ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಜೂ.4): ಬೆಳಗಾವಿ ತಾಲೂಕಿನ ದೇಸೂರು ಗ್ರಾಮದ ರೇಲ್ವೆ ನಿಲ್ದಾಣದ ಬಳಿಯ ಗೋದಾಮಿನಿಂದ 900 ಚೀಲ RCF ಕಂಪನಿಯ DAP ರಸಗೊಬ್ಬರ ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಸ್ಟರ್‌ಮೈಂಡ್ ನಾಗರಾಜ ಈರಣ್ಣ ಪಠಾತ್, ಪಂಡಿತ್ ಸನದಿ ಲಾರಿ ಚಾಲಕರಾದ ವಸೀಂ ಮಕಾಂದಾರ್, ಮಂಜುನಾಥ ಹಮ್ಮನ್ನವರ್, ಗಜಬರ ಅಲಿ ಜಿಡ್ಡಿಮನಿಯನ್ನು ಬಂಧಿಸಿದ್ದು, ಎರಡು ಲಾರಿಗಳನ್ನು ಜಪ್ತಿ ಮಾಡಿದ್ದಾರೆ. 10 ಲಕ್ಷ 93 ಸಾವಿರದ 500 ಮೌಲ್ಯದ 810 ಚೀಲ ಡಿಎಪಿ ರಸಗೊಬ್ಬರ, ಹಾಗೂ ರಸಗೊಬ್ಬರ ಸಾಗಿಸಲು ಬಳಸಿದ್ದ 15 ಲಕ್ಷ ಮೌಲ್ಯದ ಎರಡು ಲಾರಿಗಳು ಸೇರಿ ಒಟ್ಟು ಒಟ್ಟು 25 ಲಕ್ಷ 93 ಸಾವಿರದ 500 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಷ್ಟಕ್ಕೂ ಘಟನೆ ನಡೆದಿದ್ದು ಹೇಗೆ?: ಬೆಳಗಾವಿ ತಾಲೂಕಿನ ದೇಸೂರು ರೇಲ್ವೆ ನಿಲ್ದಾಣಕ್ಕೆ ಗೂಡ್ಸ್ ರೈಲಿನಲ್ಲಿ ದೇಶದ ವಿವಿಧೆಡೆಯಿಂದ ಸರಕು ಆಗಮಿಸುತ್ತೆ. ಸರಕು ಲೋಡಿಂಗ್ ಅನ್‌ಲೋಡಿಂಗ್ ಮಾಡಿ ಬಳಿಕ ಗೋದಾಮಿನಲ್ಲಿ ಇರಿಸಲಾಗುತ್ತೆ.
ಮಠಾಧೀಶರ ಹೋರಾಟ ತಡೆದರೆ ರಾಜ್ಯಕ್ಕೆ ಬೆಂಕಿ ಹತ್ತುತ್ತೆ : Pramod Muthalik ಎಚ್ಚರಿಕೆ
ದೇಸೂರು ರೇಲ್ವೆ ನಿಲ್ದಾಣ ಬಳಿಯ ಸಾಗರ್ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಗೋದಾಮಿನಲ್ಲಿ ಇರಿಸಿದ್ದ 900 ಚೀಲ ರಸಗೊಬ್ಬರ ನಾಪತ್ತೆಯಾಗಿತ್ತು. ಮೇ 17ರಂದು ಸಾಗರ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಗೋದಾಮಿನಲ್ಲಿ 72,600 RCF-DAP ರಸಗೊಬ್ಬರ ಚೀಲಗಳ ಸಂಗ್ರಹವಾಗಿತ್ತು.
ಈ ವೇಳೆ RCF-DAP ರಸಗೊಬ್ಬರ ಚೀಲಗಳನ್ನು ಸರಬರಾಜು ಸಹ ಮಾಡಲಾಗಿರುತ್ತೆ. ಕೊನೆಗೆ ಪರಿಶೀಲನೆ ನಡೆಸುವಾಗ 900 ಚೀಲಗಳು ಕಡಿಮೆ ಇರೋದು ಗೊತ್ತಾಗುತ್ತೆ. ಈ ವೇಳೆ ಯಾರೋ ರಸಗೊಬ್ಬರ ಚೀಲಗಳನ್ನು ಕದ್ದಿದ್ದಾರೆ ಎಂದು ಮೇ 23ರಂದು ಬೆಳಗಾವಿ ಗ್ರಾಮೀಣ ಠಾಣೆಗೆ ಗೋದಾಮಿನ ಮ್ಯಾನೇಜರ್ ಶಿವಾಜಿ ಆನಂದಾಚೆ ದೂರು ನೀಡಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿರುತ್ತಾರೆ.
UDUPI; ಕೊಲ್ಲೂರು ಕ್ಷೇತ್ರದ ಸುತ್ತಲೂ ಕೊಳಚೆ, ಭಕ್ತರಿಗೆ ಬೇಸರ
ಇನ್ನು ಆರೋಪಿಗಳು ಗೋದಾಮಿನಲ್ಲಿ ಸಂಗ್ರಹವಿದ್ದ 72,609 ಚೀಲಗಳಲ್ಲಿ 1000 ಚೀಲ ಕದ್ರೆ ಗೊತ್ತಾಗಲ್ಲ ಅಂತಾ ಅಂದುಕೊಂಡಿದ್ದರು. ತಾವು ಮಾಡಿದ ಪ್ಲ್ಯಾನ್‌ನಂತೆ ಎರಡು ಲಾರಿಗಳಲ್ಲಿ 900 ಚೀಲ ಗೊಬ್ಬರ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಆದ್ರೆ ಪೊಲೀಸರ ತನಿಖೆ ವೇಳೆ ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ಐವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.