ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಭರ್ಜರಿ ಟ್ವಿಸ್ಟ್; ನಟ ದರ್ಶನ್ ಬಚಾವಾಗಲು 30 ಲಕ್ಷ ರೂ. ಡೀಲ್

By Sathish Kumar KH  |  First Published Jun 12, 2024, 7:24 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಫೋಟಕ ತಿರುವು ಸಿಕ್ಕಿದೆ. ನಟ ದರ್ಶನ್ ರೇಣುಕಾಸ್ವಾಮಿಯನ್ನು ಕೊಲೆ ಕೇಸಿನಿಂದ ಬಚಾವಾಗಲು ಬರೋಬ್ಬರಿ 30 ಲಕ್ಷ ರೂ. ಕೊಟ್ಟು ಡೀಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ.


ಬೆಂಗಳೂರು (ಜೂ.12): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಫೋಟಕ ತಿರುವು ಸಿಕ್ಕಿದೆ. ನಟ ದರ್ಶನ್ ರೇಣುಕಾಸ್ವಾಮಿಯನ್ನು ಕೊಲೆ ಕೇಸಿನಿಂದ ಬಚಾವಾಗಲು ಬರೋಬ್ಬರಿ 30 ಲಕ್ಷ ರೂ. ಕೊಟ್ಟು ಡೀಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹೌದು, ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಿನ ವಿಚಾರಣೆ ವೇಳೆ ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಕೊಲೆಯಾದ ನಂತರ 30 ಲಕ್ಷ ರೂ. ಹಣವನ್ನು ಪ್ರದೋಶ್ ಎನ್ನುವವನಿಗೆ ಕೊಟ್ಟು, ಕೆಲವು ಹುಡುಗರನ್ನು ಪೊಲೀಸರುಗೆ ಸರೆಂಡರ್ ಆಗಲು ಹೇಳಿದ್ದರು. ಈ ಮೂಲಕ ಕೊಲೆ ಕೇಸಿನಿಂದ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿ ದೊಡ್ಡವರು ಬಚಾವಾಗಲು ಯೋಜನೆ ರೂಪಿಸಿದ್ದರು. ಅದರಂತೆ ಪ್ರದೋಶ್ ಎನ್ನುವ ವ್ಯಕ್ತಿ ಹಣವನ್ನು ಪಡೆದುಕೊಂಡು ಹೋಗಿದ್ದನು.

Tap to resize

Latest Videos

undefined

ಪಟ್ಟಣಗೆರೆ ಶೆಡ್‌ನಲ್ಲಿದ್ದ ನಟ ದರ್ಶನ್ ಆಪ್ತರಿಗೆ ಹಣವನ್ನು ತೋರಿಸಿ ಬಾಡಿಯನ್ನು ಎಸೆದು ಸರೆಂಡರ್ ಆಗುವಂತೆ ಕಾರ್ತಿಕ್ ಅಂಡ್ ಟೀಮ್‌ಗೆ ಸೂಚನೆ ಒಪ್ಪಿಸಲಾಗಿತ್ತು. ಜೊತೆಗೆ, ನೀವು ಅರೆಸ್ಟ್ ಆಗಿ, ಕೋರ್ಟ್ ಖರ್ಚು ನಿಮಗೆ ಜಾಮೀನು ನೀಡಿ ಹೊರಗೆ ಕರೆಸಿಕೊಳ್ಳುವ ಖರ್ಚು ಎಲ್ಲವನ್ನು ನೋಡಿಕೊಳ್ಳುತ್ತೆವೆ. ನೀವು ಪೊಲೀಸರಿಗೆ ಸರೆಂಡರ್ ಆಗಿ, ನಂತರ ಹಣ ಕೊಡ್ತೀವಿ ಎಂದು ಕಾರ್ತಿಕ್ ಮತ್ತು ಸಹಚರರಿಗೆ ಪ್ರದೋಶ್ ಒಪ್ಪಿಸಿದ್ದನು. ಅದ್ರಂತೆ ಒಟ್ಟು 30 ಲಕ್ಷ ರೂ. ನಗದು ಹಣವನ್ನು ಪ್ರದೋಶ್ ತನ್ನ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದನು. 

ರೇಣುಕಾಸ್ವಾಮಿ ಕೊಲೆ ಆರೋಪಿಗಳು 13ರಲ್ಲ 17 ಮಂದಿ, ನಾಪತ್ತೆಯಾದವರ ಪೈಕಿ ಇನ್ನೂ ಒಬ್ಬಳಿದ್ದಾಳೆ ಕಿಲಾ(ಲೇ)ಡಿ?

ಇನ್ನು ಪೊಲೀಸರು ತನಿಖೆ ವೇಳೆ ಪ್ರದೋಶ್ ಇಟ್ಟಿದ್ದ ಸ್ಥಳಕ್ಕೂ ಹೋಗಿದ್ದಾರೆ. ನಂತರ ಸ್ಥಳ ಹಣವಪಂಚನಾಮೇ ಮಾಡಿ  ಮೂವತ್ತು ಲಕ್ಷ ರೂ. ಹಣವನ್ನು ರಿಕವರಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕೊಲೆ ಮಾಡಿದ ನಂತರ ಅದನ್ನು ಬೇರೆಯವರಿಗೆ ದುಡ್ಡಕೊಟ್ಟು ಅವರ ಮೇಲೆ ಕೇಸನ್ನು ಎತ್ತಿಹಾಕಿ ತಾನು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ ಎಂಬುದು ತಿಳಿದುಬಂದಿದೆ. ದರ್ಶನ್ ಹಣ ನೀಡಿದ್ದು, ಕೇಸ್ ನಲ್ಲಿ ದರ್ಶನ್ ವಿರುದ್ದ ಸಿಕ್ಕ ಬಿಗ್ಗೆಸ್ಟ್ ಎವಿಡೆನ್ಸ್ ಆಗಿದೆ. ಕೊಲೆ ನಡೆದ ಬಳಿಕ ರಾಘವೇಂದ್ರ, ನಿಕಿಲ್, ಕಾರ್ತಿಕ್ ಹಾಗೂ ಕೇಶವಮೂರ್ತಿ ಮೊದಲು ಸರಂಡರ್ ಆಗಿದ್ದರು.

ರೇಣುಕಾಸ್ವಾಮಿ ಕೊಲೆಯ ಘಟನೆ ನಡೆದಿದ್ದು ಹೇಗೆ?
ಚಿತ್ರದುರ್ಗದಲ್ಲಿ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಶುಕ್ರವಾರ ರಜೆಯಲ್ಲಿದ್ದನು. ಶನಿವಾರ ಡ್ಯೂಟಿಗೆ ಹೋಗುವ ಮುನ್ನ ಮನೆಯಲ್ಲಿ ಚಹಾ ಸೇವಿಸಿ ಹೋಗಿದ್ದನು ವಾಪಸ್ ಮನೆಗೆ ಬರಲಿಲ್ಲ. ಶನಿವಾರ ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿದ ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ನಂದೀಶ್ ಸೇರಿ 4 ಜನರಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ನಂತರ, ದರ್ಶನ್ ಗ್ಯಾಂಗ್ ಸೂಚನೆ ಮೇರೆಗೆ ಪಟ್ಟಣಗೆರೆ ಬಳಿಯ ಶೆಡ್‌ನಲ್ಲಿ ಇಡಲಾಗಿದೆ.

ರೇಣುಕಾಸ್ವಾಮಿಯನ್ನು ಶನಿವಾರ ಸಂಜೆ 6 ಗಂಟೆ ವೇಳೆಗೆ ಪವನ್, ನಂದೀಶ್, ಪ್ರದೋಶ್, ಕಾರ್ತೀಕ್ ಸೇರಿ ಎಲ್ಲರೂ ಹಲ್ಲೆ ಮಾಡಿದ್ದರು. ಆತನ ಕಾಲು ಹಿಡಿದು ಗೊಡೆಗೆ ಹೊಡೆದಿದ್ದ ಆರೋಪಿಗಳು. ಅದಾದ ಬಳಿಕ ದರ್ಶನ್ ಶೆಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅಸಲಿಗೆ ರೇಣುಕಾಸ್ವಾಮಿ ಸಾವನ್ನಪ್ಪಿದ್ದೆ ದರ್ಶನ್ ಏಟಿಗೆ ಎಂದು ಹೇಳಲಾಗುತ್ತಿದೆ. ದರ್ಶನ್ ಬೆಲ್ಟ್ ಹೊಡೆದು ಹಾಗೂ ಕಾಲಿನಿಂದ ಕೆಳಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಹಿಗ್ಗಾಮುಗ್ಗ ಥಳಿಸಿ ಶೆಡ್ ನಿಂದ ಹೊರಟ ಸ್ವಲ್ಪ ಹೊತ್ತಿನಲ್ಲಿ ರೇಣುಕಾಸ್ವಾಮಿ  ಪ್ರಾಣ ಬಿಟ್ಟಿದ್ದಾನೆಂದು ತಿಳಿದುಬಂದಿದೆ.

ದೇವಾಲಯದ ಮಂಗಳಾರತಿ ತಟ್ಟೆ ದೀಪದಲ್ಲಿ ಸಿಗರೇಟ್ ಹಚ್ಚಿಕೊಂಡು ಸೇದಿದ ಯುವತಿ

ಇನ್ನು ದರ್ಶನ್ ಮನೆಗೆ ಹೋಗುವ ವೇಳೆಗೆ ಹಲ್ಲೆಗೊಳಗಾದ ರೇಣುಕಾಸ್ವಾಮಿ ಸಾವನ್ನಪ್ಪಿರುವ ವಿಷಯ ತಿಳಿಯುತ್ತದೆ. ನಂತರ, ಮೂವರನ್ನ ಶರಣಾಗತಿ ಮಾಡಿ ಹಣ ನೀಡಲು ಪ್ಲಾನ್ ಮಾಡಲಾಗಿದೆ. ಪ್ರದೋಶ್ ಗೆ ಹಣ ತಲುಪಿದ ನಂತರವೇ ಬಾಡಿ ಡಿಸ್ಪೋಸ್ ಮಾಡಲಾಯ್ತು. ಸಂಜೆ 6.30 ಕ್ಕೆ ಸಾವನ್ನಪ್ಪಿದ ರೇಣುಕಾಸ್ವಾಮಿ ಬಾಡಿ ರಾತ್ರಿ 1.30ಕ್ಕೆ ಶಿಫ್ಟ್ ಮಾಡಲಾಗಿತ್ತು. ನಂತರ ಬೆಳಗ್ಗೆ 5 ಗಂಟೆ ವೇಳೆಗೆ ಆರೋಪಿಗಳು ಕಾಪಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸರೆಂಡರ್ ಆಗಿದ್ದಾರೆ. ಮುಂದೆ ಪೊಲೀಸರು ವಿಚಾರಣೆ ನಡೆಸಿ ಮೊಬೈಲ್ ಪರಿಶೀಲನೆ ಮಾಡಿದಾಗ ನಟ ದರ್ಶನ್ ಪಾತ್ರ ಇರುವುದು ತಿಳಿದುಬಂದಿದೆ.

click me!