ನಟ ದರ್ಶನ್ ಕೊಲೆ ಕೇಸ್; ಕೋರ್ಟ್‌ ವಿಚಾರಣೆಗೆ ಮುನ್ನವೇ ಜಾಮೀನು ಅರ್ಜಿ ವಾಪಸ್ ಪಡೆದ ವಕೀಲರು

By Sathish Kumar KH  |  First Published Jul 8, 2024, 1:08 PM IST

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಆರೋಪಿ ನಟ ದರ್ಶನ್‌ ಅಂಡ್ ಗ್ಯಾಂಗ್‌ನ ಸಹಚರ ನಿಖಿಲ್ ನಾಯಕ್‌ನ ಜಾಮೀನು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಮುನ್ನವೇ ವಕೀಲರು ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.


ಬೆಂಗಳೂರು (ಜು.08): ರಾಜ್ಯದಲ್ಲಿ ಕಳೆದೊಂದು ತಿಂಗಳಿಂದ ಮುನ್ನೆಲೆಗೆ ಬಂದಿರುವ ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಜನರು ಜೈಲು ಸೇರಿದ್ದಾರೆ. ಈ ಪೈಕಿ ದರ್ಶನ್ ಗ್ಯಾಂಗ್‌ನ ಸಹಚರ ನಿಖಿಲ್ ನಾಯಕ್ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಕುರಿತು ಇಂದು ಮಧ್ಯಾಹ್ನ 3 ಗಂಟೆಗೆ (ಜು.08ರ ಸೋಮವಾರ) ಕೋರ್ಟ್‌ನಲ್ಲಿ ವಿಚಾರಣೆಯಿತ್ತು. ಆದರೆ, ಜಾಮೀನು ಅರ್ಜಿ ವಿಚಾರಣೆಗೂ ಮುನ್ನವೇ ಆರೋಪಿ ನಿಖಿಲ್ ನಾಯಕ್ ಪರ ವಕೀಲರು ಜಾಮೀನಿ ಅರ್ಜಿ ವಾಪಸ್ ಪಡೆದುಕೊಂಡಿದ್ದಾರೆ.

ಹೌದು, ನಟ ದರ್ಶನ್ ಗ್ಯಾಂಗ್‌ನಿಂದ  ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವಿಚಾರಣೆಗೆ ಮುನ್ನವೇ ಜಾಮೀನು ಅರ್ಜಿಯನ್ನು ಆರೋಪಿ ಪರ ವಕೀಲರು  ವಾಪಸ್ಸು ಪಡೆದಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಿನ ಎ17 ಆರೋಪಿ ನಿಖಿಲ್ ನಾಯಕ್ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿಲ್ಲ. ಆತ ಅಭಿಮಾನ ಹಾಗೂ ಇತರೆ ಕಾರಣಕ್ಕೆ ಕಟ್ಟುಬಿದ್ದು, ಶವ ಬೀಸಾಡಲು ಮುಂದಾಗಿದ್ದನು. ಆದ್ದರಿಂದ ನಿಖಿಲ್‌ಗೆ ಜಾಮೀನು ಮಂಜೂರು ಮಾಡಬೇಕು ಎಂದು ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದರು. ಶನಿವಾರ ಈ ಅರ್ಜಿ ವಿಚಾರಣೆ ಮಾಡಿದ್ದ ನ್ಯಾಯಾಲಯದ ಮುಂದೆ ಆರೋಪಿ ಪರ ವಕೀಲರು ವಾದ ಮಂಡಿಸಲು ಮತ್ತಷ್ಟು ದಿನ ಕಾಲಾವಕಾಶ ನೀಡುವಂತೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಸೋಮವಾರ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದ್ದರು.

Tap to resize

Latest Videos

ಪವಿತ್ರಾ ಗೌಡಳನ್ನ ಕಣ್ಣೆತ್ತಿಯೂ ನೋಡೋ ಹಾಗಿಲ್ಲ..! ಕುಟುಂಬಸ್ಥರ ಕಂಡೀಷನ್‌ಗೆ ಒಪ್ಪಿದ್ರಾ ದರ್ಶನ್‌..?

ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ಅವರು ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಯಾವುದೇ ಆರೋಪಿಗೆ ಚಾರ್ಜ್ ಶೀಟ್ ಸಲ್ಲಿಕೆ ಆಗುವವರೆಗೂ ಯಾವುದೇ ಜಾಮೀನು ಲಭ್ಯವಾಗುವಂತೆ ವಾದ ಮಂಡಿಸುವಲ್ಲಿ ಸಫಲರಾಗಿದ್ದರು. ಇನ್ನು ಕೆಲವರಿಗೆ ಜಾಮೀನು ಪಡೆಯಲು ಸಾಧ್ಯವಾಗದ ರೀತಿಯಲ್ಲಿ ಅವರ ಅಪರಾಧ ಕೃತ್ಯಕ್ಕೆ ಸಂಬಂದಿಸಿದಂತೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಇಂದು ಮಧ್ಯಾಹ್ನ 3 ಗಂಟೆಗೆ ನಿಖಿಲ್ ನಾಯಕ್ ಅರ್ಜಿ ವಿಚಾರಣೆ ಮಾಡಬೇಕಿತ್ತು. ಇದಕ್ಕೂ ಮುನ್ನವೇ ನಿಖಿಲ್ ನಾಯಕ್‌ ಪರ ವಕೀಲರು ಬೆಳಗ್ಗೆಯೇ ಬಂದು ನ್ಯಾಯಾಲಯಲ್ಲಿ ಜಾಮೀನಿ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.

ಜಿಮ್‌ನಲ್ಲಿ ವರ್ಕೌಟ್ ಮಾಡೋ ವೀಡಿಯೋ ಹಂಚಿಕೊಂಡ ಮೇಘಾ ಶೆಟ್ಟಿ, 'ಡಿ ಬಾಸ್' ಬಗ್ಗೆ ಮಾತಾಡಿ ಎಂದ ದರ್ಶನ್ ಫ್ಯಾನ್ಸ್!

ರೇಣುಕಾಸವಾಮಿ ಕೊಲೆ ಕೇಸಿನಲ್ಲಿ ನಿಖಿಲ್ ನಾಯಕ್ ಪಾತ್ರವೇನು?  
ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ನಲ್ಲಿ ಹತ್ಯೆ ಬಳಿಕ ಸುಮನಹಳ್ಳಿ ಜಂಕ್ಷನ್‌ ಸಮೀಪದ ಮೋರಿಗೆ ಮೃತದೇಹ ತಂದು ಬಿಸಾಡಿದ ಹಾಗೂ ನಟ ದರ್ಶನ್‌ ಹೆಸರು ಹೇಳದಂತೆ ಪೊಲೀಸರಿಗೆ ಶರಣಾದವರ ಪೈಕಿ ನಿಖಲ್ ನಾಯಕ್ (21) ಸಹ ಒಬ್ಬನಾಗಿದ್ದಾನೆ. ಈತ ಕೂಡ ದರ್ಶನ್‌ ತಂಡಕ್ಕೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್‌ ಮೂಲಕ ಸೇರಿದ್ದಾನೆ. ರೇಣುಕಾಸ್ವಾಮಿ ಹತ್ಯೆ ಬಳಿಕ ಪವನ್‌, ನಿಖಿಲ್‌ಗೆ ಕರೆ ಮಾಡಿ ಶೆಡ್‌ ಬಳಿಗೆ ಕರೆಸಿಕೊಂಡಿದ್ದ. ಅಲ್ಲದೆ ಮೊದಲಿನಿಂದಲೂ ನಿಖಲ್ ಸಹ ದರ್ಶನ್ ಅಭಿಮಾನಿಯಾಗಿದ್ದ. ಬಳಿಕ ನಿಖಲ್‌ಗೆ 5 ಲಕ್ಷ ರೂ. ಹಣ ಕೊಡುವುದಾಗಿ ಹೇಳಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗುವಂತೆ ದರ್ಶನ್ ಆಪ್ತ ಮಾಡಿದ್ದರು. ಆದರೆ ವಿಚಾರಣೆ ವೇಳೆ ಆತ ದರ್ಶನ್ ಹೆಸರು ಬಾಯ್ಬಿಟ್ಟಿದ್ದ ಎನ್ನಲಾಗಿದೆ.

click me!