ರೇಣುಕಾಸ್ವಾಮಿ ಕೊಲೆ ಪ್ರಕರಣ: ಜಾಮೀನು ಅರ್ಜಿ ವಾಪಸ್ ಪಡೆದ ಪವಿತ್ರಾ ಗೌಡ!

By Gowthami K  |  First Published Sep 13, 2024, 1:28 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಪವಿತ್ರಾ ಗೌಡ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಘಟನೆ ನಡೆದು ಮೂರು ತಿಂಗಳುಗಳು ಪೂರ್ಣಗೊಂಡಿವೆ.


ಬೆಂಗಳೂರು (ಸೆ.13): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ಹಿಂಪಡೆಯಲಾಗಿದೆ. ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ವಜಾಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಸೆ.13ರಂದು ಅರ್ಜಿ ವಿಚಾರಣೆಗೆ ಬಂದಿತ್ತು.

ಪವಿತ್ರಾಗೌಡ ಪರವಾಗಿ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದಿಸಿದರು. ನೀವು ಅರ್ಜಿ ಸಲ್ಲಿಸಿದ ಮೇಲೆ ಚಾರ್ಜ್ ಸಲ್ಲಿಕೆ ಮಾಡಲಾಗಿದೆ ಎಂದು ಎಸ್ಪಿಪಿ ಹೇಳ್ತಾ ಇದ್ದಾರೆ. ಏನ್ ಮಾಡ್ತೀರಿ ಅರ್ಜಿ ಮುಂದುವರೆಸುತ್ತೀರ.? ವಾಪಸ್  ಪಡೀತಿರಾ?  ಈಗಾಗಲೇ ಒಬ್ಬ ಆರೋಪಿ ಅರ್ಜಿ ವಾಪಸ್ ಪಡೆದಿದ್ದಾರೆ. ಏನ್ ಮಾಡ್ತೀರಾ? ಎಂದು ಪವಿತ್ರಾಗೌಡ ವಕೀಲರಿಗೆ ಜಡ್ಜ್ ವಿಶ್ವಜಿತ್ ಶೆಟ್ಟಿ ಪ್ರಶ್ನೆ ಮಾಡಿದರು. ಬಳಿ ವಕೀಲರು ಜಾಮೀನು ಅರ್ಜಿಯನ್ನು ಹಿಂಪಡೆದರು.

Tap to resize

Latest Videos

ಮದುವೆಯಾಗದಿದ್ರೂ 'ಮುದ್ದು ಹೆಂಡ್ತಿ' ಆಗಿದ್ದ ಪ್ರವಿತ್ರಾ ಗೌಡಗೆ ಪ್ರೀತಿಯ 'ಸುಬ್ಬ'ನಾಗಿದ್ದ ದರ್ಶನ್! 

ಇನ್ನು ಈ  ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ಅಂತ್ಯ ಹಿನ್ನೆಲೆ ವಿಡೀಯೋ ಕಾನ್ಪರೆನ್ಸ್ ಮೂಲಕ  ಎಲ್ಲಾ 17 ಆರೋಪಿಗಳನ್ನು 24 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹಾಜರಾತಿ ಖಚಿತಪಡಿಸಿಕೊಂಡ ನ್ಯಾಯಾಧೀಶರು ಬಳಿಕ ಸೆ.17 ನೇ ತಾರೀಖಿನ ವರೆಗೂ ಆರೋಪಿಗಳು ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ಹೊರಡಿಸಿದರು. 

ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಈಗಾಗಲೇ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, 24ನೇ ಎಸಿಎಂಎಂ ನ್ಯಾಯಾಲಯಕ್ಕೆ 3,991 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ದೋಷಾರೋಪ ಪಟ್ಟಿ ಈಗಾಗಲೇ ನಿಯಮಾನುಸಾರ ಎಲ್ಲಾ ಆರೋಪಿಗಳ ಕೈಸೇರಿದೆ. 

ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಘಟನೆ ನಡೆದು ಮೂರು ತಿಂಗಳು ಪೂರ್ಣಗೊಂಡಿದೆ. ನಟ ದರ್ಶನ್‌ ತೂಗುದೀಪ ಪ್ರೇಯಸಿ ಪವಿತ್ರಾ ಗೌಡ ಅಶ್ಲೀಲ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಜೂ.8ರಂದು ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ಗೆ ಕರೆತಂದು ಚಿತ್ರ ಹಿಂಸೆ ನೀಡಿ ಕೊಲೆ ಮಾಡಿ ಬಳಿಕ ಮೃತದೇಹವನ್ನು ಸುಮ್ಮನಹಳ್ಳಿ ಜಂಕ್ಷನ್‌ ಸಮೀಪದ ರಾಜಕಾಲುವೆ ಬಳಿ ಎಸೆಯಲಾಗಿತ್ತು.

ಜೈಲಿನ ಟಿವಿ ತುಂಬಾ ತನ್ನ ವಿರುದ್ಧ ಸುದ್ದಿ, ಮಧ್ಯದ ಬೆರಳು ತೋರಿಸಿ ಆಕ್ರೋಶ ಹೊರಹಾಕಿದ್ರಾ ದರ್ಶನ್?

ಜೂ.9ರಂದು ಅಪರಿಚಿತ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ವೊಂದರ ಸೆಕ್ಯೂರಿ ಗಾರ್ಡ್‌ ನೀಡಿದ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು. ಬಳಿಕ ಮೂವರು ಆರೋಪಿಗಳು ಹಣಕಾಸು ವಿಚಾರಕ್ಕೆ ರೇಣುಕಾಸ್ವಾಮಿಯನ್ನು ತಾವೇ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಶರಣಾಗಿದ್ದರು. ಈ ಬಗ್ಗೆ ಅನುಮಾನಗೊಂಡು ವಿಚಾರಣೆ ಮಾಡಿದಾಗ ರೇಣುಕಾಸ್ವಾಮಿ ಕೊಲೆ ರಹಸ್ಯ ಬಯಲಾಗಿತ್ತು. ಬಳಿಕ ನಟ ದರ್ಶನ್‌, ಪ್ರಿಯತಮೆ ಪವಿತ್ರಾ ಗೌಡ ಸೇರಿ 17 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

click me!