ಬೆಂಗಳೂರಿನ ವಿವಿ ಪುರಂನಲ್ಲಿರುವ ಪ್ರತಿಷ್ಠಿತ ಕಾಲೇಜೊಂದರ ಮುಂದೆ ನಿಂತಿದ್ದ ಹುಡುಗಿಯರ ಮುಂದೆ ಕಾಮುಕ ವ್ಯಕ್ತಿಯೊಬ್ಬ ಪ್ಯಾಂಟ್ ಜಿಪ್ ತೆಗೆದು ಪ್ರೈವೇಟ್ ಪಾರ್ಟ್ ತೋರಿಸಿರುವ ಅಸಹ್ಯಕರ ಘಟನೆ ನಡೆದಿದೆ.
ಬೆಂಗಳೂರು (ಜು.8): ಬೆಂಗಳೂರಿನ ವಿವಿ ಪುರಂನಲ್ಲಿರುವ ಪ್ರತಿಷ್ಠಿತ ಕಾಲೇಜೊಂದರ ಮುಂದೆ ನಿಂತಿದ್ದ ಹುಡುಗಿಯರ ಮುಂದೆ ಕಾಮುಕ ವ್ಯಕ್ತಿಯೊಬ್ಬ ಪ್ಯಾಂಟ್ ಜಿಪ್ ತೆಗೆದು ಪ್ರೈವೇಟ್ ಪಾರ್ಟ್ ತೋರಿಸಿರುವ ಅಸಹ್ಯಕರ ಘಟನೆ ನಡೆದಿದೆ.
ಕಾಲೇಜು ಮುಂಭಾಗ ನಿಂತಿದ್ದ ಹುಡುಗಿಯರ ಗುಂಪಿನ ಬಳಿ ಸ್ಕೂಟರ್ ನಲ್ಲಿ ಬಂದ ವ್ಯಕ್ತಿ ಪ್ಯಾಂಟ್ ಜಿಪ್ ತೆಗೆದು ಪ್ರೈವೇಟ್ ಪಾರ್ಟ್ ತೋರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ವಿಡಿಯೋವನ್ನು ಟ್ಯಾಗ್ ಮಾಡಿ ಇಂತವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಲವ್ ಬೇರೆ, ಮದುವೆ ಬೇರೆ, ಒಂದೇ ರೂಂನಲ್ಲಿ ಸಂಸಾರ ಆರಂಭಿಸಿದಾಗಲೇ ಎಲ್ಲವೂ ಗೊತ್ತಾಗೋದು: ಚಂದನ್ ಶೆಟ್ಟಿ
ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇದು ನಾಚಿಕೆಗೇಡಿನ ಸಂಗತಿ ಆತನನ್ನು ಆದಷ್ಟು ಬೇಗ ಬಂಧಿಸಬೇಕು. ಆತನ ಗಾಡಿಯ ಸಂಖ್ಯೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ ಬೇಕೆಂದೆ ಆರಂಭದ ಎರಡು ನಂಬರ್ ಅನ್ನು ಮುಚ್ಚಿದ್ದಾನೆ ಎಂದು ಶೀಘ್ರ ಬಂಧನಕ್ಕೆ ಒತ್ತಾಯಿಸಿದ್ದಾರೆ.
ದುಬೈನಲ್ಲಿ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಂಡದ್ದಕ್ಕೆ ದರ್ಶನ್ ಜತೆ ಮಾತು ಬಿಟ್ಟಿದ್ದ ಪವಿತ್ರಾ ಗೌಡ!
ಮತ್ತೊಬ್ಬರು ಕಮೆಂಟ್ ಮಾಡಿ, ಹುಡುಗಿಯರಿಗೆ ತುಂಬಾ ಸಾರಿ ಹೀಗೆ ಆಗ್ತಿದೆ, ನಮ್ಮ ಮನೆಯ ಹತ್ತಿರ ಹುಡುಗಿಯರು ಈ ತರಹದ ಸನ್ನಿವೇಶಗಳನ್ನು ಎದುರಿಸಿದ್ದಾರೆ ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.