ಕೇವಲ 1 ರೂ. ಆಸೆ ತೋರಿಸಿ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

By Kannadaprabha News  |  First Published Nov 4, 2021, 10:15 AM IST

*   ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಐದು ವರ್ಷದ ಬಾಲಕಿ ಮೇಲೆ ರೇಪ್‌
*   ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ
*   ಹೆದ್ದಾರಿಯಲ್ಲಿ ದೊಂದಿ ಉರಿಸಿ ದಾರಿದೀಪಕ್ಕಾಗಿ ಆಗ್ರಹ


ಗಂಗಾವತಿ/ಬೆಳ್ತಂಗಡಿ(ನ.04): ರಾಜ್ಯದ(Karnataka) ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಐದು ವರ್ಷದ ಬಾಲಕಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಘಟನೆ ನಿನ್ನೆ(ಬುಧವಾರ) ನಡೆದಿದೆ. 

ಕೊಪ್ಪಳ(Koppal) ಜಿಲ್ಲೆಯ ಗಂಗಾವತಿ(Gangavati) ತಾಲೂಕಿನಲ್ಲಿ ಐದು ವರ್ಷದ ಬಾಲಕಿ(Girl) ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸುರೇಶ(38) ಎಂಬಾತನನ್ನು ಬಂಧಿಸಲಾಗಿದೆ(Arrest). ಕಳೆದ ಎರಡು ದಿನಗಳ ಹಿಂದೆ ಸುರೇಶ ಒಂದು ರುಪಾಯಿ ಆಸೆ ತೋರಿಸಿ ಬಾಲಕಿಯನ್ನು ನಗರದ ಹೊರ ವಲಯಕ್ಕೆ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬಾಲಕಿ ಪೋಷಕರು(Parents) ನೀಡಿದ್ದ ದೂರಿನ(Complaint) ಮೇರೆಗೆ, ಪೋಸ್ಕೋ ಕಾಯ್ದೆಯಡಿ ಆರೋಪಿಯನ್ನು(Accused) ಬಂಧಿಸಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

Tap to resize

Latest Videos

ಪ್ರಸಾದವೆಂದು ನಿದ್ದೆ ಮಾತ್ರೆ ಕೊಡ್ತಿದ್ದ 'ದೇವಮಾನವ' ಮಾಡ್ತಿದ್ದ ಹೀನ ಕೆಲಸ!

ಬಾಲಕಿ ಮೇಲೆ ನಿರಂತರ ಅತ್ಯಾ​ಚಾ​ರ; ಪೋಕ್ಸೋ ಕೇಸ್‌ ದಾಖ​ಲು

ಬೆಳ್ತಂಗಡಿ(Belthangady): ಶಾಲಾ ಬಾಲಕಿಯನ್ನು ಪರಿಚಯ ಮಾಡಿಕೊಂಡ ಯುವಕನೋರ್ವ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಚಿತ್ರಗಳನ್ನು ಸೆರೆಹಿಡಿದು ಬಳಿಕ ಬೆದರಿಸಿ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಬಗ್ಗೆ ದಕ್ಷಿಣ ಕನ್ನಡ(Dakshina Kannada ) ಜಿಲ್ಲೆಯ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ನೌಫಾಲ್‌ ಎಂಬಾತನನ್ನು ಬಂಧಿಸಿದ್ದಾರೆ.

ತಾಲೂಕಿನ ರೆಖ್ಯ ಗ್ರಾಮದ ಬಾಲಕಿ ಶಾಲೆಗೆ ಹೋಗುತ್ತಿದ್ದ ವೇಳೆ 2018ರಲ್ಲಿ ಪರಿಚಯವಾದ ನೆಲ್ಯಾಡಿಯ ಹೊಸಮಜಲು ನಿವಾಸಿ ನೌಫಾಲ್‌ ಎಂಬಾತ ಪರಿಚಯವಾಗಿದ್ದು ಈತ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರ ನಡೆಸಿದ್ದಾನೆ. ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡ ಆತ ಅದನ್ನು ತೋರಿಸಿ ಬೆದರಿಸಿ ಹಲವು ಬಾರಿ ಅತ್ಯಾಚಾರ ನಡೆಸಿರುವುದಾಗಿ ಬಾಲಕಿ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರನ್ನು ಸ್ವೀಕರಿಸಿದ ಪೊಲೀಸರು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

8 ತಿಂಗಳ ಸಲುಗೆ, ಶಿಕ್ಷಕಿ ಅಪಹರಿಸಿ ಅತ್ಯಾಚಾರ ಎಸೆಗಿದ ಫೇಸ್‌ಬುಕ್ ಗೆಳೆಯ!

ಹೆದ್ದಾರಿಯಲ್ಲಿ ದೊಂದಿ ಉರಿಸಿ ದಾರಿದೀಪಕ್ಕಾಗಿ ಆಗ್ರಹ

ಉಡುಪಿ(Udupi)-ಪರ್ಕಳ ರಾಷ್ಟ್ರೀಯ ಹೆದ್ದಾರಿ(National Highway) 169ಎ ನಿರ್ಮಿಸಿ ಮೂರ್ನಾಲ್ಕು ವರ್ಷಗಳಾದರೂ ಇನ್ನೂ ದಾರಿದೀಪ ಅಳವಡಿಸದಿರುವುದನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮಂಗಳವಾರ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿತು.

ಎಂ.ಜಿ.ಎಂ. ಕಾಲೇಜು ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ನಲ್ಲಿ ಹತ್ತಾರು ದೊಂದಿ ದೀಪಗಳನ್ನು ನೆಟ್ಟು, ಇನ್ನಾದರೂ ರಾತ್ರಿ ಸಾವಿರಾರು ವಾಹನಗಳು ಓಡಾಡುವ ಈ ರಾ.ಹೆ.ಯಲ್ಲಿ ದಾರಿದೀಪಗಳನ್ನು ಅಳವಡಿಸಿ ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಮೊನ್ನೆ ಸಂಜೆಗತ್ತಲಲ್ಲಿ ಇಲ್ಲಿ ಮಹಿಳೆಯೊಬ್ಬರನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಪ್ರತಿನಿತ್ಯ ಮಕ್ಕಳು, ಮಹಿಳೆಯರು ಈ ಭಾಗದಲ್ಲಿ ಓಡಾಡುತ್ತಾರೆ. ಬೆಳಗಿನ ಹೊತ್ತು ನೂರಾರು ಮಂದಿ ಹಿರಿಯ ನಾಗರಿಕರಿಗೆ ಇಲ್ಲಿ ವಾಕಿಂಗ್‌ ನಡೆಸುತ್ತಾರೆ. ನೂರಾರು ವಿದ್ಯಾರ್ಥಿಗಳು(Students) ಬಸ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಾರೆ. ಹೆದ್ದಾರಿ ಪಕ್ಕದಲ್ಲಿ ಪೊದೆಗಿಡಗಂಟಿಗಳು ಬೆಳೆಸಿದ್ದು, ವಿಷ ಜಂತುಗಳಿಂದ ಅಪಾಯವಿದೆ ಎಂದರು. ಈ ಸಂದರ್ಭದಲ್ಲಿ ಲೇಖಕ ತಾರಾನಾಥ ಮೇಸ್ತ, ಕೆ.ಬಾಲಗಂಗಾಧರ್‌ ರಾವ್‌, ರಾಜೇಶ್‌ ಕಾಪು, ಗುರುರಾಜ್‌ ಆಚಾರ್ಯ ಉಪಸ್ಥಿತರಿದ್ದರು.
 

click me!