ಕಲಬುರಗಿ: ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಇಬ್ಬರು ಕಾಮುಕರಿಗೆ 20 ವರ್ಷ ಜೈಲು ಶಿಕ್ಷೆ

By Kannadaprabha News  |  First Published Feb 6, 2024, 11:00 PM IST

ಕಲಬುರಗಿ ಜಿಲ್ಲೆಯ ಗ್ರಾಮವೊಂದರ ಆರೋಪಿ ಸೈಬಣ್ಣ ಶರಣಪ್ಪ ಸೀಬಾ ಮತ್ತು ಇನ್ನೊಂದು ಗ್ರಾಮದ ಮಜರುದ್ದಿನ್ ಚಾಂದಪಾಶಾ ಜಮಾದಾರ ಶಿಕ್ಷೆಗೊಳಗಾದವರು. 


ಕಲಬುರಗಿ(ಫೆ.06): ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ್ದರಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಫೋಕ್ಸೋ) ನ್ಯಾಯಾಲಯ ಇಬ್ಬರಿಗೆ ತಲಾ 20 ವರ್ಷ ಜೈಲು ಮತ್ತು 20 ಸಾವಿರ ರು. ದಂಡ ವಿಧಿಸಿದೆ. 

ಜಿಲ್ಲೆಯ ಗ್ರಾಮವೊಂದರ ಆರೋಪಿ ಸೈಬಣ್ಣ ಶರಣಪ್ಪ ಸೀಬಾ ಮತ್ತು ಇನ್ನೊಂದು ಗ್ರಾಮದ ಮಜರುದ್ದಿನ್ ಚಾಂದಪಾಶಾ ಜಮಾದಾರ ಶಿಕ್ಷೆಗೊಳಗಾದವರು. 2022 ರ ಸೆ.24 ರಂದು ಅಪ್ರಾಪ್ತ ಬಾಲಕಿಯು ಬಸ್ಸಿನಲ್ಲಿ ಕಾಲೇಜಿಗೆ ಬರುತ್ತಿದ್ದಾಗ ಸೈಬಣ್ಣ ಆಕೆಯನ್ನು ಮದುವೆಯಾಗುವದಾಗಿ ಪುಸಲಾಯಿಸಿ ಅಪಹರಿಸಿ ದೂರದ ಗ್ರಾಮದ ಹೊಲದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಇನ್ನೊಂದು ಪ್ರಕರಣದಲ್ಲಿ 2021ರ ಡಿಸೆಂಬರ್ ತಿಂಗಳಲ್ಲಿ ಅಪ್ರಾಪ್ತೆಯನ್ನು ಪುಸಲಾಯಿಸಿ ಮಜರುದ್ದಿನ್‍ನು ಅತ್ಯಾಚಾರ ಎಸಗಿ, ವಿಷಯ ಜನರಿಗೆ ಹೇಳುವದಾಗಿ ಬೆದರಿಸಿ ಪದೇ ಪದೇ ಅತ್ಯಾಚಾರ ಎಸಗಿದ್ದು ಸಾಬೀತಾಗಿದೆ. 

Tap to resize

Latest Videos

undefined

ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ಸರ್ಕಾರಿ ಶಾಲೆ ವಿದ್ಯಾರ್ಥಿನಿ! ವಿಡಿಯೋ ವೈರಲ್!

ಈ ಎರಡು ಪ್ರಕರಣಗಳ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಫೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಶಿಕ್ಷೆ ನೀಡಿ ಆದೇಶಿಸಿದ್ದಾರೆ. ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ತುಪ್ಪದ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.

click me!