲಿ ಹೀಗೆ ಕಡಿಮೆ ಖರ್ಚಿಗೆ ರೂಮ್ ಪಡೆಯುತ್ತಿರಾ? ಹಾದಾದ್ರೆ ನಿಮ್ಮ ಗಮನದಲ್ಲಿರಲಿ. ಸಂಬಂಧಿಸಿದವರು ಗೂಂಡಾಗಿರಿ ಮಾಡುತ್ತಾರೆ. ಪಿಜಿಗೆ ಸೇರಿದ ಬಳಿಕ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ರೆ ಪಿಜಿ ಮಾಲೀಕರು ಬೆದರಿಸುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಪ್ರಶ್ನೆ ಮಾಡಿದಕ್ಕೆ ಪಿಜಿ ಮಾಲೀಕರು ದೊಣ್ಣೆ ಹಿಡ್ಕೊಂಡು ಗೂಂಡಾಗಳಂತೆ ವರ್ತನೆ ಮಾಡಿರುವ ಬಗ್ಗೆ ವಿಡಿಯೋ ವೈರಲ್ ಆಗಿದೆ. ಮಹಾಲಕ್ಷ್ಮೀ ಲೇ ಔಟ್ ನಲ್ಲಿರುವ ಪ್ರೇಮಾ ಅನ್ನೋ ಪಿಜಿಯಲ್ಲಿ ಈ ಘಟನೆ ನಡೆದಿದೆ. ಪ್ರೇಮಾ ಪಿಜಿಯಲ್ಲಿ ಅವ್ಯವಸ್ಥೆಯಿಂದ ಪಿಜಿಗೆ ಬಂದ ಯುವತಿಯರು ಬೇಸತ್ತು ಹೋಗಿದ್ದಾರೆ.
ಊಟದಲ್ಲಿ ಹುಳುಗಳು, ಪಿಜಿಯಲ್ಲಿ ಎಲ್ಲಂದರಲ್ಲಿ ಜಿರಳೆಗಳು ಕಾಣುತ್ತೆ, ಕುಡಿಯಲು ನೀರಿಲ್ಲ ಅಂತ ಆರೋಪ ಮಾಡಿದ್ದು, ಅದಕ್ಕೆ ತಕ್ಕನಂತೆ ಪಿಜಿ ಯುವತಿಯರು ಅವ್ಯವಸ್ಥೆಯ ವಿಡಿಯೋ ವೈರಲ್ ಮಾಡಿದ್ದಾರೆ.
ಮಹಾಲಕ್ಷ್ಮೀ ಲೇ ಔಟ್ ಬೋವಿಪಾಳ್ಯದಲ್ಲಿರೋ ಪ್ರೇಮಾ ಪಿಜಿಯಲ್ಲಿನ ಅವ್ಯವಸ್ಥೆ ನೋಡಿ. ಪಿಜಿಯನ್ನು ನೋಡಿಕೊಳ್ಳುವ ಕಲ್ಪನಾ ಎಂಬ ಆಂಟಿ ದೊಣ್ಣೆ ಹಿಡಿದು ಬೆದರಿಕೆ ಹಾಕುತ್ತಿದ್ದಾರೆ. ಪಿಜಿಯಲ್ಲಿರೋ ಯುವತಿಯರು ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ. ಈ ಪಿಜಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ