4 ತಿಂಗಳ ಮಗು ಸೇರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

By Kannadaprabha NewsFirst Published Nov 4, 2021, 8:01 AM IST
Highlights

*  ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ
*  ಚೆಕ್‌ಡ್ಯಾಂಗೆ ಹಾರಿ ವ್ಯಾಪಾರಿ ಆತ್ಮಹತ್ಯೆ
*  ಮೈಸೂರು ಬಸ್‌ ನಿಲ್ದಾಣದಲ್ಲಿ ಯುವತಿ ಆತ್ಮಹತ್ಯೆ

ಬೆಂಗಳೂರು(ನ.04): ಬೆಳಕಿನ ಹಬ್ಬ ದೀಪಾವಳಿ(Deepavali) ಹಬ್ಬದ ದಿನದಂದೇ ರಾಜ್ಯದಲ್ಲಿ ಐದು ಮಂದಿ ಆತ್ಮಹತ್ಯೆಗೆ ಶರಣಾದರೆ, ಇಬ್ಬರು ಮಕ್ಕಳಿಗೆ ವಿಷ(Poison) ಕುಡಿಸಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಹೌದು, ಗದಗ(Gadag) ಜಿಲ್ಲೆಯ ಗಜೇಂದ್ರಗಡ ತಾಲೂಕಿನ(Gajendragad) ನಾಗೇಂದ್ರಗಡ ಗ್ರಾಮದಲ್ಲಿ ಒಂದೇ ಮನೆಯಲ್ಲಿ ಮೂವರು ಸಾವಿಗೆ ಶರಣಾದ ಘಟನೆ ಬುಧವಾರ ನಡೆದಿದೆ.

ಗ್ರಾಮದ ಮಲ್ಲಪ್ಪ ಗೋವಿಂದಪ್ಪ ಗಡಾದ್‌(26), ಸುಧಾ ಮಲ್ಲಪ್ಪ ಗಡಾದ್‌(22) ಹಾಗೂ 4 ತಿಂಗಳ ಮಗು ಮೃತರು. ಗ್ರಾಮದ ತಮ್ಮ ಜಮೀನಿನಲ್ಲಿರುವ ಮನೆ ಬಾಗಿಲು ಒಳಗಿನಿಂದ ಹಾಕಿಕೊಂಡಿದ್ದು ಮಲ್ಲಪ್ಪ ಗಡಾದ್‌ ಕುತ್ತಿಗೆಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದು, ಪತ್ನಿ ಹಾಗೂ ಮಗು ಶವ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಗಜೇಂದ್ರಗಡ ಪೊಲೀಸರು(Police) ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದು, ಪೊಲೀಸ್‌ ತನಿಖೆಯಿಂದಲೇ(Investigation) ಘಟನೆ ವಿವರ ಹೊರಬರಬೇಕಿದೆ. ಸದ್ಯಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವಿರಬಹುದು ಎಂದು ಹೇಳಲಾಗಿದೆ.

ಪುನೀತ್‌ ನಿಧನ : ಮತ್ತಿಬ್ಬರು ಆತ್ಮಹತ್ಯೆ - 11ಕ್ಕೇರಿದ ಸಾವಿನ ಸಂಖ್ಯೆ

ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ಮಹಿಳೆ ಆತ್ಮಹತ್ಯೆಗೆ ಯತ್ನ

ಪತಿ ಕಿರುಕುಳಕ್ಕೆ ನೊಂದ ಪತ್ನಿ ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ವಿಜಯನಗರ(Vijayanagara) ಜಿಲ್ಲೆಯ ಕೂಡ್ಲಿಗಿ(Kudligi) ತಾಲೂಕಿನ ಗುಡೇಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಗಡ್ಡದ ಬೋರಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ.

ತಕ್ಷಣವೇ ಆಸ್ಪತ್ರೆಗೆ(Hospital) ಸೇರಿಸಿದ್ದರಿಂದ ತಾಯಿ- ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಬಳ್ಳಾರಿ(Ballari) ವಿಮ್ಸ್‌ನಲ್ಲಿ(VIMS) ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. ಮಂಗಳಮ್ಮ(28) ಹಾಗೂ ಅವರು ಇಬ್ಬರು ಹೆಣ್ಣುಮಕ್ಕಳಾದ ಸ್ವಪ್ನಾ(6)ಮತ್ತು ಚಂದನ(3) ವಿಷ ಸೇವಿಸಿದ್ದವರಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಬಳ್ಳಾರಿ ವಿಮ್ಸ್‌ನಲ್ಲಿ ಚೇತರಿಸಿಕೊಳ್ಳುತಿದ್ದಾರೆ. ಮಂಗಳಮ್ಮನ ತಂದೆ ಸಿದ್ದಪ್ಪ ಎಂಬಾತ 7 ವರ್ಷದ ಹಿಂದೆ ಅದೇ ಗ್ರಾಮದ ಭೀಮರಾಜನಿಗೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದನು. ಇಷ್ಟುವರ್ಷ ಅನ್ಯೋನ್ಯವಾಗಿ ಜೀವನ ನಡೆಸಿದ್ದರು. ಇತ್ತೀಚೆಗೆ ಭೀಮರಾಜನು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ನೊಂದು ಮಂಗಳಮ್ಮ ಆತ್ಮಹತ್ಯೆ ಯತ್ನಿಸಿದ್ದಾರೆ. ಮಂಗಳಮ್ಮನ ತಂದೆ ಸಿದ್ದಪ್ಪ ನೀಡಿದ ದೂರಿನಂತೆ ಗುಡೇಕೋಟೆ ಪೊಲೀಸ್‌ ಠಾಣೆಯ ಎಎಸ್‌ಐ ರವಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಸೂರು ಬಸ್‌ ನಿಲ್ದಾಣದಲ್ಲಿ ಪಾಂಡವಪುರ ತಾ. ಯುವತಿ ಆತ್ಮಹತ್ಯೆ

ಮೈಸೂರು(Mysuru) ಮಾತ್ರೆ ಸೇವಿಸಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗ್ರಾಮಾಂತರ ಬಸ್‌ ನಿಲ್ದಾಣ ಸಮೀಪ ನಡೆದಿದೆ. ಪಾಂಡವಪುರ ತಾಲೂಕು ಮೇದಿನಿ ಗ್ರಾಮದ ನಿವಾಸಿ ಚೈತ್ರಾ (25 ಆತ್ಮಹತ್ಯೆ ಮಾಡಿಕೊಂಡವರು. ಯುವತಿ ಒದ್ದಾಡುತ್ತಿದ್ದುದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವತಿಯನ್ನು ಕೆ.ಆರ್‌. ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ನಜರಬಾದ್‌ ಪೊಲೀಸರು ತಿಳಿಸಿದ್ದಾರೆ. ಯುವತಿ ತಂದೆ ಮಹದೇವಪ್ಪ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ನಜರಬಾದ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೆಚ್ಚು ಆತ್ಮಹತ್ಯೆ: ಕರ್ನಾಟಕ ನಂ.5 - ಮಹಾರಾಷ್ಟ್ರ ನಂ.1

ಚೆಕ್‌ಡ್ಯಾಂಗೆ ಹಾರಿ ವ್ಯಾಪಾರಿ ಆತ್ಮಹತ್ಯೆ

ಚೆಕ್‌ಡ್ಯಾಂಗೆ ಹಾರಿ ಬ್ಯಾಗ್‌ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ(Chitradurga) ಜಿಲ್ಲೆಯ  ಚಳ್ಳಕೆರೆ ತಾಲೂಕಿನ ಚೌಳೂರು ಚೆಕ್‌ಡ್ಯಾಂನಲ್ಲಿ ಬುಧವಾರ ನಡೆದಿದೆ. ಆಂಧ್ರಪ್ರದೇಶ(Andhra Pradesh) ಮೂಲದ ಚಿತ್ರನಹಟ್ಟಿಯ ವೈ.ಎ.ರಾಮಕೃಷ್ಣ (45) ಆತ್ಮಹತ್ಯೆ ಮಾಡಿಕೊಂಡ ವ್ಯಾಪಾರಿ. 

ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ (Accident) ಬಲಗೈ ಮೂಳೆ ಮುರಿದುಕೊಂಡಿದ್ದ ರಾಮಕೃಷ್ಣ, ನೋವಿನಿಂದ ಬಳಲುತ್ತಿದ್ದರು. ಇದರಿಂದ ಮದ್ಯವ್ಯಸನಿಯಾಗಿದ್ದ ಅವರು, ನೋವಿನಿಂದ ವಾಹನ ಸಮೇತ ಚೆಕ್‌ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ ಪರಶುರಾಮಪುರ ಪಿಎಸ್‌ಐ ಡಿ.ಸಿ.ಸ್ವಾತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!